ಭಾರತಕ್ಕೆ ಹೋಗಿ ಬಂದರೆ 38 ಲಕ್ಷ ದಂಡ ಮತ್ತು 5 ವರ್ಷ ಜೈಲು | ಇದ್ಯಾವ ದೇಶದ ಕಾನೂನು ಅಂತೀರಾ ?

ಭಾರತದಿಂದ ವಾಪಸ್ ಬರುವ ಆಸ್ಟ್ರೇಲಿಯಾ ನಾಗರಿಕರಿಗೆ ಆಸ್ಟ್ರೇಲಿಯಾ ಸರ್ಕಾರ ನಿರ್ಬಂಧ ವಿಧಿಸಿದ್ದು, ನಿಯಮ ಉಲ್ಲಂಘನೆ ಮಾಡಿದವರಿಗೆ ಜೈಲು ಶಿಕ್ಷೆ ಹಾಗೂ ದಂಡದ ಎಚ್ಚರಿಕೆಯನ್ನು ನೀಡಿದೆ. 

ನಿಯಮಗಳನ್ನು ಉಲ್ಲಂಘಿಸಿ ಆಸ್ಟ್ರೇಲಿಯಾ ಪ್ರವೇಶಿಸಿದರೆ ಅಂತಹವರಿಗೆ 66,000 ಆಸ್ಟ್ರೇಲಿಯನ್ ಡಾಲರ್ ಗಳ ದಂಡ ಹಾಗೂ 5 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ ಎಂದು ಸರ್ಕಾರ ಎಚ್ಚರಿಕೆ ನೀಡಿದೆ. ಭಾರತದಲ್ಲಿ ಕೋವಿಡ್-19 ಹೆಚ್ಚಳವಾಗುತ್ತಿರುವ  ಆಧಾರದ ಮೇಲೆ ಆಸ್ಟ್ರೇಲಿಯಾ ಈ ನಿರ್ಧಾರಕ್ಕೆ ಬಂದಿದೆ.

ತಾತ್ಕಾಲಿಕವಾಗಿ ಸೋಮವಾರದಿಂದ ಈ ಆದೇಶ ಜಾರಿಗೆ ಬರಲಿದ್ದು, ಭಾರತಕ್ಕೆ 14 ದಿನಗಳಲ್ಲಿ ಭೇಟಿ ನೀಡಿ, ಆಸ್ಟ್ರೇಲಿಯಾಗೆ ವಾಪಸ್ಸಾಗಬೇಕೆಂದುಕೊಂಡವರಿಗೂ ಈ ಆದೇಶ ಅನ್ವಯವಾಗಲಿದೆ. ಭಾರತದಲ್ಲಿ ಅಂದಾಜು 9,000 ಆಸ್ಟ್ರೇಲಿಯನ್ನರಿದ್ದು, ನಿನ್ನೆ ಆಸ್ಟ್ರೇಲಿಯಾದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಆರೋಗ್ಯ ಸಚಿವಾಲಯ ಈ ತಾತ್ಕಾಲಿಕ ನಿಷೇಧದ ನಿರ್ಧಾರವನ್ನು ಪ್ರಕಟಿಸಿದೆ.

ಆದರೆ ಆಸ್ಟ್ರೇಲಿಯಾದ ಈ ಆದೇಶಕ್ಕೂ ತೀವ್ರ ಟೀಕೆಗಳು ಆಸ್ಟ್ರೇಲಿಯಾದಲ್ಲಿ ವ್ಯಕ್ತವಾಗತೊಡಗಿದ್ದು, ತನ್ನದೇ ನಾಗರಿಕರು ಸಂಕಷ್ಟಕ್ಕೆ ಸಿಲುಕಿದಾಗಲೂ ಆಸ್ಟ್ರೇಲಿಯಾ ಸರ್ಕಾರ ಈ ರೀತಿಯ ನಿರ್ಬಂಧ ವಿಧಿಸುವುದು ತಪ್ಪು ಹಾಗೂ ಸರ್ಕಾರಕ್ಕೆ ಕ್ವಾರಂಟೈನ್ ನಲ್ಲಿ ನಂಬಿಕೆ ಇಲ್ಲದಂತಾಗಿದೆ ಎಂಬ ಟೀಕೆ ವ್ಯಕ್ತವಾಗತೊಡಗಿದೆ. ಆದರೆ ಅಲ್ಲಿನ ಸರ್ಕಾರ ಮಾತ್ರ ಈ ಆದೇಶವನ್ನು ಮೇ.15 ರ ನಂತರವಷ್ಟೇ ಮರುಪರಿಶೀಲನೆ ಮಾಡಲಾಗುತ್ತದೆ ಎಂದು ಹೇಳಿದೆ. 

Leave A Reply

Your email address will not be published.