15 ತಾಸು ಸತತ ಪಿಪಿಇ ಹಾಕಿದ ಡಾಕ್ಟರ್ ಸ್ಥಿತಿ ಹೇಗಾಯ್ತು ನೋಡಿ !!

ಮಾಸ್ಕ್ ಧರಿಸಲು ನಿರ್ಲಕ್ಷ್ಯವಹಿಸೋರೆಲ್ಲ ಮೊದಲು ಈ ಚಿತ್ರ ನೋಡಬೇಕು. ನಮಗೆ ಮಾಸ್ಕ್ ಹಾಕಲೇ ಇಷ್ಟು ಕಷ್ಟ ಆದರೆ, ಪಿಪಿಇ ಕಿಟ್, ಮಾಸ್ಕ್, ಗ್ಲೌಸ್ ಎಲ್ಲವನ್ನು ಮೈ ತುಂಬಾ ಧರಿಸಿ ಜನರ ಪ್ರಾಣ ಉಳಿಸಲು ಹಗಲಿರುಳು ದುಡಿಯುತ್ತಿರುವ ಕೊರೊನಾ ವಾರಿಯರ್ಸ ದಿನ ನಿತ್ಯ ಪಡುವ ಪಾಡನ್ನು ನೆನೆಪಿಸುವ ಒಂದು ಘಟನೆ ನಡೆದಿದೆ.
ಡಾಕ್ಟರ್ ಒಬ್ಬರು 14-15 ಗಂಟೆಗಳ ಕಾಲ  ಪಿಪಿಇ ಕಿಟ್ ಧರಿಸಿದ್ದರಿಂದ ಮೈಯೆಲ್ಲಾ ಬೆವರಿನಿಂದ ತೇವವಾಗಿ ಪೂರ್ತಿ ಚಂಡಿ ಮುದ್ದೆಯಾಗಿರುವ ಫೋಟೋ ಜಾಲತಾಣದಲ್ಲಿ ವೈರಲ್ ಆಗಿತ್ತು. ವೈದ್ಯರು ಹೇಗೆ ಪ್ರತಿ ದಿನ ರಿಸ್ಕ್ ಎದುರಿಸಿ ಕೆಲಸ ಮಾಡುತ್ತಿದ್ದಾರೆ ಎಂದು ವೈದ್ಯ ಸೋಹಿಲ್ ಪಿಪಿಇ ಕಿಟ್ ಧರಿಸಿದಾಗ ಮತ್ತು ತೆಗೆದಾಗಿನ 2 ಫೋಟೋಗಳನ್ನು ಪಕ್ಕ ಪಕ್ಕ ಇಟ್ಟು ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದರು.

” ಎಲ್ಲಾ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಯ ಪರವಾಗಿ ನಾನು ಹೇಳುತ್ತಿದ್ದೇನೆ. ನಾವು ನಮ್ಮ ಕುಟುಂಬಗಳಿಂದ ದೂರವಿದ್ದು ಶ್ರಮವಹಿಸಿ ಕೆಲಸ ಮಾಡುತ್ತಿದ್ದೇವೆ. ಕೆಲವೊಮ್ಮೆ ಇಲ್ಲಿ ಕೊರೋನಾ ರೋಗಿಗಳಿಂದ ಒಂದು ಅಡಿ ಅಂತರದಲ್ಲೇ ಇದ್ದರೆ ಇನ್ನೂ ಕೆಲವೊಮ್ಮೆ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಂದ ಒಂದಿಂಚು ದೂರ ನಿಂರತುಕೊಂಡೇ ಕಾರ್ಯನಿರ್ವಹಿಸುತ್ತೇವೆ. ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ. ಸುರಕ್ಷಿತವಾಗಿರಿ.” ಎಂದು ವೈದ್ಯ ಸೋಹಿಲ್ ಟ್ವೀಟ್ ಮಾಡಿ ಮನವಿ ಮಾಡಿದ್ದಾರೆ.

ಈ ರೀತಿ ಗಂಟೆಗಟ್ಟಲೆ ಫುಲ್ ಬಾಡಿ ಗೌನ್ ಹಾಕಿ ಕೆಲಸ ಮಾಡುವ ಹಲವು ಕೆಲಸಗಳಿವೆ. ಇವತ್ತಿನ ಕೋವಿಡ್ ಸಂದರ್ಭದಲ್ಲಿನ ವೈದ್ಯರುಗಳು, ನರ್ಸ್ ಗಳು ಪಿಪಿಇ ಕಿಟ್ ಹಾಕಿ ಕೆಲಸ ಮಾಡಿದರೆ, ಅಲ್ಲಿ ಔಷಧ ತಯಾರಿಕಾ ಫಾರ್ಮಾ ಕಂಪನಿಗಳಲ್ಲಿ ಕ್ಲೀನ್ ರೂಮ್ ನಲ್ಲಿ ಕೆಲಸ ಮಾಡುವ ಎಂಪ್ಲಾಯೀಸ್ ವರ್ಷವಿಡಿ ಇದೇ ತರಹದ full-body ಸೂಟು ಹಾಕಿಕೊಂಡು ಕೆಲಸ ಮಾಡಬೇಕಾಗಿರುತ್ತದೆ. ಅದು ಅನಿವಾರ್ಯ ಕೂಡಾ.

Leave A Reply

Your email address will not be published.