Day: May 2, 2021

ಆಲಂಕಾರು : ಮೊಬೈಲ್ ಟವರ್ ನಲ್ಲಿ ವಿದ್ಯುತ್ ಶಾಕ್ | ಟವರ್ ಮೈಂಟೇನರ್ ಮೃತ್ಯು

ವಿದ್ಯುತ್ ಅವಘಡದಿಂದಾಗಿ ಮೊಬೈಲ್ ಟವರ್ ಮೈಂಟೇನರ್ ಓರ್ವರು ಮೃತಪಟ್ಟ ಘಟನೆ ಭಾನುವಾರ ತಡರಾತ್ರಿ ಆಲಂಕಾರಿನಲ್ಲಿ ನಡೆದಿದೆ. ಮೃತ ವ್ಯಕ್ತಿ ಉಪ್ಪಿನಂಗಡಿ ನಿವಾಸಿ ಶ್ಯಾಮ್ ಎಂದು ಗುರುತಿಸಲಾಗಿದೆ. ಮೃತರು ಆಲಂಕಾರು‌ ಸಮೀಪದ ನೆಕ್ಕರೆ ಎಂಬಲ್ಲಿರುವ ಏರ್ ಟೆಲ್ ಕಂಪೆನಿಯ ಟವರ್ ಮೈಂಟೈನರ್ ಆಗಿದ್ದು, ರವಿವಾರದಂದು ರಾತ್ರಿ ವೇಳೆ ವಿದ್ಯುತ್ ಅವಘಡದಿಂದಾಗಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಕಡಬ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೆಳ್ತಂಗಡಿಯ ಉದ್ಯಮಿಯನ್ನು ಶಿರಸಿಯಲ್ಲಿ ಕೊಲೆ | ಮೂವರ ಬಂಧನ, ಇನ್ನಿಬ್ಬರಿಗೆ ಶೋಧ

ರಿಯಲ್ ಎಸ್ಟೇಟ್ ಹಾಗೂ ಫ್ಲೈವುಡ್ ವ್ಯವಹಾರ ನಡೆಸುತ್ತಿದ್ದ ಉದ್ಯಮಿಬೆಳ್ತಂಗಡಿ ತಾಲೂಕಿನ ಕಕ್ಕಿಂಜೆ ತೋಟತ್ತಾಡಿ ಸನಿಹದ ಬೆಂದ್ರಾಳ ನಿವಾಸಿ ಸುದರ್ಶನ್ ಅಲಿಯಾಸ್ ಹರ್ಷ(36) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಮಂದಿಯನ್ನು ಬಂಧಿಸಲಾಗಿದೆ. ಸುದರ್ಶನ್ ಅಲಿಯಾಸ್ ಹರ್ಷ ಅವರನ್ನು ಶಿರಸಿ ಬಳಿ ಅಪಘಾತ ಮಾಡಿ ಬಳಿಕ ತಲ್ವಾರ್ ನಿಂದ ಹೊಡೆದು ಕೊಲೆ ಮಾಡಲಾಗಿತ್ತು. ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮುಂಡಗೋಡ ತಾಲೂಕಿನ ಬಡ್ಡಿಗೇರಿ ಎಂಬಲ್ಲಿ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಈ ಕೃತ್ಯ ಎಸಗಿ ಪರಾರಿಯಾಗಿತ್ತು. ಬೈಕ್ ನಲ್ಲಿ ಹರ್ಷ …

ಬೆಳ್ತಂಗಡಿಯ ಉದ್ಯಮಿಯನ್ನು ಶಿರಸಿಯಲ್ಲಿ ಕೊಲೆ | ಮೂವರ ಬಂಧನ, ಇನ್ನಿಬ್ಬರಿಗೆ ಶೋಧ Read More »

