ಕೋಟ್ಯಾಧಿಪತಿ ನಾಯಕನನ್ನು ಮಣಿಸಿ ಶಾಸಕಿಯಾದ ಮನೆ ಕೆಲಸದ ಹುಡುಗಿ | ವಿಜೃಂಭಿಸಿದ ಪ್ರಜಾಪ್ರಭುತ್ವ !

ಇದಕ್ಕೆ ಇಂಗ್ಲಿಷಿನಲ್ಲಿ ಹೇಳುವ ಸುಂದರ ಹೆಸರೇ ” ಬ್ಯೂಟಿ ಆಫ್ ಡೆಮಾಕ್ರಸಿ”. ಪ್ರಜಾಪ್ರಭುತ್ವದಲ್ಲಿ ಯಾರು ಏನು ಬೇಕಾದರೂ ಆಗಬಹುದು. ಜನರು ಮನಸ್ಸು ಮಾಡಿದರೆ ಬೀದಿ ಬಿಕಾರಿಯನ್ನು ಕೂಡಾ ತಂದು ಸಿಂಹಾಸನದಲ್ಲಿ ಕೂರಿಸಿ, ಎತ್ತಿ ಮೆರೆಸಬಹುದು. ಈಗ ಇಂತಹುದೇ ಒಂದು ಘಟನೆಗೆ ಪಶ್ಚಿಮಬಂಗಾಳ ಸಾಕ್ಷಿಯಾಗಿದೆ.

ಪಶ್ಚಿಮ ಬಂಗಾಳದ ಸಲ್ತೋರಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮನೆಗೆಲಸ ಮಾಡಿಕೊಂಡಿದ್ದ ಚಂದನಾ ಬೌರಿ ಎಂಬ ಹೆಣ್ಣು ಮಗಳು ಕೋಟ್ಯಧಿಪತಿ ಎದುರಾಳಿಯನ್ನು ಬಗ್ಗು ಬಡಿದಿದ್ದಾಳೆ. ನಿನ್ನೆತನಕ ಕೂಲಿ ಕೆಲಸ ಮಾಡಿಕೊಂಡಿದ್ದ ಆಕೆ ಇವತ್ತು ಪಶ್ಚಿಮಬಂಗಾಳದ ಅಸೆಂಬ್ಲಿಯ ಪೂರ್ವ ಗೌರವಾನ್ವಿತ ಶಾಸಕಿ !

ಚಂದನಾ ಬೌರಿ ಕೇವಲ ಸಾಮಾನ್ಯ ಮಹಿಳೆಯಲ್ಲ. ಆಕೆ ಸಾಮಾನ್ಯರಲ್ಲಿ ಸಾಮಾನ್ಯಳು. ಆಕೆ ಓದಿದ್ದು ಕೇವಲ 10ನೇ ತರಗತಿ ಪಾಸ್. ಅವರಿವರ ಮನೆಗೆ ಕೂಲಿ ಕೆಲಸಕ್ಕೆ ಹೋದರೆ ಊಟ ಉಂಟು, ಇಲ್ಲದಿದ್ದರೆ ದಿನ ನಡೆಯುವುದಿಲ್ಲ. ಆಕೆಗೆ ಆ ದಿನ ಮಾಡಿದ ಕೆಲಸಕ್ಕೆ ದಿನಕ್ಕೆ ಬರುವ ಆದಾಯ ಕೇವಲ 400 ರೂಪಾಯಿಗಳಾಗಿವೆ. ಮೂರು ಮೇಕೆ ತಂದೆಯಿಂದ ಬಳುವಳಿಯಾಗಿ ಬಂದ 3 ಹಸು ಹಾಗೂ ಒಂದು ಮಣ್ಣಿನ ಮನೆ, ಮನೆಯಲ್ಲಿ ನಾಲ್ಕಾರು ಅಡುಗೆಗೆ ಮಡಕೆಗಳೆ ಆಕೆಯ ಆಸ್ತಿ. ಅಂತಹ ಕೂಲಿ ಮಾಡುವ ಹುಡುಗಿಯನ್ನು ಮತದಾರ ಪ್ರಭುಗಳು, ಗೆಲ್ಲಿಸಿ ಕಳಿಸಿದ್ದಾರೆ. ಅದೂ ಸ್ಥಳೀಯ ಅತ್ಯಂತ ಪ್ರಬಲ ಕೋಟ್ಯಾಧಿಪತಿಯೊಬ್ಬನ ಮುಂದೆ. ಅದಕ್ಕೆ ಹೇಳಿದ್ದು ಇದು ಪ್ರಜಾಪ್ರಭುತ್ವದ ಬ್ಯೂಟಿ ಎಂದು!

ಈ ಚಂದನಾ ಬೌರಿ ಒಟ್ಟು 91,648 ಮತಗಳನ್ನು ಪಡೆದು 87,503 ಮತ ಪಡೆದ ಟಿಎಂಸಿ ಅಭ್ಯರ್ಥಿ ಸಂತೋಷ್ ಕುಮಾರ್ ಮೊಂಡಾಲ್ ವಿರುದ್ಧ 4, 145 ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ಚಂದನಾ ಬೌರಿ ದಿನಗೂಲಿ ಕಾರ್ಮಿಕನೋರ್ವನ ಪತ್ನಿಯಾಗಿದ್ದು, ಬಾಂಕೂರಾ ಜಿಲ್ಲೆಯ ಸಾಲ್‍ತೋರಾ ಎಸ್‍ಸಿ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಚಂದನಾ ಬೌರಿ ಬಿಜೆಪಿ ಕಣಕ್ಕಿಳಿಸಿತ್ತು.

https://mobile.twitter.com/RavindraRaju19/status/1375727797205827585/photo/1
Leave A Reply

Your email address will not be published.