Day: April 25, 2021

ಸೋಂಕಿತ ತಾಯಿ ಮುಖ ನೋಡಲು ಬಿಡದ ವ್ಯವಸ್ಥೆ | ಯುವಕ ಆಸ್ಪತ್ರೆಯ ಕಟ್ಟಡದ ಮೇಲೇರಿ ಆತ್ಮಹತ್ಯೆಗೆ ಯತ್ನ

ತನ್ನ ಸೋಂಕಿತ ತಾಯಿಯ ಮುಖ ನೋಡಲು ಬಿಟ್ಟಿಲ್ಲ ಎಂದು ಮನನೊಂದು ಆಸ್ಪತ್ರೆಯ ಕಟ್ಟಡದ ಮೇಲೇರಿದ ಯುವಕ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ. ಯುವಕನ ತಾಯಿ ಆಸ್ಪತ್ರೆಯಲ್ಲಿ ಕಳೆದ 12 ದಿನಗಳಿಂದಚಿಕಿತ್ಸೆ ಪಡೆಯುತ್ತಿದ್ದರು. ತಾಯಿ ಆರೋಗ್ಯ ಸ್ಥಿತಿ ಬಗ್ಗೆ ಸರಿಯಾದ ಮಾಹಿತಿ ಸಿಗದ ಹಿನ್ನಲೆ ಖಿನ್ನತೆಗೆ ಒಳಗಾಗಿರುವ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದನು. ಅದೇ ಒತ್ತಡದಲ್ಲಿ ಈ ಯುವಕ ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ಬೆಳಗ್ಗೆ ಐದು ಗಂಟೆ ಸುಮಾರಿಗೆ ಆಸ್ಪತ್ರೆಯ ಕಟ್ಟಡದ ಮೇಲೇರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. …

ಸೋಂಕಿತ ತಾಯಿ ಮುಖ ನೋಡಲು ಬಿಡದ ವ್ಯವಸ್ಥೆ | ಯುವಕ ಆಸ್ಪತ್ರೆಯ ಕಟ್ಟಡದ ಮೇಲೇರಿ ಆತ್ಮಹತ್ಯೆಗೆ ಯತ್ನ Read More »

Breaking News | ಇನ್ನು ಅಂತ್ಯಸಂಸ್ಕಾರಕ್ಕೆ ಕೇವಲ 5 ಜನ ಮಾತ್ರ | ರಾಜ್ಯ ಸರಕಾರದಿಂದ ಕಠಿಣ ನಿಯಮಾವಳಿ ಜಾರಿ !

ಕರ್ನಾಟಕ ರಾಜ್ಯದಲ್ಲಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಕೇವಲ ಐದು ಮಂದಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಈ ಸಂಬಂಧ ರಾಜ್ಯ ಸರ್ಕಾರ ಭಾನುವಾರ ಹೊಸ ಮಾರ್ಗಸೂಚಿ ಹೊರಡಿಸಿದೆ. ಕೊರೋನಾ ಮಾರ್ಗಸೂಚಿ ಕಡ್ಡಾಯ ಪಾಲಿಸಿದ ಮೇಲೆ ಮಾತ್ರ ಶವಸಂಸ್ಕಾರದಲ್ಲಿ ಭಾಗವಹಿಸಬಹುದು.ಕೇವಲ ಐವರಿಗೆ ಮಾತ್ರ ಅನುಮತಿ ನೀಡಲಾಗುವುದು ಎಂದು ಸರ್ಕಾರ ಹೇಳಿದೆ. ಕೊರೋನಾದಿಂದ ಮೃತಪಟ್ಟವರ ಅಂತ್ಯಕ್ರಿಯೆ ಗೌರವಯುತವಾಗಿ ನಡೆಯುತ್ತಿಲ್ಲ ಎಂಬ ಆರೋಪದ ಮಧ್ಯೆಯೇ ಸರ್ಕಾರದ ಹೊಸ ನಿಯಮ ಜಾರಿಗೆ ಬಂದಿದೆ. ಇದು ಸಾರ್ವಜನಿಕರಿಗೆ ಒಂದು ದೊಡ್ಡ ಎಚ್ಚರಿಕೆಯ ಗಂಟೆಯಾಗಿದೆ. ಇನ್ನಾದರೂ ಕಟ್ಟುನಿಟ್ಟಾಗಿ ಕೋರೋನಾ …

Breaking News | ಇನ್ನು ಅಂತ್ಯಸಂಸ್ಕಾರಕ್ಕೆ ಕೇವಲ 5 ಜನ ಮಾತ್ರ | ರಾಜ್ಯ ಸರಕಾರದಿಂದ ಕಠಿಣ ನಿಯಮಾವಳಿ ಜಾರಿ ! Read More »