ಸವಣೂರು ರಿಕ್ಷಾದಲ್ಲಿ ಮದ್ಯ ಸಾಗಾಟ | ರಿಕ್ಷಾ ಪೊಲೀಸರ ವಶಕ್ಕೆ, ಆರೋಪಿ ರಿಕ್ಷಾ ಚಾಲಕ ಪರಾರಿ

ಸವಣೂರಿನಲ್ಲಿ ರಿಕ್ಷಾವೊಂದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯದ ಬಾಟಲಿಗಳನ್ನು ಮತ್ತು ರಿಕ್ಷಾವನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ಮೇ.2 ರಂದು ನಡೆದಿದೆ. ಆಟೋ ರಿಕ್ಷಾ ಚಾಲಕ ತಾರನಾಥ ಎಂಬವರು ಸರ್ವೆ ಕಡೆಗೆ ರಿಕ್ಷಾ ( KA 21B 7289) ದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಖರೀದಿ ಬಿಲ್ಲುಗಳನ್ನು ಹೊಂದದೆ ಮದ್ಯ ಬಾಟಲಿಗಳನ್ನು ಸಾಗಾಟ ಮಾಡುತ್ತಿರುವಾಗ ಸವಣೂರಿನಲ್ಲಿ ಪೊಲೀಸರು ತಪಾಸಣೆ ನಡೆಸಿದಾಗ ಚಾಲಕ ಓಡಿ ಹೋಗಿ ತಪ್ಪಿಸಿಕೊಂಡಿದ್ದು ರಿಕ್ಷಾ ಹಾಗೂ ಮದ್ಯದ ಬಾಟಲಿಗಳನ್ನು ಪೊಲೀಸರು ವಶಪಡಿಸಿಕೊಂಡಿರುವುದಾಗಿ ತಿಳಿದು ಬಂದಿದೆ. ಈ ಕುರಿತು …

ಸವಣೂರು ರಿಕ್ಷಾದಲ್ಲಿ ಮದ್ಯ ಸಾಗಾಟ | ರಿಕ್ಷಾ ಪೊಲೀಸರ ವಶಕ್ಕೆ, ಆರೋಪಿ ರಿಕ್ಷಾ ಚಾಲಕ ಪರಾರಿ Read More »

ನಂದಿಗ್ರಾಮದ ಫಲಿತಾಂಶ : ನೆಕ್ ಟು ನೆಕ್ ಫೈಟ್ | ಸುವೆಂದು ಅಧಿಕಾರಿ ವಿನ್ , ಮಮತಾ ಬ್ಯಾನರ್ಜಿ ರನೌಟ್ !

ನಂದಿಗ್ರಾಮ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಸುವೆಂದು ಅಧಿಕಾರಿ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು 1957 ಮತಗಳಿಂದ ಮಣಿಸಿದ್ದಾರೆ. ಈ ಮೂಲಕ ಆರಂಭದಿಂದ ಕೊನೆಯವರೆಗೂ ಈ ಕ್ಷೇತ್ರ ಬಾರಿ ಕುತೂಹಲ ಮೂಡಿಸಿತ್ತು. ಒಮ್ಮೆ ಮಮತಾ ಮುನ್ನಡೆ ಪಡೆದರೆ ಮತ್ತೊಂದು ಸುತ್ತಿನಲ್ಲಿ ಸುವೇಂದು ಅಧಿಕಾರಿ ಮುನ್ನಡೆ ಪಡೆಯುತ್ತಿದ್ದರು. ಅಧಿಕಾರಿ ನನ್ನ ಕ್ಷೇತ್ರದಲ್ಲಿ ಬಂದು ನಿಲ್ಲಿ ಎಂದು ಮಮತಾಗೆ ಸವಾಲು ಹಾಕಿದ್ದು ಅದನ್ನು ಸ್ವೀಕಾರ ಮಾಡಿದ್ದರು.ಅದರಂತೆ ಚುನಾವಣೆಗೆ ಸುವೆಂದು ಅಧಿಕಾರಿ ಮಮತಾ ಬ್ಯಾನರ್ಜಿ ವಿರುದ್ದ ಸ್ಪರ್ಧಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ …

ನಂದಿಗ್ರಾಮದ ಫಲಿತಾಂಶ : ನೆಕ್ ಟು ನೆಕ್ ಫೈಟ್ | ಸುವೆಂದು ಅಧಿಕಾರಿ ವಿನ್ , ಮಮತಾ ಬ್ಯಾನರ್ಜಿ ರನೌಟ್ ! Read More »

ಬೆಳ್ತಂಗಡಿಯ ಕೊಕ್ರಾಡಿ ಕೊರಂಬಾಡ್ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆಗೆ ಸಿದ್ದತೆ ಸ್ಥಳೀಯರ ತೀವ್ರ ವಿರೋಧ

