ನೆಲ್ಯಾಡಿ | ಸೈನಿಕರೊಬ್ಬರ ಮನೆಗೇ ನುಗ್ಗಿ ದಾಂಧಲೆ ಎಬ್ಬಿಸಿದ 30 ಜನ ಹುಡುಗರ ಗುಂಪು

ಇವತ್ತು ತಾಲೂಕಿನ ನೆಲ್ಯಾಡಿಯಲ್ಲಿ
ಭಾರತಿಯ ಸೇನೆಯಲ್ಲಿ ಸೈನಿಕರಾಗಿರುವ ನಾಗೇಶ್ ಕಟ್ಟೆಮಜಲು ಅವರ ಕಾರಿಗೆ ಓರ್ವ ವ್ಯಕ್ತಿಯ ಬೈಕ್ ಹೊಡೆಯುತ್ತದೆ. ಆ ಸಂಧರ್ಭ ಸಣ್ಣ ಮಾತಿನ ಚಕಮಕಿ ನಡೆದಿದೆ. ಅದು ಸಾಮಾನ್ಯವಾಗಿ ನಡೆಯುವ ಆ ಕ್ಷಣದ ಕೋಪ ತಾಪ.

ಅದು ಅಲ್ಲಿಗೇ ಮುಗಿಯಬೇಕಿತ್ತು. ಆದರೆ ಜಗಳ ದೊಡ್ಡದಾಗಿ ಮತ್ತೆ ಮನೆಗೆ ಬಂದು ನುಗ್ಗಿ ಹೊಡೆಯುವಂತಾಗಿದೆ.

ಇಂದು ಬೆಳಿಗ್ಗೆ ನೆಲ್ಯಾಡಿಯ ಸಮೀಪದ ಎಂಬಲ್ಲಿ ನಾಗೇಶ್ ಅವರ ಕಾರು ಮತ್ತು ಬೈಕ್ ಒಂದು ಪರಸ್ಪರ ಡಿಕ್ಕಿಯಾಗಿತ್ತು. ಆಗ ಸಣ್ಣಪುಟ್ಟ ಜಗಳ ಪುತ್ತಿಯೆ ಎಂಬ ಸ್ಥಳದಲ್ಲಿ ನಡೆದಿತ್ತು. ಅಲ್ಲದೆ ಪಕ್ಕ ಇದ್ದ ಕೆಲವು ಮುಸ್ಲಿಂ ಯುವಕರು ನಾಗೇಶ್ ಅವರ ಮೇಲೆ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಆ ಸಂದರ್ಭದಲ್ಲಿ ನಾಗೇಶ್ ಅವರ ಪತ್ನಿ ಕೂಡಾ ಜೊತೆಗಿದ್ದರು.

ಅನಂತರ ನಾಗೇಶ್ ಅವರು ಪಕ್ಕದಲ್ಲೇ ಇದ್ದ ತಮ್ಮ ಭಾವನ ಮನೆಗೆ ತೆರಳಿದ್ದಾರೆ. ಮನೆಗೆ ಬಂದು ಕೇವಲ 10 ನಿಮಿಷದ ಅಂತರದಲ್ಲಿ ಬೈಕ್ ಸವಾರ ಶರೀಫ್ ಎಂಬಾತ ನ ನೇತೃತ್ವದಲ್ಲಿ 30 ಜನ ದುಷ್ಕರ್ಮಿಗಳ ಗುಂಪು  ನಾಗೇಶ್ ಅವರ ಮನೆಗೆ ನುಗ್ಗಿ ನಾಗೇಶ್ ಹಾಗೂ ಅವರ ಪತ್ನಿಗೆ ಮತ್ತು ಮನೆಯವರ ಮೇಲೆ ಹಲ್ಲೆ ನಡೆಸಿದ್ದಾರೆ ಮತ್ತು ಅವಾಚ್ಯ ಶಬ್ದಗಳಲ್ಲಿ ನಿಂದನೆಯನ್ನು ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೆ ಮನೆಗೆ ನುಗ್ಗಿ ವಸ್ತುಗಳನ್ನು ಚೆಲ್ಲಾಡಿ ದಾಂಧಲೆ ಎಬ್ಬಿಸಿದ್ದಾರೆ ಎನ್ನಲಾಗಿದೆ. ಅನಂತರ ಸಕಾಲದಲ್ಲಿ ಪೋಲಿಸರು ಘಟನಾ ಸ್ಥಳಕ್ಕೇ ಆಗಮಿಸಿದ ನಂತರ ಮುಸ್ಲಿಮ ಹುಡುಗರ ಗುಂಪು ಅಲ್ಲಿಂದ ಚದುರಿ ಓಡಿಹೋಗಿದೆ.

ದುಷ್ಕರ್ಮಿಗಳ ತಂಡದಲ್ಲಿ ರೌಡಿಶೀಟರ್ ಗಳಾದ ನೆಲ್ಯಾಡಿಯ ಮತ್ತು ಕೊಕ್ಕಡದ ವ್ಯಕ್ತಿಗಳು ಇದ್ದರು.

ನಾಗೇಶ್ ಮತ್ತು ಅವರ ಪತ್ನಿ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅತ್ತ ಶರೀಫ್ ಕೂಡ ಮತ್ತೊಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ತಿಳಿದು ಬಂದಿದೆ. ಸೇನೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸೈನಿಕರೊಬ್ಬರ ಮನೆಯನ್ನ ಹುಡುಕಿ ನುಗ್ಗಿ ದಾಂಧಲೆ ಎಬ್ಬಿಸಿ ಹೊಡೆಯುವುದೆಂದರೆ ದುಷ್ಕರ್ಮಿಗಳು ಎಷ್ಟು ಕೊಬ್ಬಿ ಹೋಗಿರಬಹುದು ಎಂದು ಸುತ್ತ ಮುತ್ತ ಚರ್ಚೆಗಳು ನಡೆಯುತ್ತಿದೆ.

Leave A Reply

Your email address will not be published.