ದೇಶದಲ್ಲಿ ಟೋಟಲ್ ಲಾಕ್ ಡೌನ್ ಇಲ್ಲ | ನಿಟ್ಟುಸಿರಿಟ್ಟ ಭಾರತ !!

ಕೊರೊನಾ ಎರಡನೇ ಅಲೆಗೆ ಭಾರತ ಅಕ್ಷರಶ: ತತ್ತರಿಸಿದ್ದು, ಮಾರಕ ವೈರಾಣುವನ್ನು ಸೋಲಿಸಲು ಭಾರತವನ್ನು ಮತ್ತೆ ಸಂಪೂರ್ಣವಾಗಿ ಲಾಕ್‌ಡೌನ್ ಮಾಡಬೇಕು ಎಂಬ ಆಗ್ರಹ ಕೂಡ ಕೇಳಿ ಬಂದಿತ್ತು. ಈ ಮಧ್ಯೆ ಪ್ರಧಾನಿ ಮೋದಿ ಲಾಕ್‌ಡೌನ್ ನಿರ್ಧಾರ ಕೈಗೊಳ್ಳುವ ಒತ್ತಡದಲ್ಲಿದ್ದರು.

ಅದರಂತೆ ಇಂದು ಮಹತ್ವದ ಕೇಂದ್ರದ ಕ್ಯಾಬಿನೆಟ್ ಸಚಿವ ಸಂಪುಟ ಸಭೆ ನಡೆದಿದೆ. ಅಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಈಗ ದೇಶದಲ್ಲಿ ಟೋಟಲ್ ಇಲ್ಲ ಎಂದು ಕೇಂದ್ರ ಸರಕಾರ ಘೋಷಿಸಿದೆ. ಲಾಕ್ ಡೌನ್ ಇಲ್ಲ ಎಂದು ನರೇಂದ್ರ ಮೋದಿ ಅವರು ಸ್ಪಷ್ಟಪಡಿಸಿದ್ದಾರೆ. ಲಾಕ್ಡೌನ್ ಮಾಡುವ ನಿರ್ಧಾರವನ್ನು ಆಯಾ ರಾಜ್ಯಗಳಿಗೆ ಬಿಟ್ಟಿದ್ದಾರೆ.

ಈ ಮಧ್ಯೆ ಕೇಂದ್ರ ಸರಕಾರವು ಎರಡು ತಿಂಗಳು ಉಚಿತ ಪಡಿತರಕ್ಕೆ ಕೇಂದ್ರ ಕ್ಯಾಬಿನೆಟ್ ಅನುಮೋದನೆ ನೀಡಿದೆ. ಹಾಗಾಗಿ ಮೇ ಮತ್ತು ಜೂನ್ ತಿಂಗಳಿನಲ್ಲಿ ದೇಶದ 80 ಕೋಟಿ ಜನರಿಗೆ ಉಚಿತ ಪಡಿತರ ವ್ಯವಸ್ಥೆ ಕಲ್ಪಿಸಲು ಕೇಂದ್ರ ನಿರ್ಧರಿಸಿದೆ.

ಕೇಂದ್ರ ಸರ್ಕಾರದ ಉಚಿತ ಪಡಿತರ ನೀಡುವ ಕ್ಯಾಬಿನೆಟ್ ನ ಈ ಮಹತ್ವದ ನಿರ್ಧಾರವು ದೇಶದಲ್ಲಿ ಲಾಕ್ ಡೌನ್ ಅನ್ನು ಹೇರುವ ಮುನ್ಸೂಚನೆಯಾ ಎಂಬ ಬಗ್ಗೆ ಜಿಜ್ಞಾಸೆ ಮೂಡಿತ್ತು. ಆದರೆ ಕೇಂದ್ರ ಲಾಕ್ ಡೌನ್ ನತ್ತ ಮನಸ್ಸು ಮಾಡಿಲ್ಲ.

ಕಳೆದ ವರ್ಷದಂತೆ ಈ ವರ್ಷವೂ ಕೂಡ ಇಡೀ ದೇಶದಲ್ಲಿ ಲಾಕ್‌ಡೌನ್ ಹೇರಬೇಕು ಎಂಬ ದನಿ ಕೇಳಿ ಬರುತ್ತಿದೆ. ಕೇವಲ ದೇಶೀಯ ತಜ್ಞರು ಮಾತ್ರವಲ್ಲದೇ ಜಾಗತಿಕ ತಜ್ಞರೂ ಕೂಡ ಭಾರತದಲ್ಲಿ ಲಾಕ್‌ಡೌನ್ ಘೋಷಿಸುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಲಾಕ್‌ಡೌನ್ ಕೇಂದ್ರ ಸರ್ಕಾರದ ಕೊನೆಯ ಅಸ್ತ್ರವಾಗಿದೆ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಆದರೆ ಇದೀಗ ಸುಪ್ರೀಂಕೋರ್ಟ್ ಕೂಡ ಮಧ್ಯಪ್ರವೇಶಿಸಿ ಲಾಕ್ ಡೌನ್ ಮಾಡುವ ಸಾಧ್ಯತೆಯನ್ನೂ ಪರಿಗಣಿಸಬೇಕು ಎಂದು ಹೇಳಿತ್ತು.
ಈಗ ಕೊನೆಯ ಅಸ್ತ್ರವನ್ನು ಬಳಸುವ ಸಮಯ ಬಂದಿದೆಯಾ ಎಂಬ ಪ್ರಶ್ನೆಗೆ ಕೇಂದ್ರ ಸರ್ಕಾರ ಈಗ ಉತ್ತರಿಸಿದ್ದುು, ಕೇಂದ್ರದ ಕಡೆಯಿಂದ ಟೋಟಲ್ ಲಾಕ್ ಡೌನ್ ಇಲ್ಲ ಎಂಬ ಸಂದೇಶ ಕೇಂದ್ರದ ಕಡೆಯಿಂದ ಬಂದಿದೆ.

ಆದರೆ ಕರ್ನಾಟಕ ರಾಜ್ಯದಲ್ಲಿ ಮತ್ತಷ್ಟು ಕಠಿಣ ನಿಲುವು ಅನಿವಾರ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಯಾಕೆಂದರೆ ಈಗಿರುವ ಲಾಕ್ ಡೌನ್ ನಿಂಡ ಸೋಂಕಿನ ಚೈನ್ ಲಿಂಕ್ ಕಟ್ ಆಗಲ್ಲ. ಪಾಸಿಟಿವ್ ಕೇಸುಗಳ ಸಂಖ್ಯೆ ಕಮ್ಮಿ ಆಗುತ್ತಿಲ್ಲ. ಆದುದರಿಂದ ಮತ್ತಷ್ಟು ಕಠಿಣ ನಿರ್ಧಾರವನ್ನು ಕರ್ನಾಟಕ ನಾಳೆಯ ಒಳಗೆ ತೆಗೆದುಕೊಳ್ಳಬಹುದು ಎನ್ನಲಾಗಿದೆ.

Leave A Reply

Your email address will not be published.