ಬೆಳ್ತಂಗಡಿ: ತಾಲೂಕಿನ ಕೊಕ್ರಾಡಿ ಗ್ರಾಮದ ಕೊರಂಬಾಡ್ ಪ್ರದೇಶದಲ್ಲಿ ಸ್ಥಳೀಯ ವ್ಯಕ್ತಿಯೊರ್ವರು ಕಲ್ಲು ಗಣಿಗಾರಿಕೆಗೆ ಸಿದ್ದತೆಯನ್ನು ನಡೆಸುತ್ತಿದ್ದುಈ ಪ್ರದೇಶದ ಪಕ್ಕದಲ್ಲಿ ಹಲವಾರು ಮನೆಗಳು ಕೃಷಿ ತೋಟಗಳು ಇದ್ದು ಮುಂದೆ ಸಾಕಷ್ಟು ತೊಂದರೆಗಳು ಆಗುತ್ತದೆ. ಈ ಕಲ್ಲಿನ ಗಣಿಗಾರಿಕೆಗೆ ಯಾವುದೇ ಕಾರಣಕ್ಕೂ ಅನುಮತಿಯನ್ನು ನೀಡಬಾರದು ಎಂದು ಸ್ಥಳೀಯ ನಿವಾಸಿಗಳು ಗ್ರಾಮ ಪಂಚಾಯತ್ ಗೆ ಮನವಿಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಅಂಡಿಂಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಜಯಂತಿ ಲೋಕಯ್ಯ ಪೂಜಾರಿ ,ಉಪಾಧ್ಯಕ್ಷೆ ಶ್ರೀಮತಿ ಶ್ವೇತಾ ಪರಮೇಶ್ವರ,ಸದಸ್ಯರಾದ ಜಗದೀಶ್ ಹೆಗ್ಡೆ ,ಶ್ರೀಮತಿ …

ಬೆಳ್ತಂಗಡಿಯ ಕೊಕ್ರಾಡಿ ಕೊರಂಬಾಡ್ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆಗೆ ಸಿದ್ದತೆ ಸ್ಥಳೀಯರ ತೀವ್ರ ವಿರೋಧ Read More »

ನದಿಯಲ್ಲಿ ಈಜಲು ಹೋದ ಮೂವರು ಯುವಕರು ನೀರುಪಾಲು

ನೀರಿನಾಳ ತಿಳಿಯದೇ ನದಿಯಲ್ಲಿ ಮುಳುಗಿ ಮೂವರು ಮೃತಪಟ್ಟ ಘಟನೆ ನಡೆದಿದೆ. ಉಡುಪಿ ಜಿಲ್ಲೆಯ ಶಿರ್ವ ಸಮೀಪದ ಪಾಂಬೂರು ಎಂಬಲ್ಲಿ ಈ ಘಟನೆ ರವಿವಾರ ನಡೆದಿದೆ. ಕ್ವಾಲಿನ್ ಕ್ಯಾಸ್ತಲಿನೋ(21), ಜಾಬೀರ್ (18), ರಿಜ್ವಾನ್(28) ಎಂಬವರೇ ನೀರು ಪಾಲಾದ ದುರ್ದೈವಿಗಳು. ಘಟನ ಸ್ಥಳಕ್ಕೆ ಕೂಡಲೇ ಸ್ಥಳೀಯರು, ಪೊಲೀಸರು ಧಾವಿಸಿ ಯುವಕರ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.

