Ad Widget

ಸವಣೂರು ರಿಕ್ಷಾದಲ್ಲಿ ಮದ್ಯ ಸಾಗಾಟ | ರಿಕ್ಷಾ ಪೊಲೀಸರ ವಶಕ್ಕೆ, ಆರೋಪಿ ರಿಕ್ಷಾ ಚಾಲಕ ಪರಾರಿ

ಸವಣೂರಿನಲ್ಲಿ ರಿಕ್ಷಾವೊಂದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯದ ಬಾಟಲಿಗಳನ್ನು ಮತ್ತು ರಿಕ್ಷಾವನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ಮೇ.2 ರಂದು ನಡೆದಿದೆ.

ಆಟೋ ರಿಕ್ಷಾ ಚಾಲಕ ತಾರನಾಥ ಎಂಬವರು ಸರ್ವೆ ಕಡೆಗೆ ರಿಕ್ಷಾ ( KA 21B 7289) ದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಖರೀದಿ ಬಿಲ್ಲುಗಳನ್ನು ಹೊಂದದೆ ಮದ್ಯ ಬಾಟಲಿಗಳನ್ನು ಸಾಗಾಟ ಮಾಡುತ್ತಿರುವಾಗ ಸವಣೂರಿನಲ್ಲಿ ಪೊಲೀಸರು ತಪಾಸಣೆ ನಡೆಸಿದಾಗ ಚಾಲಕ ಓಡಿ ಹೋಗಿ ತಪ್ಪಿಸಿಕೊಂಡಿದ್ದು ರಿಕ್ಷಾ ಹಾಗೂ ಮದ್ಯದ ಬಾಟಲಿಗಳನ್ನು ಪೊಲೀಸರು ವಶಪಡಿಸಿಕೊಂಡಿರುವುದಾಗಿ ತಿಳಿದು ಬಂದಿದೆ.

ಈ ಕುರಿತು ಬೆಳ್ಳಾರೆ ಠಾಣೆಯಲ್ಲಿ ಸವಣೂರಿನ ಬಾರ್ ಎಂಡ್ ರೆಸ್ಟೋರೆಂಟ್ ವೆಂಡರ್ ಮತ್ತು ರಿಕ್ಷಾ ಚಾಲಕನ ವಿರುದ್ದ ಪ್ರಕರಣ ದಾಖಲಾಗಿರುವುದಾಗಿ ತಿಳಿದು ಬಂದಿದೆ.

Ad Widget Ad Widget Ad Widget
Ad Widget Ad Widget Ad Widget

Leave a Reply

error: Content is protected !!
Scroll to Top
%d bloggers like this: