‘ಮೂಗಿನಲ್ಲಿ ಮೂರು ಹನಿ ಲಿಂಬೆರಸ ಹಾಕಿಕೊಂಡರೆ ಕೋರೋನಾ ಬರಲ್ಲ’ ಎಂಬ ಕಹಾನಿ | ಲಿಂಬೆರಸ ಮೂಗು ಸೇರುತ್ತಲೇ ಒದ್ದಾಡಿ ಪ್ರಾಣ ಬಿಟ್ಟ ಶಿಕ್ಷಕ !!

ರಾಯಚೂರು: ಮೂಗಿನಲ್ಲಿ ಮೂರು ಹನಿ ನಿಂಬೆ ರಸ ಹಾಕಿಕೊಂಡ್ರೆ ಕೊರೊನಾ ವೈರಸ್ ವಕ್ಕರಿಸೋಲ್ಲ ಅನ್ನೋ ವರದಿಗಳು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡ್ತಿದೆ. ಆದ್ರೆ, ಆರೋಗ್ಯವಾಗಿದ್ದ ಶಿಕ್ಷಕರೊಬ್ಬು ಇದನ್ನ ನಂಬಿ ಮೂಗಿನಲ್ಲಿ ನಿಂಬೆ ರಸ ಹಾಕಿಕೊಂಡ ಪರಿಣಾಮ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಿ ಮತಪಟ್ಟಿದ್ದಾರೆ.

ರಾಯಚೂರು ಜಿಲ್ಲೆಯ ಸಿಂಧನೂರು ನಗರದ ನಟರಾಜ ಕಾಲನಿಯಲ್ಲಿ ಈ ಘಟನೆ ನಡೆದಿದ್ದು, ನಗರದ ಶರಣಬಸವೇಶ್ವರ ಕಾಲನಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಬಸವರಾಜ ಮೃತ ಮೃತಪಟ್ಟವರು.

ಮೊನ್ನೆ ತನಕ ಆರೋಗ್ಯವಾಗಿಯೇ ಇದ್ದ 43 ವರ್ಷದ ಬಸವರಾಜ, ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಒಂಚೂರು ಆತಂಕಗೊಂಡಿದ್ದರು. ಆದರೆ ಕೋರೋಣ.ಅವರಿಗೆ ಭಾದಿಸಿರಲಿಲ್ಲ. ಆದರೆ ಮುಂಜಾಗರೂಕತೆಯಿಂದ ಮೂಗಿಗೆ ನಿಂಬೆ ರಸ ಹಾಕಿಕೊಂಡರೆ ಬರುವುದನ್ನು ತಡೆಯಬಹುದು ಎಂದು ಯಾರೋ ಹೇಳಿದ್ದನ್ನು ಕೇಳಿದ್ದಾರೆ. ಹಾಗಾಗಿ ಬೆಳಗ್ಗೆ ಮೂಗಿಗೆ ನಿಂಬೆರಸ ಹಾಕಿಕೊಂಡಿದ್ದಾರೆ. ಬಳಿಕ ಏನಾಯಿತೋ, ಏಕಾಏಕಿ ಒದ್ದಾಡಿ ಮೃತಪಟ್ಟಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.

ದಿನಗಳ ಕೆಳಗೆ ವಿಆರ್‌ಎಲ್ ಸಂಸ್ಥೆಯ ಮುಖ್ಯಸ್ಥ ವಿಜಯ್ ಸಂಕೇಶ್ವರ್ , ‘ಮೂಗಿನಲ್ಲಿ ನಾಲ್ಕು ಹನಿ ಲಿಂಬೆ ರಸ ಹಾಕುವುದರಿಂದ ಆಕ್ಸಿಜನ್‌ ಸಮಸ್ಯೆ ನಿವಾರಣೆಯಾಗುತ್ತೆ. ನಾನು ಇದನ್ನ ಸ್ವತಃ ಪ್ರಯೋಗಿಸಿದ್ದೇನೆ. ಪರಿಚಯದ 200 ಜನರ ಮೇಲೆ ಪ್ರಯೋಗ ಮಾಡಿ ನೋಡಲಾಗಿದೆ. ಅರ್ಧ ಗಂಟೆಯಲ್ಲಿ ಉತ್ತಮ ಫಲಿತಾಂಶ ದೊರೆತಿದೆ. ಇನ್ನು ಮೂಗಿನಲ್ಲಿ ಲಿಂಬೆರಸ ಹಾಕುವುದರಿಂದ ಲಂಗ್ಸ್‌ನಲ್ಲಿರುವ ಕಫ ಕೂಡಾ ಹೊರ ಬರುತ್ತೆ. ಆಗ ಆಕ್ಸಿಜನ್ ಪ್ರಮಾಣ ಹೆಚ್ಚಾಗಿ ಉಸಿರಾಟದ ಸಮಸ್ಯೆ ನಿವಾರಣೆಯಾಗುತ್ತದೆ’ ಎಂದು ಹೇಳಿಕೆ ನೀಡಿದ್ದರು. ವಿಜಯ ಸಂಕೇಶ್ವರ ಅವರ ಸಲಹೆ ಗಿಡಗಳಲ್ಲಿ ಬಂದ ನಂತರ ಅದನ್ನು ಫಾಲೋ ಮಾಡಲು ಹೋಗಿ, ಏನೋ ಹೆಚ್ಚುಕಮ್ಮಿ ಆಗಿ ಆವಗಢ ತಂದುಕೊಂಡರಾ ಗೊತ್ತಿಲ್ಲ.

ಏನೇ ಆಗಲಿ, ಯಾವುದೇ ಆಯುರ್ವೇದಿಕ್ ಸಲಹೆಗಳನ್ನು ಪಾಲಿಸುವಾಗ ಕೂಡ ಕಡ್ಡಾಯವಾಗಿ ಮೆಡಿಕಲ್ ಸುರಕ್ಷತೆ ಗಳನ್ನು ಗಮನದಲ್ಲಿಟ್ಟುಕೊಳ್ಳುವುದು ತುಂಬಾ ಮುಖ್ಯ.

Leave A Reply

Your email address will not be published.