ಮಂಗಳಾ ಅಂಗಡಿ ಅವರಿಗೆ ರೋಚಕ ಗೆಲುವು : ಸ್ಥಾನ ಉಳಿಸಿಕೊಂಡ ಬಿಜೆಪಿ

ಬೆಳಗಾವಿ ಲೋಕಸಭೆ ಕ್ಷೇತ್ರದ ಫಲಿತಾಂಶ ಭಾರೀ ರೋಚಕತೆಯತ್ತ ಸಾಗಿ ಪ್ರತಿಯೊಂದು ಸುತ್ತಿನ ಮತ ಎಣಿಕೆ ಮುಗಿಯುತ್ತಿದ್ದಂತೆ ಮುನ್ನಡೆಯ ಅಂತರ ಬದಲಾಗುತ್ತಿರುವುದು ಎರಡೂ ಪಕ್ಷಗಳ ಅಭ್ಯರ್ಥಿಗಳು, ಕಾರ್ಯಕರ್ತರ ರೋಚಕತೆಯನ್ನು ಮತ್ತಷ್ಟು ಹೆಚ್ಚಿಸಿತು. ಕೊನೆಗೂ ಅಂತಿಮ ಲೆಕ್ಕ ಪೂರ್ಣಗೊಂಡು ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಅವರು ಶಾಸಕ ಸತೀಶ್ ಜಾರಕಿಹೊಳಿ ಅವರಿಗೆ ಸೋಲುನಿಸಿ ಗೆಲುವಿನ ನಗೆ ಬೀರಿದರು.

ಇವಳಿಗೆ ವಸ್ತ್ರ ವರ್ಜ್ಯ | ಕೇವಲ ಚಿನ್ನದ ಒಡವೆ ಧರಿಸಿ ನಗ್ನಳಾಗಿ ಫೋಟೋ ಶೂಟ್ !

ಇದೊಂದು ಬೇರೆ ರೀತಿಯ ಫೋಟೋ ಶೂಟ್. ಈ ಹಿಂದೆ ಎಂಗೇಜ್ ಮೇಂಟ್ ನ, ಮದುವೆ ಮುಂತಾದ ಜೀವನದ ಹಲವು ಘಟ್ಟಗಳ ಫೋಟೋಶೂಟ್ ಅನ್ನು ನೀವು ನೋಡಿದ್ದೀರಿ. ಅಲ್ಲಿನ ಕಲಾತ್ಮಕ ದೃಶ್ಯಗಳ ಮರುಸೃಷ್ಟಿಯನ್ನು ನೀವು ನೋಡಿ ಆನಂದಿಸಿದ್ದೀರಿ. ಕೆಲವು ಫೋಟೋ ಶೂಟ್ ನೋಡಿ ನೀವು ಅದರಲ್ಲಿ ಭಾಗಿಯಾದ ಮಾಡೆಲ್ ಗಳ ಮೇಲೆ ಮತ್ತು ಅದರ ಕಾನ್ಸೆಪ್ಟ್ ಮೇಲೆ ನೀವು ಬೇಸರಿಸಿಕೊಂಡಿದ್ದೀರಿ. ವಿನೋದವೋ, ವಿಷಾದವೋ ಅದು ನಿಮ್ಮದೇ!. ನಮಗೆ ಇದು ಇನ್ನೊಂದು ಫೋಟೋ ಶೂಟ್ ಅಷ್ಟೇ. ಅಲ್ಲಲ್ಲಿ ನಡೆದ ಘಟನೆಗಳನ್ನು …

ಇವಳಿಗೆ ವಸ್ತ್ರ ವರ್ಜ್ಯ | ಕೇವಲ ಚಿನ್ನದ ಒಡವೆ ಧರಿಸಿ ನಗ್ನಳಾಗಿ ಫೋಟೋ ಶೂಟ್ ! Read More »

ಗಡಾಯಿಕಲ್ಲು ಗಡ ಗಡ | ಅಪಾಯದಲ್ಲಿದೆಯಾ ನರಸಿಂಹ ಗಡ ?

ದಕ್ಷಿಣಕನ್ನಡ ಜಿಲ್ಲೆಯ ಗಡಾಯಿಕಲ್ಲು ಬೆಟ್ಟದಲ್ಲಿ ಬಿರುಕು ಬಿಟ್ಟಿದ್ದು, ಬೆಟ್ಟದ ಒಂದು ಪಾರ್ಶ್ವದಲ್ಲಿ ಗುಡ್ಡದ ಮಣ್ಣು‌ ಕುಸಿದು ಬಿದ್ದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇಲ್ಲಿನ ಸ್ಥಳೀಯರ ಮಾಹಿತಿ ಪ್ರಕಾರ ಈ ಪರಿಸರದಲ್ಲಿ ಸ್ಪೋಟದ ಭಾರೀ ಶಬ್ದ ಕೇಳಿಸಿಕೊಂಡಿದೆ ಎನ್ನಲಾಗಿದೆ. ಚಾರಣಪ್ರಿಯರ ಹಾಟ್ ಸ್ಪಾಟ್ ಆಗಿರುವ ಬೆಳ್ತಂಗಡಿಯ ಈ ಪ್ರವಾಸಿತಾಣ ನರಸಿಂಹಗಢ ಎಂದೂ ಕರೆಯಲ್ಪಡುತ್ತದೆ. ಭೂಮಿಯಿಂದ 1700 ಅಡಿ ಎತ್ತರದಲ್ಲಿರುವ ನರಸಿಂಹಗಡ ಗಡಾಯಿಕಲ್ಲಿನಲ್ಲಿ ಭಾರೀ ಶಬ್ಧ ಕೇಳಿಬಂದಿದ್ದು,ಕಲ್ಲಿನ ಒಂದು ಪಾರ್ಶ್ವದಲ್ಲಿ ಕುಸಿತವಾಗಿದೆ ಎಂದು ಹೇಳಲಾಗಿದೆ. ಕಳೆದ ವರ್ಷವೂ ಇದೇ ರೀತಿಯಲ್ಲಿ …

