ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಮತ್ತು ನಟ ರಕ್ಷಿತ್ ಮದುವೆ ?!

ಸ್ಯಾಂಡಲ್ವುಡ್ ಮಾಜಿ ನಟಿ ಮತ್ತು ರಿಟೈರ್ಡ್ ರಾಜಕಾರಣಿ, ಸ್ಯಾಂಡಲ್ವುಡ್ ನ ಮಾಜಿ ಕ್ವೀನ್ ರಮ್ಯಾ ನಟ ರಕ್ಷಿತ್ ಅವರನ್ನು ಮದುವೆ ಆಗ್ತಾರಾ ?! ಹೀಗೊಂದು ಪ್ರಶ್ನೆ ಎದ್ದಿದೆ.  

ಸಿನಿಮಾ ಬಿಟ್ಟು ರಾಜಕೀಯದಲ್ಲಿ ಸಕ್ರಿಯರಾಗಿದ್ದ ಸ್ಯಾಂಡಲ್ವುಡ್ ನ ಕ್ವೀನ್ ರಮ್ಯಾ ಇದೀಗ ಕೆಲ ವರ್ಷಗಳಿಂದ ರಾಜಕೀಯದಲ್ಲೂ ಕಾಣಿಸುತ್ತಿಲ್ಲ.
ಈ ವಿಚಾರವಾಗಿ ಕೆಲ ಅಭಿಮಾನಿಗಳು ನಾನಾ ಪ್ರಶ್ನೆಗಳನ್ನು ಕೇಳಿದ್ದು ಇದಕ್ಕೆಲ್ಲಾ ರಮ್ಯಾ ಉತ್ತರ ನೀಡಿದ್ದಾರೆ. 

ಇನ್ ಸ್ಟಾಗ್ರಾಮ್ ನಲ್ಲಿ ಅಭಿಮಾನಿಗಳ ಕೇಳಿದ ಪ್ರಶ್ನೆಗಳಿಗೆ ರಮ್ಯಾ ನೇರವಾಗಿ ಉತ್ತರಿಸಿದ್ದರು. ಆಗ   ‘ ಸದ್ಯಕ್ಕೆ ಸಿನಿಮಾ ಮತ್ತು ರಾಜಕೀಯಕ್ಕೆ ಗುಡ್ ಹೇಳುವ ಸಮಯ ಬಂದಿದೆ’ ಎಂದಿದ್ದಾರೆ. 
ಈ ಎರಡಕ್ಕೂ ವಿದಾಯ ಹೇಳಿದ ಮೇಲೆ ಇನ್ನೊಂದು ಉದ್ಯೋಗ (ಮದುವೆ ?!!) ಬೇಕಲ್ಲಾ, ಹಾಗೆ ಮದುವೆ ಕುರಿತಂತೆ ಅಭಿಮಾನಿಗಳು  ” ನೀವು ನಟ ರಕ್ಷಿತ್ ಶೆಟ್ಟಿ ಅವರನ್ನು ಮದುವೆಯಾಗಿ ” ಎಂದು ಸಲಹೆ ನೀಡಿದ್ದಾರೆ. ಇದಕ್ಕೆ ಸದಾ ಆಂಗ್ರಿ ಆಗೆ ಮಾತಾಡುವ ಒಂದು ಕಾಲದ ಹಾಟ್ ಬ್ಯೂಟಿ, ಈಗ ಸಕತ್ ಕೂಲ್ ಆಗಿಯೇ ಉತ್ತರಿಸಿದ್ದಾರೆ.

” ಮದುವೆ, ಮದುವೆ, ಮದುವೆ ಪದ ಕೇಳಿ ಕೇಳಿ ಈಗ ಸಾಕಾಗಿದೆ, ಇದೀಗ ಆ ಮಾತು ಕೇಳಿದರೆ ಫನ್ನಿ ಎನ್ನಿಸುತ್ತಿದೆ. ಮದುವೆ ಆಗದೇ ಜೀವನದಲ್ಲಿ ಸುಖವಾಗಿರಲು ಸಾಧ್ಯ ಇಲ್ಲವಾ? ” ಎಂದು ಮರು ಪ್ರಶ್ನೆ ಕೇಳಿದ್ದಾರೆ. 
ಹಾಗಾದರೆ ನಿಮಗೆ ಯಾವ ರೀತಿಯ ಹುಡುಗ ಬೇಕು ಎಂದು ಕೇಳಿದ ಪ್ರಶ್ನೆಗೆ, ಸಹಾನುಭೂತಿ, ಕರುಣೆ ಮತ್ತು ಮುಕ್ತ ಮನಸ್ಸು ಇರುವ ವ್ಯಕ್ತಿ ಬೇಕು ಎಂದು ಉತ್ತರಿಸಿದ್ದಾರೆ. ಇನ್ನು ತಾವು ಯಾರ ಜೊತೆಗೂ ಡೇಟಿಂಗ್ ಮಾಡುತ್ತಿಲ್ಲ ಎಂದು ಹೇಳಿದ್ದಾರೆ. 

Leave A Reply

Your email address will not be published.