ಸೀರಂ ಇನ್ಸ್ಟಿಟ್ಯೂಟ್ ಸಿಇಒ ಆಧಾರ್ ಪೂನಾವಾಲಾಗೆ ಸಿಆರ್ ಪಿಎಫ್ ನಿಂದ ‘ವೈ’ ಕೆಟಗರಿ ಭದ್ರತೆ

ಸಂಭಾವ್ಯ ಬೆದರಿಕೆ” ಎದುರಿಸುತ್ತಿರುವ ಉದ್ಯಮಿ, ಕೋವಿಶೀಲ್ಡ್ ಲಸಿಕೆ ಉತ್ಪಾದಕ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆಧಾರ್ ಪೂನಾವಾಲಾ ಅವರಿಗೆ ಸಿಆರ್‌ಪಿಎಫ್ ಭಾರತದಾದ್ಯಂತ ‘ವೈ’ ಕೆಟಗರಿ ಭದ್ರತೆ ನೀಡಿದೆ.

ಪೂನವಾಲಾಗೆ ಭದ್ರತೆ ಕೋರಿ ಪುಣೆ ಮೂಲದ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ (ಎಸ್‌ಐಐ) ನಿರ್ದೇಶಕ, ಸರ್ಕಾರಿ ಮತ್ತು ನಿಯಂತ್ರಣ ವ್ಯವಹಾರಗಳ ನಿರ್ದೇಶಕ ಪ್ರಕಾಶ್ ಕುಮಾರ್ ಸಿಂಗ್ ಅವರು ಏಪ್ರಿಲ್ 16 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದರು. ಆ ನಂತರ ಪರಿಸ್ಥಿತಿ ಅವಲೋಕಿಸಿ ಕೇಂದ್ರ ಸರ್ಕಾರ ಭದ್ರತೆ ಒದಗಿಸಿದೆ.

ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಭಾರತ ಸರ್ಕಾರದೊಂದಿಗೆ ಕೋವಿಡ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಸೀರಮ್ ಇನ್ಸಿಟ್ಯೂಟ್ ಆಫ್ ಇಂಡಿಯಾ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತಿದೆ. ಸಿಇಒ ಆದಾರ್ ಪೂನಾವಾಲಾ ಅವರಿಗೆ ಲಸಿಕೆ ಸರಬರಾಜಿಗೆ ಸಂಬಂಧಿಸಿದಂತೆ ವಿವಿಧ ಜನರಿಂದ ಅವರಿಗೆ ಬೆದರಿಕೆ ಬರುತ್ತಿವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು. ಈ ಹಿನ್ನಲೆಯಲ್ಲಿ ವೈ ಕೆಟಗರಿ ಭದ್ರತೆ ನೀಡಲಾಗಿದೆ.

ಕೇಂದ್ರ ರಿಸರ್ವ್ ಪೊಲೀಸ್ ಪಡೆಯ(ಸಿಆರ್‌ಪಿಎಫ್) ಸಶಸ್ತ್ರ ಕಮಾಂಡೋಗಳು ಅವರು ದೇಶದ ಯಾವುದೇ ಭಾಗಕ್ಕೆ ಪ್ರಯಾಣಿಸುವಾಗಲೆಲ್ಲಾ ಅವರೊಂದಿಗೆ ಇರುತ್ತಾರೆ. ‘ವೈ’ ಕೆಟಗರಿ ಭದ್ರತೆಯೂ 4-5 ಸಶಸ್ತ್ರ ಕಮಾಂಡೋಗಳನ್ನು ಹೊಂದಿರುತ್ತದೆ.

Leave A Reply

Your email address will not be published.