ಗಡಾಯಿಕಲ್ಲು ಗಡ ಗಡ | ಅಪಾಯದಲ್ಲಿದೆಯಾ ನರಸಿಂಹ ಗಡ ? Read More »

ಪುತ್ತೂರಿನ ಗೂಡಂಗಡಿಯಲ್ಲಿ ಶಟರ್ ಎಳೆದು ಎಣ್ಣೆ ಪಾರ್ಟಿ | ಅಮಲೇರಿಸಿಕೊಂಡವರ ಅಮಲು ಇಳಿಸಿದ ಕೋವಿಡ್ ಮಾರ್ಶಲ್ಸ್

ಪುತ್ತೂರು : ಕೋವಿಡ್ ಎರಡನೇ ಅಲೆಯ ಹಿನ್ನೆಲೆಯಲ್ಲಿ ನಿಗದಿತ ಸಮಯದ ಬಳಿಕ ಜನತಾ ಕರ್ಫ್ಯೂ ವಿಧಿಸಿದೆ.ಇದರಿಂದಾಗಿ ಎಲ್ಲಾ ವ್ಯವಹಾರ ಸ್ಥಗಿತಗೊಳಿಸಿ ಅಂಗಡಿಮುಂಗಟ್ಟುಗಳನ್ನು ಬಂದ್ ಮಾಡಲಾಗಿದ್ದರೂ, ಪುತ್ತೂರಿನ ಗೂಡಂಗಂಡಿಯಲ್ಲಿ ಬಾಟಲಿಯ ಶಬ್ದ ಕೇಳಿ ಬರುತ್ತಿತ್ತು. ಕಾರಣ ಹುಡುಕಿದರೆ ಆ ಗೂಡಂಗಡಿಯೊಂದರಲ್ಲಿ ಇಬ್ಬರು ಮದ್ಯ ಸೇವಿಸುತ್ತಿರುವುದು ಗಮನಕ್ಕೆ ಬಂದಿದೆ. ಈ ಘಟನೆ ಮೆ.2ರಂದು ಬೆಳಿಗ್ಗೆ ನಡೆದಿದ್ದು, ಪುತ್ತೂರಿನ ಕೋರ್ಟ್ ರಸ್ತೆಯ ಬಳಿ ಪಶು ಸಂಗೋಪನಾ ಇಲಾಖೆಯ ಮುಂಭಾಗದಲ್ಲಿರುವ ಸಣ್ಣ ಗೂಡಂಗಡಿಯೊಂದರ ಬಾಗಿಲು ತೆರೆದು ವ್ಯಕ್ತಿಗಳಿಬ್ಬರು ಬೆಳಿಗ್ಗಿನ ವೇಳೆಯೇ ಪಟ್ಟಾಗಿ ಕುಳಿತು …

ಪುತ್ತೂರಿನ ಗೂಡಂಗಡಿಯಲ್ಲಿ ಶಟರ್ ಎಳೆದು ಎಣ್ಣೆ ಪಾರ್ಟಿ | ಅಮಲೇರಿಸಿಕೊಂಡವರ ಅಮಲು ಇಳಿಸಿದ ಕೋವಿಡ್ ಮಾರ್ಶಲ್ಸ್ Read More »

error: Content is protected !!
Scroll to Top