ಮೂಗಿನೊಳಗೆ ನಿಂಬೆ ಹನಿ ಕಹಾನಿ | ವಿ ಆರ್ ಎಲ್ ಅಧ್ಯಕ್ಷ ವಿಜಯ್ ಸಂಕೇಶ್ವರ ವಿರುದ್ಧ ದೂರು

ಮೂಗಿನೊಳಗೆ ನಿಂಬೆ ಹಣ್ಣಿನ ರಸ ಬಿಟ್ಟುಕೊಂಡರೆ ದೇಹದಲ್ಲಿ ಆಕ್ಸಿಜನ್ ಪ್ರಮಾಣ ಏರಿಕೆಯಾಗುತ್ತದೆ ಎಂದು ಹೇಳಿಕೆ ನೀಡಿರುವ ಆರೋಪದಲ್ಲಿ ಉದ್ಯಮಿ ವಿಜಯ ಸಂಕೇಶ್ವರ್ ವಿರುದ್ಧ ಆರ್ ಟಿಐ ಕಾರ್ಯ ಕರ್ತ, ಯುವ ವಕೀಲ ಭೀಮನ ಗೌಡ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದಾರೆ.

ಸಂಕೇಶ್ವರ್ ಅವರ ಹೇಳಿಕೆಯನ್ನು ಪ್ರಯೋಗ ಮಾಡಿದ ಸಿಂಧನೂರಿನ ಸರ್ಕಾರಿ ಶಾಲೆಯ ಶಿಕ್ಷಕ ಬಸವರಾಜ ಅಸ್ವಸ್ಥರಾಗಿ ಸಾವನ್ನಪ್ಪಿದ್ದರು ಎನ್ನಲಾಗಿತ್ತು. ಆರೀತಿಯ ವರದಿಗಳು ಹಲವು ಪತ್ರಿಕೆಗಳಲ್ಲಿ ಬಂದಿದ್ದವು. ಶಿಕ್ಷಕರ ಕುಟುಂಬವು ಆ ರೀತಿ ಮೊದಮೊದಲು ಆರೋಪಿಸಿತ್ತು. ನಂತರದ ದಿನಗಳಲ್ಲಿ  ಪ್ರಕರಣ ತಿರುವು ಪಡೆದುಕೊಂಡಿದ್ದು ಶಿಕ್ಷಕರ ಕುಟುಂಬವು ಅದು ಲೋ ಬಿಪಿ ಇಂದ ಆದ ಸಾವು, ಮೂಗಿಗೆ ನಿಂಬೆರಸ ಹಾಕುವುದಕ್ಕೂ ಶಿಕ್ಷಕರ ಸಾವಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿತ್ತು. ಆದರೆ ಈಗ ಆಶ್ಚರ್ಯವೆಂಬಂತೆ ಆರ್ಟಿಇ ಕಾರ್ಯಕರ್ತರೊಬ್ಬರು ದೂರು ದಾಖಲಿಸಿದ್ದಾರೆ.

ಕೋವಿಡ್-19 ಸಾಂಕ್ರಮಿಕ ಕಾಲದಲ್ಲಿ ರೋಗ ನಿಯಂತ್ರಣ ಚಿಕಿತ್ಸೆಯ ಬಗ್ಗೆ ಸಾರ್ವಜನಿಕರಿಗೆ ದಾರಿ ತಪ್ಪಿಸುವ ಹೇಳಿಕೆ ನೀಡಿದ ಧಾರವಾಡದ ಮಾಜಿ ಸಂಸದ ಮತ್ತು ವಿ.ಆರ್.ಎಲ್. ಸಂಸ್ಥೆಯ ಅಧ್ಯಕ್ಷ ವಿಜಯ ಸಂಕೇಶ್ವರ ಅವರ ವಿರುದ್ಧ ದೂರು ನೀಡಿದ್ದೇನೆ ಎಂದು ಭೀಮನಗೌಡ ಜಿ ಪರಗೋಡ ಹೇಳಿದ್ದಾರೆ.

Leave A Reply

Your email address will not be published.