ಜನತಾ ಕರ್ಫ್ಯೂ ಮತ್ತೂ ಒಂದು ವಾರ ವಿಸ್ತರಣೆ..? | ಹಿರಿಯ ಸಚಿವರ ಅಭಿಪ್ರಾಯ ಏನು?

ಬೆಂಗಳೂರು: ರಾಜ್ಯದಲ್ಲಿ ಸದ್ಯ ಕೊರೋನಾ ಆರ್ಭಟ ನೋಡಿದರೆ ಜನತಾ ಕರ್ಫ್ಯೂ ಮೇ 12ಕ್ಕೆ ಮುಕ್ತಾಯವಾಗುವಂತಹ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಚೈನ್ ಬ್ರೇಕ್ ಮಾಡಲು ಇನ್ನೂ ಒಂದು ವಾರ ಜನತಾ ಕರ್ಫ್ಯೂ ವಿಸ್ತರಿಸುವ ಅನಿವಾರ್ಯತೆ ಸೃಷ್ಟಿಯಾಗಬಹುದು ಎನ್ನುವ ಅಭಿಪ್ರಾಯವನ್ನು ರಾಜ್ಯದ ಇಬ್ಬರು ಹಿರಿಯ ಸಚಿವರು ವ್ಯಕ್ತಪಡಿಸಿದ್ದಾರೆ.

ಸಧ್ಯ ರಾಜ್ಯದಲ್ಲಿ 2 ವಾರ ಜನತಾ ಕರ್ಫ್ಯೂ ಹೇರಲಾಗಿದೆ. ಅದು ಮೇ 12ಕ್ಕೆ ಅಂತ್ಯವಾಗಲಿದೆ. ಆದರೆ 2ನೇ ಅಲೆ ಬ್ರೇಕ್ ಆಗಬೇಕಾದರೆ ಕನಿಷ್ಠ 3 ವಾರ ಅಗತ್ಯವಿದೆ ಎನ್ನುವ ಅಭಿಪ್ರಾಯವನ್ನು ತಜ್ಞರು ಈ ಹಿಂದೆಯೇ ನೀಡಿದ್ದರು. ಆದರೆ 2 ವಾರ ನೋಡಿ 3ನೇ ವಾರಕ್ಕೆ ವಿಸ್ತರಿಸುವ ನಿರ್ಧಾರ ಕೈಗೊಳ್ಳೋಣ ಎಂದು ಸರಕಾರ ಹೇಳಿತ್ತು ಎಂದು ಸಚಿವ ಜಗದೀಶ ಶೆಟ್ಟರ್ ಹೇಳಿದ್ದಾರೆ. ಜನರು ಸಹಕರಿಸಿ, ಕೊರೋನಾ ನಿಯಂತ್ರಣ ಮಾಡದಿದ್ದಲ್ಲಿ ಇನ್ನೂ ಒಂದು ವಾರ ಜನತಾ ಕರ್ಫ್ಯೂ ವಿಸ್ತರಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ. ಇನ್ನು ಸಚಿವ ಆರ್.ಅಶೋಕ್ ಕೂಡ ಇಂತಹುದೇ ಸುಳಿವನ್ನು ನೀಡಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿನ್ನೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ನಡೆಸಿದ ವಿಡೀಯೋ ಸಂವಾದದ ವೇಳೆ ಜನತಾ ಕರ್ಫ್ಯೂ ಉಲ್ಲಂಘಿಸುವವರ ವಿರುದ್ಧ ಮುಲಾಜಿಲ್ಲದೆ ಕ್ರಮಕೈಗೊಳ್ಳಿ ಎಂದಿದ್ದಾರೆ. ಇದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತದೆ.

ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನಕ್ಕೆ 35 ರಿಂದ 40 ಸಾವಿರದ ವರೆಗೆ ಬರುತ್ತಿದೆ. ಸಾವಿನ ಸಂಖ್ಯೆ 270ರ ಗಡಿ ದಾಟುತ್ತಿದೆ. ಬೆಡ್ ಸಿಗದೆ ನರಳಾಟ ಹೆಚ್ಚುತ್ತಿದೆ. ಆದ್ದರಿಂದ ಈ ಬಗ್ಗೆ ಜನರು ಸಹ ಕೋವಿಡ್ ಗಂಭೀರತೆಯನ್ನು ಅರಿತು ಸರಕಾರದೊಂದಿಗೆ ಸಹಕರಿಸಬೇಕು.

Leave A Reply

Your email address will not be published.