ಮಾಲ್ಡೀವ್ಸ್ ಗೆ ಪ್ರವೇಶ ನಿಷೇಧ | ಎಂಜಾಯ್ ಮಾಡಲು ತೆರಳಿದ್ದ ಬಾಲಿವುಡ್ ಬೆಡಗಿಯರು ವಾಪಸ್ !

ಬಾಲಿವುಡ್ ನ ನಟ ನಟಿಯರೂ ಸೇರಿದಂತೆ ಎಲ್ಲಾ ಭಾರತೀಯ ಪ್ರಜೆಗಳನ್ನು ಮಾಲ್ಡೀವ್ಸ್ ಆಡಳಿತ ಭಾರತೀಯರ ಭೇಟಿಯನ್ನು ನಿರ್ಬಂಧಿಸಿದೆ. ಏಪ್ರಿಲ್ 27 ರಿಂದ ಭಾರತೀಯ ಪ್ರವಾಸಿಗರಿಗೆ ಆತಿಥ್ಯ ನೀಡದಂತೆ ತನ್ನ ಪ್ರಮುಖ ಪ್ರವಾಸಿ ತಾಣಗಳ ಮೇಲೆ ನಿಯಂತ್ರಣ ಹೇರಿದೆ.

ಹೀಗಾಗಿ ಮಾಲ್ಡಿವ್ಸ್ ಎಂಬ ಭೂ ಸ್ವರ್ಗದ ಬೀಚುಗಳಲ್ಲಿ ಕನಿಷ್ಟ ಬಟ್ಟೆ ತೊಟ್ಟು, ತಮ್ಮನ್ನು ತಾವು ಸುವಿಶಾಲ ನೀಲಿ ಸಮುದ್ರದ ದಂಡೆಗಳ ಬಳಿಯಲ್ಲಿ ಕಳೆದುಹೋಗುತ್ತ, ಜೀವನದ ಗರಿಷ್ಠ ಸುಖ ಅನುಭವಿಸುತ್ತಿದ್ದ ಬಾಲಿವುಡ್ ನ ಮಂದಿ ಇದೀಗ ಶೀಘ್ರ ವಾಪಸ್ ಬರಬೇಕಾಗಿದೆ. ಅಲ್ಲಿಗೆ ಈ ಸಮ್ಮರ್ ವೆಕೇಶನ್ ಪ್ಲಾನ್ ಮಾಡಿಕೊಂಡವರ ಪ್ಲಾನ್ ಕ್ಯಾನ್ಸಲ್ ಆಗಿದೆ.
ಒಂದು ಸುಂದರ ವೆಕೇಶನ್ ಎಂಜಾಯ್ ಮಾಡುವುದರ ಜತೆಗೆ ಕೊರೋನಾ ಸಂಕಷ್ಟ ತಪ್ಪಿಸಿಕೊಳ್ಳುವ ಪ್ಲಾನ್ ನಲ್ಲಿದ್ದ ಸೆಲೆಬ್ರೇಟಿಗಳಿಗೆ ಶಾಕ್ ಎದುರಾಗಿದೆ.

ಕೊರೋನಾ ಎರಡನೆ ಅಲೆ ಭಾರತದಲ್ಲಿ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ವಿಶ್ವದ ಹಲವು ರಾಷ್ಟ್ರಗಳು ಭಾರತಕ್ಕೆ ಭೇಟಿ ನೀಡದಂತೆೆ ತನ್ನ ನಾಗರೀಕರಿಗೆ ಸೂಚಿಸಿ ಇಲ್ಲಿನ ವಿಮಾನಗಳ ಮೇಲೂ ನಿಯಂತ್ರಣ ಹೇರಿದೆ. ಭಾರತದಲ್ಲಿ ಕೋರೋನಾ ವಿಜೃಂಭಿಸುತ್ತಿದ್ದಂತೆ, ಇಲ್ಲಿ ಸಿನಿಮಾ ಕೆಲಸ ಕಡಿಮೆ ಆಯಿತು. ಅಲ್ಲದೆ ಕೋರೋನಾ ಹಬ್ಬುತ್ತಿದ್ದಂತೆ ದೊಡ್ಡ ದೊಡ್ಡ ಬಾಲಿವುಡ್ ಸೆಲೆಬ್ರಿಟಿಗಳು ಮಾಲ್ಡೀವ್ಸ್ ಗೆ ಹಾರಿದ್ದರು.

ಬಾಲಿವುಡ್‌ ತಾರೆಗಳಾದ ದಿಶಾ ಪಟಾನಿ, ಸಾರಾ ಅಲಿ ಖಾನ್‌, ಆಲಿಯಾ ಭಟ್‌, ರಣಬೀರ್‌ ಕಪೂರ್‌ ಸೇರಿದಂತೆ ಹಲವರು ಮಾಲ್ಡೀವ್ಸ್‌ ನಲ್ಲಿ ತಾವು ವಿಹಾರಕ್ಕೆ ಹೋಗಿದ್ದರು. ಈಗಾಗಲೇ ಮಾಲ್ಡೀವ್ಸ್ ಗೆ ಪ್ರಯಾಣ ಬೆಳೆಸಿದ್ದ ಬಾಲಿವುಡ್ ನ ಲವ್ ಬರ್ಡ್ಸ್ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್, ಜಾಹ್ನವಿ ಕಪೂರ್, ಟೈಗರ್ ಶ್ರಾಫ್ ಸೇರಿದಂತೆ ಹಲವರು ವಾಪಸ್ಸಾಗಿದ್ದಾರೆ.

ಇಲ್ಲಿ ಜನರು ಸಾಯುತ್ತಿದ್ದಾರೆ. ನೀವು ಅಲ್ಲಿ ಮಾಲ್ಡೀವ್ಸ್ ನಲ್ಲಿ ಮೋಜು-ಮಸ್ತಿ ಮಾಡುತ್ತಿದ್ದೀರಾ ಎಂದು ಬಾಲಿವುಡ್ ನಟರ ವಿರುದ್ಧ ನವಾಜುದ್ದೀನ್ ಸಿದ್ದಿಕಿ ಮತ್ತಿತರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.