ಕಡಬ ಪರಿಸರದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ

ಕಡಬದ ಮಾಲೇಶ್ವರ ದೇವಸ್ಥಾನದ ಪರಿಸರದಲ್ಲಿ ಚಿರತೆ ಪ್ರತ್ಯಕ್ಷಗೊಂಡಿದೆ.ಇದರಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ.

ಕಡಬದ ಮಾಲೇಶ್ವರ ದೇವಸ್ಥಾನದ ಪರಿಸರದಲ್ಲಿ ರವಿವಾರ ತಡರಾತ್ರಿ ವೇಳೆಗೆ ಚಿರತೆಯು ಅಡ್ಡಾಡಿದ್ದು,ಪರಿಸರದಲ್ಲಿ ಹೆಜ್ಜೆ ಗುರುತುಗಳು ಕಂಡುಬಂದಿವೆ.

ಕಳೆದ ದಿನ ಪರಿಸರದ ಆಡು ಮತ್ತು ಕೋಳಿಯ ತಲೆ ತುಂಡರಿಸಿದ ರೀತಿಯಲ್ಲಿ ಪತ್ತೆಯಾಗಿದ್ದು, ಪರಿಸರದಲ್ಲಿ ಕೆಲವು ನಾಯಿಮರಿಗಳು ನಾಪತ್ತೆಯಾಗಿದೆ ಎನ್ನಲಾಗಿದೆ.

ಸ್ಥಳಕ್ಕೆ ಪಂಜ ವಲಯ ಉಪ ಅರಣ್ಯಾಧಿಕಾರಿ ಅಜಿತ್, ಅರಣ್ಯ ರಕ್ಷಕರಾದ ಸುಬ್ರಹ್ಮಣ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಳೆದೆರಡು ತಿಂಗಳ ಹಿಂದೆ ಕಡಬ ತಾಲೂಕಿನ ರೆಂಜಿಲಾಡಿ ಪರಿಸರದಲ್ಲಿ ಚಿರತೆ ಕಂಡುಬಂದಿತ್ತು.

Leave A Reply

Your email address will not be published.