ಸ್ನೇಹಿತನ ಜೀವ ಉಳಿಸಲು ಆಕ್ಸಿಜನ್ ಸಿಲಿಂಡರ್ ಹಿಡಿದುಕೊಂಡು 1,200 ಕಿ. ಮೀ. ಕ್ರಮಿಸಿದ ಗೆಳೆಯ !

ತನ್ನ ಬಾಲ್ಯದ ಸ್ನೇಹಿತನ ಬದುಕಬೇಕಾದರೆ ಇನ್ನು 10 ಗಂಟೆಗಳಲ್ಲಿ ಆಕ್ಸಿಜನ್ ಸಿಲೆಂಡರ್ ವ್ಯವಸ್ಥೆಯಾಗಬೇಕಿತ್ತು. ಹಾಗಂತ ಆತನ ಆಸ್ಪತ್ರೆಗೆ ದಾಖಲಾದವನ ಗೆಳೆಯ, ಆತನ ಇನ್ನೊಬ್ಬ ಊರಲ್ಲಿದ್ದ ಗೆಳೆಯನಿಗೆ ಕರೆ ಮಾಡಿ ಹೇಳಿದ್ದರು. ಅದರಂತೆ 15 ಗಂಟೆಗಳಲ್ಲಿ 1,200 ಪ್ರಯಾಣಿಸಿ ಆಕ್ಸಿಜನ್ ವ್ಯವಸ್ಥೆ ಮಾಡಿ ಸ್ನೇಹಿತನನ್ನ ಬದುಕಿಸಿ ಗೆಳೆತನಕ್ಕೆ ಹೊಸ ಅರ್ಥ ತೋರಿಸಿದ್ದಾನೆ.

ದೆಹಲಿ ಎನ್ಆರ್ ಸಿಯಲ್ಲಿ ಆಕ್ಸಿಜನ್ ಪೂರೈಕೆ ಕೊರತೆ ತೀವ್ರವಾಗಿತ್ತು. ಸ್ನೇಹಿತ ರಾಜನ್‍ಗೆ ಇನ್ನು 10 ಗಂಟೆಗಳಿಗೆ ಆಗುವಷ್ಟು ಮಾತ್ರ ಆಕ್ಸಿಜನ್ ಇದೆ, ಅದಾದ ಬಳಿಕ ಆಕ್ಸಿಜನ್ ಖಾಲಿಯಾದರೆ ಏನು ಬೇಕಾದರೂ ಆಗಬಹುದು. ಆದ್ದರಿಂದ ಆತನಿಗೆ ಆಕ್ಸಿಜನ್ ಬೇಕಿದೆ ಎಂದು ಸಂಜಯ್ ಸಕ್ಸೇನಾ ಎಂಬುವವರು ರಾಜನ್ ಅವರ ಗೆಳೆಯ ದೇವೇಂದ್ರ ಕುಮಾರ್ ರೈ ಎಂಬವರಿಗೆ
ಕರೆ ಮಾಡಿ ಹೇಳಿದ್ದರು.

ಎರಡನೇ ಅಲೋಚನೆಯೇ ಮಾಡದೇ ಹೇಗಾದರೂ ಮಾಡಿ ಗೆಳೆಯನಿಗೆ ಸಹಾಯ ಮಾಡಬೇಕೆಂದು ದೇವೇಂದ್ರಕುಮಾರ ಅವರು ಅಂದುಕೊಂಡಿದ್ದಾರೆ.

