ಬೆಡ್ ಬ್ಲಾಕಿಂಗ್ ದಂಧೆ | ಇಬ್ಬರು ವೈದ್ಯರ ಸಹಿತ 8 ಮಂದಿ ಸಿಸಿಬಿ ವಶಕ್ಕೆ

ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಬಯಲಿಗೆಳೆದಿರುವ ಬೆಡ್ ಬ್ಲಾಕಿಂಗ್ ದಂಧೆ ಪ್ರಕರಣದ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಸಿಸಿಬಿ ತನಿಖೆಗೆ ಆದೇಶಿಸಿದ್ದು, ಸಂಬಂಧಿಸಿದಂತೆ ಬೆಂಗಳೂರಿನ ಇಬ್ಬರು ಡಾಕ್ಟರ್ ಸೇರಿದಂತೆ 8 ಮಂದಿಯನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಿನ್ನೆಯೇ 8 ಮಂದಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿರುವ ಸಿಸಿಬಿ ಪೊಲೀಸರು ಇಬ್ಬರು ಬಿಬಿಎಂಪಿ ಡಾಕ್ಟರ್​ಗಳು, ಡೇಟಾ ಎಂಟ್ರಿ ಆಪರೇಟರ್​ಗಳು ಮತ್ತು ಅಸಿಸ್ಟೆಂಟ್​ಗಳನ್ನು ವಶಕ್ಕೆ ಪಡೆದಿದ್ದಾರೆ.

ಬೆಡ್ ದಂಧೆಯಲ್ಲಿ ಡಾಕ್ಟರ್ ಗಳ ಪಾತ್ರದ ಬಗ್ಗೆ ತನಿಖೆ ನಡೆಸಲಾಗಿದೆ. ಸದ್ಯ ಇಬ್ಬರು ಡಾಕ್ಟರ್ ಸೇರಿದಂತೆ 8 ಮಂದಿಯನ್ನು ಕೂಲಂಕುಷವಾಗಿ ವಿಚಾರಣೆ ನಡೆಸಿರುವ ಸಿಸಿಬಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಜಯನಗರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಜಯನಗರ ಪೊಲೀಸರಿಂದ ನೇತ್ರಾವತಿ ಮತ್ತು ರೋಹಿತ್ ಅವರನ್ನು ಬಂಧಿಸಲಾಗಿದೆ. 3 ಬೆಡ್ ಕೊಡಿಸಿ ಹಣ ವಸೂಲಿ ಮಾಡಿದ್ದ ಇಬ್ಬರು ಆರೋಪಿಗಳು ಒಟ್ಟು 1.7 ಲಕ್ಷ ರೂ. ವಸೂಲಿ ಮಾಡಿದ್ದರು. ಎರಡು ಬೆಡ್ ಗೆ ತಲಾ 40,000 ರೂ. ಮತ್ತೊಂದು ಬೆಡ್ ಗೆ 27,000 ರೂ. ವಸೂಲಿ ಮಾಡಿದ್ದ ಆರೋಪಿಗಳು ಈಗ ಪೊಲೀಸರ ವಶದಲ್ಲಿದ್ದಾರೆ.

Leave A Reply

Your email address will not be published.