ಇಸ್ರೇಲ್‌ನಲ್ಲಿ ಕಾಲ್ತುಳಿತಕ್ಕೆ 28 ಮಂದಿ ಸಾವು,50 ಮಂದಿ ಗಂಭೀರ

ಉತ್ತರ ಇಸ್ರೆಲ್​ನಲ್ಲಿ ಸಾರ್ವಜನಿಕ ಸಭೆಯ ವೇಳೆ ನಡೆದ ಕಾಲ್ತುಳಿತದಿಂದ 28 ಮಂದಿ ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದಾರೆ.

ಲ್ಯಾಗ್​ ಬಿ ಓಮರ್​ ಆಚರಿಸಲು ಇಸ್ರೇಲ್​ನ ಮೌಂಟ್​ ಮೆರೂನ್​ನಲ್ಲಿ ಸಾರ್ವಜನಿಕ ಸಭೆ ನಡೆಸಲಾಗಿತ್ತು.

ಇಸ್ರೇಲ್​ನ ಝಕಾ ಎಂಬ ಸ್ವಯಂ ಸೇವಾ ಸಂಸ್ಥೆ ಕಾಲ್ತುಳಿತದ ಕುರಿತು ಮಾಹಿತಿ ನೀಡಿದೆ.

ಗಂಭೀರವಾಗಿ ಗಾಯಗೊಂಡಿರುವ 50ಕ್ಕೂ ಹೆಚ್ಚು ಮಂದಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರಲ್ಲಿ 20 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಡಾ. ಮೆಗೆನ್​ ಡೇವಿಡ್​ ಆ್ಯಡಮ್​ ತಿಳಸಿದ್ದಾರೆ.

ಘಟನೆಯಿಂದ ಗಾಯಗೊಂಡವರನ್ನು ನಹಾರಿಯಾದಲ್ಲಿರುವ ಗಾಲಿಲೀ ಮೆಡಿಕಲ್​ ಸೆಂಟರ್​ ಮತ್ತು ಸಫೆಸ್​ನಲ್ಲಿರುವ ಝೀವ್​ ಆಸ್ಪತ್ರೆಗೆ ಸ್ಥಳಾಂತರಿಸಲು 6 ಹೆಲಿಕಾಪ್ಟರ್​ ಮತ್ತು ಡಜನ್​ಗಟ್ಟಲೆ ಆಂಬ್ಯುಲೆನ್ಸ್​ಗಳು ಕಾರ್ಯನಿರ್ವಹಿಸಿದವು ಎಂದು ಸ್ವಯಂ ಸೇವಾ ಸಂಸ್ಥೆ ಮಾಹಿತಿ ನೀಡಿದೆ.

ಕಾಲ್ತುಳಿತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.

Leave A Reply

Your email address will not be published.