ಪಾಣಾಜೆ | ನಿಡ್ಪಳ್ಳಿಯಲ್ಲಿ ಅವಿವಾಹಿತ ಯುವಕನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ
ಪುತ್ತೂರು ತಾಲೂಕಿನ ಪಾಣಾಜೆ ಸಮೀಪದ ನಿಡ್ಪಳ್ಳಿ ಗ್ರಾಮದ ಪೊಯ್ಯೆತ್ತಡ್ಕ ಎಂಬಲ್ಲಿ ಅವಿವಾಹಿತ ಯುವಕನೋರ್ವನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.
ನಿಡ್ಪಳ್ಳಿ ಪೊಯ್ಯೆತ್ತಡ್ಕ ಐತ್ತಪ್ಪ ನಾಯ್ಕ ಎಂಬವರ ಪುತ್ರ ವಿಶ್ವನಾಥ ಎಂಬವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಕೂಲಿ ಕಾರ್ಮಿಕರಾಗಿರುವ ವಿಶ್ವನಾಥರು ಮನೆಯ ಸಮೀಪದ ಕಟ್ಟಡದ ಹೊರ ಜಗಲಿಯ ಪಕ್ಕಾಸಿಗೆ ನೈಲಾನ್ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಮುಂಜಾನೆ ಪತ್ತೆಯಾಗಿದೆ.
ತಲೆಯಲ್ಲಿ ಮುಂಡಾಸು ಕಟ್ಟಿದ ಹಾಗೆಯೇ ಇರುವುದಲ್ಲದೆ ಕೈಗಳು ಕಟ್ಟಡದ ಕಂಬಕ್ಕೆ ತಾಗು ರೀತಿಯಲ್ಲಿತ್ತು. ಅಲ್ಲದೆ ಕಾಲು ನೆಲಕ್ಕೆ ತಾಗುವ ರೀತಿಯಲ್ಲಿದ್ದು ಈ ಸಾವಿನ ಕುರಿತು ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಸಂಪ್ಯ ಪೊಲೀಸರು ಅಗಮಿಸಿ ತನಿಖೆ ನಡೆಸುತ್ತಿದ್ದಾರೆ.