ಮಹಾಮಾರಿ ಕೊರೋನಾಗೆ ದ.ಕ. ಜಿಲ್ಲೆ ತತ್ತರ | ಇಂದು ಮತ್ತಷ್ಟು ಏರಿಕೆಯಾದ ಸೋಂಕಿತರ ಸಂಖ್ಯೆ

ದ. ಕ. ಜಿಲ್ಲೆಯಲ್ಲಿ ಭಾನುವಾರದಂದು ಕೊರೋನಾ ಮತ್ತಷ್ಟು ಆರ್ಭಟಿಸಿದೆ. ಇಂದು ಒಂದೇ ದಿನ ಬರೋಬ್ಬರಿ 564 ಕೋವಿಡ್ ಪ್ರಕರಣಗಳು ಕಾಣಿಸಿಕೊಂಡಿವೆ. ಜಿಲ್ಲೆಯಲ್ಲಿ ಇಂದು ಸೋಂಕಿನಿಂದ ಒಬ್ಬರು ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 3975 ಸಕ್ರಿಯ ಪ್ರಕರಣಗಳಿದ್ದು, ಇಂದು 165 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಕೊರೋನಾ ಹೇಗಿದೆ..? ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ಒಟ್ಟು 34,804 ಮಂದಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, 143 ಜನ ಸಾವನ್ನಪ್ಪಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 13,39,201ಕ್ಕೆ ಏರಿಕೆಯಾಗಿದೆ.ಇನ್ನು ಒಟ್ಟು ಸಾವನ್ನಪ್ಪಿದವರ …

ಮಹಾಮಾರಿ ಕೊರೋನಾಗೆ ದ.ಕ. ಜಿಲ್ಲೆ ತತ್ತರ | ಇಂದು ಮತ್ತಷ್ಟು ಏರಿಕೆಯಾದ ಸೋಂಕಿತರ ಸಂಖ್ಯೆ Read More »

ಕಡಬ | ಮೇಯಲು ಬಿಟ್ಟ ಆಡಿನ ಮೇಲೆ ಹಗಲಿನ ಹೊತ್ತಿನಲ್ಲೇ ಚಿರತೆ ದಾಳಿ

ಕಡಬ ತಾಲೂಕಿನ ಮರ್ದಾಳದ ಐತ್ತೂರು‌ ಗ್ರಾಮದಲ್ಲಿ ಮೇಯುತ್ತಿದ್ದ ಆಡಿನ ಮೇಲೆ ಹಠಾತ್ತನೆ ಚಿರತೆ ದಾಳಿ‌ಮಾಡಿ ಪರಾರಿಯಾದ ಘಟನೆ ಇಂದು ಸಂಜೆ ನಡೆದಿದೆ. ಐತ್ತೂರು ಗ್ರಾಮದ ಕೋಕಲ ರಾಘವ ಪೂಜಾರಿ ಎಂಬವರು ತನ್ನ ಮೂರು ಆಡುಗಳನ್ನು ಮೇಯಲು ಪಕ್ಕದಲ್ಲಿರುವ ಅಡ್ಕದಲ್ಲಿ ಬಿಟ್ಟಿದ್ದರು. ಮೇಯಲು ಬಿಟ್ಟಿದ್ದ ಆಡುಗಳನ್ನು ವಾಪಾಸು ಮನೆಗೆ ಕರೆತರಲು ರಾಘವ ಅವರ ಮಗ ಧನಂಜಯ ಅಲ್ಲಿಗೆ ತೆರಳುವಾಗ ಈ ಘಟನೆ ಸಂಭವಿಸಿದೆ.  ಸಂಜೆ ಸುಮಾರು 5:30 ರ ಸಮಯಕ್ಕೆ  ಪೊದೆಯಂಚಿನಿಂದ ಧುಮುಕಿ ಬಂದ ಚಿರತೆಯು ಇದ್ದುದರಲ್ಲಿ ದೊಡ್ಡ …

ಕಡಬ | ಮೇಯಲು ಬಿಟ್ಟ ಆಡಿನ ಮೇಲೆ ಹಗಲಿನ ಹೊತ್ತಿನಲ್ಲೇ ಚಿರತೆ ದಾಳಿ Read More »

ನಿಶ್ಚಿತಾರ್ಥ ಮಾಡಿಕೊಂಡ ವಿದ್ಯಾಶ್ರೀ, ಇರ್ಷಾದ್ ಜೊತೆಗೆ ಪರಾರಿ | ಆನಂತರ ನಡೆದದ್ದು ದುರಂತ !

ಇರ್ಷಾದ್ ಮತ್ತು ವಿದ್ಯಾಶ್ರೀ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಈ ಅಂತರ್ಧರ್ಮೀಯ ಮದುವೆಗೆ ಆಕೆಯ ಪ್ರೀತಿಗೆ ಅಡ್ಡಿಯಾಗಿ ಮನೆಯವರು ನಿಂತಿದ್ದರು. ಆಕೆಯನ್ನು ಆಕೆಯ ಇಷ್ಟಕ್ಕೆ ವಿರುದ್ಧವಾಗಿ ಬೇರೆ ಯುವಕನೊಂದಿಗೆ ನಿಶ್ಚಿತಾರ್ಥ ಮಾಡಿದ್ದರು ಮನೆಯವರು. ನಿಶ್ಚಿತಾರ್ಥವಾದ ಬೆನ್ನೆಲ್ಲೆ ಅವರಿಬ್ಬರೂ ಮನೆ ಬಿಟ್ಟು ದೂರ ಓಡಿ ಹೋಗಿದ್ದರು. ಬೆನ್ನಲ್ಲೇ ಮನನೊಂದ ಯುವತಿ ತನ್ನ ಪ್ರಿಯತಮನೊಂದಿಗೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾವೇರಿ ಜಿಲ್ಲೆಯ ನಾಗನೂರು ಗ್ರಾಮದಲ್ಲಿ ನಡೆದಿದೆ. ಇರ್ಷಾದ್ (23) ಹಾಗೂ ವಿದ್ಯಾಶ್ರೀ (22) ಮೃತ ದುರ್ದೈವಿಗಳು, ವಿದ್ಯಾಶ್ರೀ ಹಾಗೂ …

