ಕರ್ನಾಟಕದ ಸಿಂಗಂ ಅಣ್ಣಾಮಲೈ ಔಟ್ ; ಕಮಲಹಾಸನ್ & ಖುಷ್ಬು ವನ್ನೂ ತಿರಸ್ಕರಿಸಿದ ಮತದಾರ

ತಮಿಳುನಾಡು ರಾಜಕಾರಣದಲ್ಲಿ ಹೊಸ ಬದಲಾವಣೆ ತರುವ ವಿಶ್ವಾಸ ಮೂಡಿಸಿದ್ದ ನಟ ಕಮಲ್ ಹಾಸನ್ ಒಂದು ಕಡೆ ಮತ್ತು ಅಣ್ಣಾಮಲೈ ಇನ್ನೊಂದು ಕಡೆ – ಹೀಗೆ ಇಬ್ಬರಿಗೂ ಸೋಲು ಉಂಟಾಗಿದೆ.

ಇಬ್ಬರಿಗೂ ಇದು ಅವರ ಮೊದಲ ಪ್ರಯತ್ನ. ಪ್ರಥಮ ಪ್ರಯತ್ನದಲ್ಲಿ ಅವರು ವಿಫಲವಾಗಿದ್ದು, ಸೋಲು ಕಂಡಿದ್ದಾರೆ.

ಕರ್ನಾಟಕ ಸಿಂಗಂ ಅಣ್ಣಾ ಮಲೈ ಗೆ ಶಾಕ್ ಆಗಿದೆ.
ಕರ್ನಾಟಕದಲ್ಲಿ ಐಪಿಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಕರ್ನಾಟಕ ಸಿಂಗಂ ಖ್ಯಾತಿಯ ಅಣ್ಣಾಮಲೈ ಅವರು ಹಾಲಿ ಚುನಾವಣೆಯಲ್ಲಿ ಸೋಲಿನ ಶಾಕ್ ಗೆ ತುತ್ತಾಗಿದ್ದಾರೆ.

ಅರವಕುರುಚ್ಚಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದಿದ್ದ ಅಣ್ಣಾಮಲೈ ಅವರು ನಿರಾಸೆ ಅನುಭವಿಸಿದ್ದಾರೆ. ಇಲ್ಲಿ ಡಿಎಂಕೆಯ ಎಲಾ ಇಳಂಗೊ ಜಯಗಳಿಸಿದ್ದು, ಅವರು 34832 ಮತಗಳನ್ನು ಪಡೆದರೆ ಅಣ್ಣಾಮಲೈ 29596 ಮತ ಗಳಿಸಿದ್ದಾರೆ.
ರಾಜಕೀಯದ ಒಳಸುಳಿಗಳು ಇನ್ನೂ ಅವರಿಗೆ ಅರ್ಥವಾಗಲು ಸಮಯ ಬೇಕಾಗಿದೆ ಅನ್ನಿಸುತ್ತದೆ. ಐಪಿಎಸ್ ಅಧಿಕಾರಿ ಎಂಬ ರೆಡಿಮೇಡ್ ಅಧಿಕಾರ ಬೇರೆ, ರಾಜಕೀಯ ಬೇರೆ ಎಂಬುದು ಅವರಿಗೆ ಈಗ ಅರ್ಥವಾಗುತ್ತಿದೆ. ತಮಿಳುನಾಡು ರಾಜಕೀಯದಲ್ಲಿ ಎಐಡಿಎಂಕೆ ಮತ್ತು ಡಿಎಂಕೆ ಎರಡನ್ನು ಬಿಟ್ಟು ಉಳಿದ ರಾಜಕೀಯ ಪಕ್ಷಗಳು ಇನ್ನೂ ಯೋಜನ ದೂರ ಸಾಗಬೇಕಿದೆ ಅಧಿಕಾರ ಹಿಡಿಯಲು.

ತಮಿಳುನಾಡಿನ ಕೊಯಮತ್ತೂರು ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು, ನಟ ಕಮಲ್ ಹಾಸನ್ ಅವರು ಬಿಜೆಪಿಯ ಅಭ್ಯರ್ಥಿ ವನತಿ ಶ್ರೀನಿವಾಸನ್ ವಿರುದ್ಧ ಕೇವಲ 1500ಕ್ಕೂ ಅಧಿಕ ಮತಗಳ ಅಂತರದಲ್ಲಿ ಸೋಲುಂಡಿದ್ದಾರೆ.

ಅತ್ತ ಬಿಜೆಪಿಯಿಂದ ಸ್ಪರ್ಧಿಸಿದ್ದ ನಟಿ ಖುಷ್ಬೂ ಅವರು ಕೂಡ ಸೋಲನ್ನು ಅಪ್ಪಿದ್ದಾರೆ.

ತಮಿಳುನಾಡಿನಲ್ಲಿ ಬಿಜೆಪಿ ಬೇಸ್ ಭದ್ರ ಹವಣಿಕೆಯಲ್ಲಿದ್ದ ಬಿಜೆಪಿಗೆ ಈ ಬಾರಿ ಕೂಡ ನಿರಾಸೆ ಆಗಿದೆ. ಈ ಸಲ ಬಿಜೆಪಿ ನಾಲ್ಕು ಕ್ಷೇತ್ರಗಳಲ್ಲಿ ಜಯ ಗಳಿಸಿದೆ. ಕಳೆದ ಸಲ, 2016 ರಲ್ಲೀ ನಡೆದ ತಮಿಳುನಾಡು ಅಸೆಂಬ್ಲಿಯಲ್ಲಿ ಯಾವುದೇ ಸ್ಥಾನವನ್ನು ಗೆಲ್ಲಲು ಬಿಜೆಪಿ ಶಕ್ಯ ಆಗಿರಲಿಲ್ಲ. ಕಳೆದ ಸಲ 136 ಸೀಟುಗಳನ್ನು ಪಡೆದಿದ್ದ ಎಐಡಿಎಂಕೆ ಅಧಿಕಾರ ಹಿಡಿದಿತ್ತು. ಈ ಬಾರಿ 153 ಕ್ಕೂ ಸೀಟುಗಳನ್ನು ಪಡೆದು ಡಿಎಂಕೆ ಅಧಿಕಾರವನ್ನು ತನ್ನ ಕೈಗೆ ತೆಗೆದುಕೊಳ್ಳುತ್ತಿದೆ.

Leave A Reply

Your email address will not be published.