ಈಜಿಪ್ಟ್ ನಲ್ಲಿ ಜಗತ್ತಿನ ಮೊದಲ ಗರ್ಭಿಣಿ ‘ ಮಮ್ಮಿ ‘ ಪತ್ತೆ

ಈಜಿಪ್ಟ್’ನ ಪೋಲಿಷ್ ವಿಜ್ಞಾನಿಗಳು ಜಗತ್ತಿನ ಮೊದಲ ಗರ್ಭಿಣಿ ಮಮ್ಮಿಯನ್ನು ಪತ್ತೆಮಾಡಿದ್ದಾರೆ.
ಇದು 2 ಸಾವಿರ ವರ್ಷ ಹಳೆಯ ಮಮ್ಮಿ ಎಂದು ವರದಿ ತಿಳಿಸಿದೆ.

ಈ ಮಹಿಳೆ ಸುಮಾರು 20 ರಿಂದ 30 ವರ್ಷ ವಯಸ್ಸಿನವಳಾಗಿದ್ದಳು ಎಂದು ಸಂಶೋಧಕರು ಅಂದಾಜಿಸಿದ್ದು ಎಕ್ಸರೆ ಮತ್ತು ಕಂಪ್ಯೂಟರ್ ಪರೀಕ್ಷೆಗಳ ಬಳಿಕ ಮಮ್ಮಿಯು ಏಳು ತಿಂಗಳ ಗರ್ಭಿಣಿಯಾಗಿದ್ದಳು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಶವವನ್ನು ಮಮ್ಮಿಯಾಗಿ ಮಾಡುವ ಸಮಯದಲ್ಲಿ ಭ್ರೂಣವನ್ನು ಏಕೆ ಹೊಟ್ಟೆಯಿಂದ ಹೊರತೆಗೆಯಲಿಲ್ಲ ಎನ್ನುವ ಕುತೂಹಲ ಇನ್ನೂ ತಣಿದಿಲ್ಲ. ಸಾಮಾನ್ಯವಾಗಿ ಸತ್ತ ನಂತರ, ಗರ್ಭದಲ್ಲಿ ಮಗು ಇದ್ದರೆ ಅದನ್ನು ತೆಗೆದು ಆನಂತರ ಮಮ್ಮಿ ಮಾಡುವ ಪರಿಪಾಠ ಇತ್ತು ಎನ್ನಲಾಗಿದೆ. ಬಹುಶಃ ಇದು ಗರ್ಭಧಾರಣೆಯನ್ನು ಮರೆಮಾಚುವ ಪ್ರಯತ್ನವಿರಬಹುದು ಎಂದು ಪೋಲಿಷ್ ಅಕಾಡೆಮಿ ಆಫ್ ಸೈನ್ಸಸ್‌ನ ವಿಜ್ಞಾನಿಗಳು ಹೇಳಿದ್ದಾರೆ.

ಇದು ಭ್ರೂಣವನ್ನು ಹೊಂದಿರುವ, ಇಲ್ಲಿಯವರೆಗೆ ದೊರೆತಿರುವ ವಿಶ್ವದ ಏಕೈಕ ಮಮ್ಮಿಯಾಗಿದೆ. ಮಗು ಆಕೆಯ ಹೊಟ್ಟೆಯಲ್ಲಿ ಸತ್ತಿದ್ದರೂ, ಆಕೆ ‘ ಮಮ್ಮಿ ‘ ಆಗಿರೋದು ಮಾತ್ರ ವಾಸ್ತವ.

Leave A Reply

Your email address will not be published.