ಏ.25 ರಂದು ಜಾರ್ಖಂಡ್ ನ ಈ ದೇವೇಂದ್ರ ಕುಮಾರ್ ರೈ ತನ್ನ ಸ್ನೇಹಿತನಿಗೆ ಆಕ್ಸಿಜನ್ ಸಿಲೆಂಡರ್ ವ್ಯವಸ್ಥೆ ಮಾಡುವುದಕ್ಕೆ ಅಲ್ಲಿ ಇಲ್ಲಿ ಓಡಾಡಿದ್ದಾರೆ. ಇಡೀ ರಾತ್ರಿ ತನ್ನ ದ್ವಿಚಕ್ರ ವಾಹನದಲ್ಲಿ ಎಲ್ಲಾ ಕಡೆ ತಿರುಗಾಡಿ  ಆಕ್ಸಿಜನ್ ವ್ಯವಸ್ಥೆ ಮಾಡುವುದಕ್ಕೆ ಯತ್ನಿಸಿದ್ದಾರೆ. ಮರು ದಿನ ಮಧ್ಯಾಹ್ನದ ವೇಳೆಗೆ ಎರಡು ಆಕ್ಸಿಜನ್ ಸಿಲೆಂಡರ ಆತನಿಗೆ ದೊರೆತಿದೆ. ಆದರೆ ಆತನ ಗೆಳೆಯ ದಾಖಲಾದ ಆಸ್ಪತ್ರೆ ಸುತ್ತಮುತ್ತ ಇರಲಿಲ್ಲ. ಗೆಳೆಯನಿಗೆ ಆಕ್ಸಿಜನ್ ಸಿಲಿಂಡರ್ ತಲುಪಿಸಬೇಕಾದರೆ ಬರೋಬ್ಬರಿ 1,200 ಕಿ.ಮೀ ದೂರ ಕ್ರಮಿಸಬೇಕಿತ್ತು!

ದೂರದ ಬಗ್ಗೆ ಯೋಚನೆ ಮಾಡದೇ 1,200 ಕಿ.ಮೀ ಪ್ರಯಾಣಿಸಲು ದೇವೇಂದ್ರ ಕುಮಾರ್ ರೈ ಅಣಿಯಾದರು. ಬೊಕಾರೋದಿಂದ ಹೊರಟ ಆತ ತನ್ನ ಪೋಷಕರಿಗೂ ತಿಳಿಸದೇ ತನ್ನ ಮತ್ತೋರ್ವ ಸ್ನೇಹಿತನಿಂದ ಕಾರು ಪಡೆದು ರಾಂಚಿಯಿಂದ ನೋಯ್ಡಾಗೆ ಸುದೀರ್ಘ ಸಾವಿರದ ಇನ್ನೂರು ಕಿಲೋಮೀಟರುಗಳ ಸಿದ್ಧರಾಗುತ್ತಾರೆ. 1,200 ಕಿ.ಮೀ ದೂರವನ್ನು ಕೇವಲ 15 ಗಂಟೆಗಳಲ್ಲಿ ಸ್ವಲ್ಪವೂ ವಿರಾಮವಿಲ್ಲದೆ ಪ್ರಯಾಣಿಸಿ ಆಕ್ಸಿಜನ್ ವ್ಯವಸ್ಥೆ ಮಾಡಿ ಸ್ನೇಹಿತನಿಗೆ ಆಕ್ಸಿಜನ್ ಸಿಲಿಂಡರ್ ಗಳನ್ನು ತಲುಪಿಸುತ್ತಾನೆ. ಸರಿಯಾದ ಸಮಯದಲ್ಲಿ ಆಕ್ಸಿಜನ್ ವ್ಯವಸ್ಥೆ ಮಾಡಿ ಸಮಸ್ಯೆಯಾಗದಂತೆ ನೋಡಿಕೊಂಡಿದ್ದಾನೆ.

” ಅದಾಗಲೇ ಸಂಜೀವ್ ಸುಮನ್ ಎಂಬ ಸ್ನೇಹಿತನನ್ನು ಕೋವಿಡ್-19 ನಿಂದ ಕಳೆದುಕೊಂಡಿದ್ದೆವು. ಮತ್ತೋರ್ವ ಸ್ನೇಹಿತನನ್ನು ಕಳೆದುಕೊಳ್ಳಲು ನಾವು ಸಿದ್ಧರಿರಲಿಲ್ಲ. ಆದ್ದರಿಂದ 2 ನೆಯ ಅಲೋಚನೆಯೇ ಮಾಡದೇ 1,200 ಕಿ.ಮೀ ದೂರದ ಪ್ರಯಾಣವನ್ನು 15 ಗಂಟೆಗಳಲ್ಲಿ ಕ್ರಮಿಸಿ ಸೂಕ್ತ ಸಮಯಕ್ಕೆ ಆಕ್ಸಿಜನ್ ಪೂರೈಸಿದೆ.  ಇದೀಗ ರಾಜನ್‍ಗೆ ಆಕ್ಸಿಜನ್ ಲಭ್ಯವಾಗಿದ್ದು,ಗೆಳೆಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ” ಎಂದು ದೇವೇಂದ್ರ ಕುಮಾರ್ ರೈ ಹೇಳಿದ್ದಾರೆ.

Leave A Reply

Your email address will not be published.