ನಾಳೆಯಿಂದ ಲಾಕ್ ಡೌನ್ ಕತೆ ಏನು ? ಇಲ್ಲಿದೆ ಫುಲ್ ಡೀಟೇಲ್ಸ್ !

ರಾಜ್ಯದಲ್ಲಿ ವೀಕೆಂಡ್ ಕರ್ಪ್ಯೂವನ್ನು ಬೇರೆ ದಿನಗಳಿಗೆ ವಿಸ್ತರಿಸುವ ಯಾವುದೇ ಪ್ರಸ್ತಾಪ ರಾಜ್ಯ ಸರ್ಕಾರದ ಮುಂದಿಲ್ಲ. ಸದ್ಯ ಇರುವ ವೀಕ್ ಎಂಡ್ ಕರ್ಫ್ಯೂ ಮುಂದುವರೆಯಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ಆರ್.ಟಿ ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀಕೆಂಡ್ ಕರ್ಪ್ಯೂಗೆ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ಅದನ್ನೇ ನಾಳೆ ಸೋಮವಾರದಿಂದ ಮುಂದುವರಿಸುತ್ತೇವೆ ಎನ್ನುವುದು ಸುಳ್ಳು. ನಾಳೆಯಿಂದ ಜೀವನ ಮಾಮೂಲಾಗಿದ್ದು, ಸಂಜೆ 9 ರಿಂದ ಬೆಳಗ್ಗಿನ 5 ತನಕ ಕರ್ಫ್ಯೂ ಇರಲಿದೆ ಎಂದಿದ್ದಾರೆ.

ಸದ್ಯ ಟೋಟಲ್ ಲಾಕ್ ಡೌನ್ ಮಾತುಕತೆಯ ಚರ್ಚೆ ಸರ್ಕಾರದ ಮಟ್ಟದಲ್ಲಿ ನಡೆದಿಲ್ಲ. ಅಂತಹ ಪ್ರಸ್ತಾಪವೂ ಸರ್ಕಾರದ ಮುಂದಿಲ್ಲ. ಸದ್ಯ ಈಗ ವಾರಾಂತ್ಯ ಎರಡು ದಿನ ಸಂಪೂರ್ಣ ಕರ್ಫ್ಯೂ, ಬಾಕಿ ಐದು ದಿನ ಮಾರ್ಗಸೂಚಿಯಂತೆ ರಾತ್ರಿ ಕರ್ಪ್ಯೂ ಮುಂದುವರೆಯಲಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಕೊರೊನಾ ಲಸಿಕೆ ಕೊರತೆ ಬಗ್ಗೆ ಗಮನಕ್ಕೆ ಬಂದಿದೆ. ಶೀಘ್ರದಲ್ಲಿ ಲಸಿಕೆ ಸಮಸ್ಯೆ ಬಗೆಹರಿಸಲಾಗುವುದು. ರಾಜ್ಯಕ್ಕೆ ಹೆಚ್ಚುವರಿಯಾಗಿ 300ರಿಂದ 800 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಕೆ ಮಾಡಲು ಕೇಂದ್ರ ಸರ್ಕಾರ ಒಪ್ಪಿದೆ. ಅಲ್ಲದೇ 50,000ರಿಂದ 1,22,000 ರೆಮ್ ಡಿಸಿವಿರ್ ಲಸಿಕೆ ನೀಡುವುದಾಗಿ ಭರವಸೆ ನೀಡಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಜನರು ಸಾಮಾಜಿಕ ಅಂತರ, ಮಾಸ್ಕ್ ಧರಿಸಿ ಕೋವಿಡ್ ನಿಯಮ ಪಾಲಿಸಿಕೊಂಡು ಕೊರೊನಾ ಎದುರಿಸಲು ನಾವೆಲ್ಲ ಸಿದ್ಧರಾಗಬೇಕಿದೆ ಎಂದು ಈ ಸಂದರ್ಭದಲ್ಲಿ ಅವರು ತಿಳಿಸಿದರು.

1 Comment
  1. Mandeep says

    Whether there is bus to puttur at manfalore

Leave A Reply

Your email address will not be published.