ನಟಿ ಮಾಲಾಶ್ರೀ ಪತಿ ಬಿಗ್‌ಬಜೆಟ್ ಚಿತ್ರ ನಿರ್ಮಾಪಕ ಕೋಟಿ ರಾಮು ಕೊರೊನಾಗೆ ಬಲಿ

ಕನ್ನಡದ ಖ್ಯಾತ ನಟಿ ಮಾಲಾಶ್ರೀ ಅವರ ಪತಿ,ಬಿಗ್‌ಬಜೆಟ್ ಚಿತ್ರಗಳ ನಿರ್ಮಾಪಕ ಕೋಟಿ ರಾಮು ಅವರು ಕೊರೊನ ಸೊಂಕಿನಿಂದ ಮೃತಪಟ್ಟಿದ್ದಾರೆ.

ಕೊರೊನಾ ಸೊಂಕಿನಿಂದ ಬಳುತ್ತಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಕಳೆದ ಒಂದು ವಾರದ ಹಿಂದೆ ಅವರಿಗೆ ಕೊರೊನ ಸೊಂಕು ಇರುವುದು ಪತ್ತೆಯಾಗಿತ್ತು, ಮೂರು ದಿನದ ಹಿಂದೆ ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದರು.

ತುಮಕೂರು ಜಿಲ್ಲೆ ಕುಣಿಗಲ್‌ ಮೂಲದ ರಾಮು ಅವರು ಕನ್ನಡ ಸಿನಿಮಾ ರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದರು, ಕನ್ನಡದ ಪ್ರಖ್ಯಾತ ನಟರ ಸಿನಿಮಾಗಳಿಗೆ ಅವರು ಬಂಡವಾಳ ಹೂಡಿ ಕೋಟಿ ನಿರ್ಮಾಪಕ ರಾಮು ಅಂತ ಹೆಸರು ಪಡೆದುಕೊಂಡಿದ್ದರು.

ಎ. ಕೆ 47, ಕಲಾಸಿಪಾಳ್ಯ ಸಹಿತ 37ಕ್ಕೂ ಅಧಿಕ ಚಲನಚಿತ್ರ ನಿರ್ಮಿಸಿದ್ದರು.

Leave A Reply

Your email address will not be published.