ಕೊರೋನಾದಿಂದ ತನ್ನ ತಂದೆ ಮೃತಪಟ್ಟ ನೋವಲ್ಲಿ ಉರಿಯುತ್ತಿರುವ ತಂದೆಯ ಚಿತೆಗೆ ಹಾರಿಕೊಂಡ ಆಕೆಯ ಮಗಳು
ಕೊರೊನಾದಿಂದ ತನ್ನ ತಂದೆ ಮೃತಪಟ್ಟಿದ್ದರಿಂದ ಮನನೊಂದ ಮಗಳು ತಂದೆಯ ಚಿತಗೇ ಹಾರಿರುವ ಆಘಾತಕಾರಿ ಘಟನೆ ರಾಜಸ್ಥಾನದ ಬಾರ್ಮರ್ ನಲ್ಲಿ ನಡೆದಿದೆ.
73 ವರ್ಷದ ತಂದೆ ದಾಮೋದರ ದಾಸ್ ಅವರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದರು. ತಂದೆಯ ಮೇಲೆ ಅಪಾರ ಪ್ರೀತಿಯ ಮಗಳು ಚಂದ್ರಾ. ಆಕೆ ತನ್ನ ಅಂತ್ಯಸಂಸ್ಕಾರ ನಡೆಯುತ್ತಿರುವ ವೇಳೆ ಉರಿಯುತ್ತಿರುವ ಚಿತೆಗೇ ಹಾರಿ ಪ್ರಾಣ ಕಳೆದುಕೊಳ್ಳಲು ಯತ್ನಿಸಿದ್ದಾಳೆ.
ಚಿತೆಗೆ ಜಿಗಿದ ಚಂದ್ರಾಳನ್ನು ಸಂಬಂಧಿಕರು ಆ ಕೂಡಲೇ ಹೊರಗೆಳೆದಿದ್ದಾರೆ. ಆದರೆ ಆ ಕೂಡಲೇ ಆಕೆಯ ದೇಹದ ಶೇ.70 ರಷ್ಟು ಭಾಗ ಸುಟ್ಟುಹೋಗಿತ್ತು. ಆಕೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದು,70 ಪ್ರತಿಶತ ಸುಟ್ಟು ಹೋದ ಕಾರಣ ಬದುಕುವುದು ಕಷ್ಟ ಎನ್ನಲಾಗುತ್ತಿದೆ.