ಕಡಬ | ದುರ್ವರ್ತನೆ ತೋರಿದ ನಾಲ್ವರು ಯುವಕರ ಆರೆಸ್ಟ್

ಕಡಬದಲ್ಲಿ ಪೊಲಿಸರೊಂದಿಗೆ ದುರ್ವರ್ತನೆ ತೋರಿದ ನಾಲ್ವರು ಯುವಕರನ್ನು ಕಡಬ ಪೊಲೀಸರು ವಶಕ್ಕೆ ತೆಗೆದುಕೊಂಡ ಘಟನೆ ನಡೆದಿದೆ.

ಇಲ್ಲಿನ ಮರ್ದಾಳ ಪೇಟೆಯಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿದ್ದರು. ಆ ವೇಳೆ ವೇಳೆ ನಾಲ್ವರು ಯುವಕರು ಬೈಕಿನಲ್ಲಿ ಬಂದಿದ್ದು ಈ ವೇಳೆ ಹೆಲ್ಮಟ್ ಮಾಸ್ಕ್ ಧರಿಸಿರಲಿಲ್ಲ. ಇದನ್ನು ಪೊಲೀಸರ ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

ಆಗ ಪೊಲೀಸರೊಂದಿಗೆ ಮಾತಿನ ಚಕಮಕಿ ಹೇಳಿದ ಯುವಕರು ಘಟನಾ ಸ್ಥಳಕ್ಕೆ ಎಸ್.ಐ. ಬರಬೇಕೆಂದು ಪಟ್ಟು ಹಿಡಿದಿದ್ದರು.

ಅಂತೆಯೇ ಅಲ್ಲಿಗೆ ಬಂದ ಎಸ್.ಐ ರುಕ್ಕ ನಾಯ್ಕ ಅವರು ತೆರಳಿ ಯುವಕರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ನಂತರ ಅವರನ್ನು ಕಡಬ ಸ್ಟೇಶನ್ ಗೆ ಕರೆದೊಯ್ಯಲಾಗಿದೆ.

Leave A Reply

Your email address will not be published.