ಬೆಂಗಳೂರಿನಲ್ಲಿ ಕೊರೋನಾ ನೆಗೆಟಿವ್ ರಿಪೋರ್ಟ್ ಜಾಲ ಪತ್ತೆ, ಇಬ್ಬರ ಬಂಧನ

ಬೆಂಗಳೂರಿನಲ್ಲಿ ಸ್ವಾಬ್ ಪಡೆಯದೆ ಕೊರೋನಾ ನೆಗೆಟಿವ್ ರಿಪೋರ್ಟ್ ನೀಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಮುಖೇಶ್ ಸಿಂಗ್ (25) ಹಾಗೂ ನಾಗರಾಜು (39) ಬಂಧಿತ ಆರೋಪಿಗಳು. ಬಂಧಿತರು ಕೊರೋ ನಾ ನೆಗೆಟಿವ್ ರಿಪೋರ್ಟ್ ಬೇಕಾದವರಿಗೆ ಸುಳ್ಳು ರಿಪೋರ್ಟ್ ಸೃಷ್ಟಿ ಮಾಡಿಕೊಡುವುದರಲ್ಲಿ ಸಿದ್ದ ಹಸ್ತರಾಗಿದ್ದರು.

ಬಂಧಿತರಿಂದ ಐದು ನೆಗೆಟಿವ್ ರಿಪೋರ್ಟ್ ಇರುವ ಆರ್ ಟಿ ಪಿಸಿಆರ್ ವರದಿಗಳು ಮತ್ತು ಎರಡು ಮೊಬೈಲ್​ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಎಲ್ಲೆಲ್ಲಿ ನೆಗೆಟಿವ್ ರಿಪೋರ್ಟ್ ನೀಡಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

Leave A Reply

Your email address will not be published.