ನಿಶ್ಚಿತಾರ್ಥ ಮಾಡಿಕೊಂಡ ವಿದ್ಯಾಶ್ರೀ, ಇರ್ಷಾದ್ ಜೊತೆಗೆ ಪರಾರಿ | ಆನಂತರ ನಡೆದದ್ದು ದುರಂತ ! Read More »

ನಾಳೆಯಿಂದ ಲಾಕ್ ಡೌನ್ ಕತೆ ಏನು ? ಇಲ್ಲಿದೆ ಫುಲ್ ಡೀಟೇಲ್ಸ್ !

ರಾಜ್ಯದಲ್ಲಿ ವೀಕೆಂಡ್ ಕರ್ಪ್ಯೂವನ್ನು ಬೇರೆ ದಿನಗಳಿಗೆ ವಿಸ್ತರಿಸುವ ಯಾವುದೇ ಪ್ರಸ್ತಾಪ ರಾಜ್ಯ ಸರ್ಕಾರದ ಮುಂದಿಲ್ಲ. ಸದ್ಯ ಇರುವ ವೀಕ್ ಎಂಡ್ ಕರ್ಫ್ಯೂ ಮುಂದುವರೆಯಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಆರ್.ಟಿ ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀಕೆಂಡ್ ಕರ್ಪ್ಯೂಗೆ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ಅದನ್ನೇ ನಾಳೆ ಸೋಮವಾರದಿಂದ ಮುಂದುವರಿಸುತ್ತೇವೆ ಎನ್ನುವುದು ಸುಳ್ಳು. ನಾಳೆಯಿಂದ ಜೀವನ ಮಾಮೂಲಾಗಿದ್ದು, ಸಂಜೆ 9 ರಿಂದ ಬೆಳಗ್ಗಿನ 5 ತನಕ ಕರ್ಫ್ಯೂ ಇರಲಿದೆ ಎಂದಿದ್ದಾರೆ. ಸದ್ಯ ಟೋಟಲ್ …

ನಾಳೆಯಿಂದ ಲಾಕ್ ಡೌನ್ ಕತೆ ಏನು ? ಇಲ್ಲಿದೆ ಫುಲ್ ಡೀಟೇಲ್ಸ್ ! Read More »

ಪಡುಮಲೆ ಕ್ಷೇತ್ರದಲ್ಲಿ ಆರಾಧನೆ ಆರಂಭಗೊಳ್ಳುತ್ತಿದ್ದಂತೆ ನಾಗ ಪ್ರತ್ಯಕ್ಷ..500 ವರ್ಷದಿಂದ ಪಡುಮಲೆ ಸಾನಿಧ್ಯದಲ್ಲಿ ಸ್ಥಗಿಗೊಂಡಿದ್ದ ನಾಗಬೆರ್ಮೆರ್, ಚಿತ್ರಕೂಟ ಸಂಕಲ್ಪ, ರಕ್ತೇಶ್ವರೀ, ದೇಯಿಬೈದ್ಯೇತಿಯ ಸಮಾಧಿ ಸ್ಥಳದಲ್ಲಿ ಏ.24ರಿಂದ ಪೂಜಾರಾಂಭ

500 ವರ್ಷದಿಂದ ಪಡುಮಲೆ ಸಾನಿಧ್ಯದಲ್ಲಿ ನಿಂತಿದ್ದ ಪೂಜಾ ವಿಧಿ ವಿಧಾನಗಳಿಗೆ ಏ.24ರ ಮೀನ ಸುಮುಹೂರ್ತದಲ್ಲಿ ಕೋವೀಡ್ ನಿಯಮಾನುಸಾರ ಹಾಗೂ ಸೀಮಿತ ಭಕ್ತರ ಸಮ್ಮುಖದಲ್ಲಿ ಚಾಲನೆ ದೊರೆಯಿತು. ಆದರೆ ಕುಂಬಳೆ ಸೀಮೆ ಅರ್ಚಕರ ವೈಭವದ ವೇದಗೋಷ ಆರಂಭಗೊಳ್ಳುತ್ತಿದ್ದಂತೆ ಸಾನಿಧ್ಯದಡೆಗೆ ನಾಗಗಳ ಆಗಮವಾಗುತ್ತಿದ್ದು, ಭಕ್ತರಲ್ಲಿ ಭಯ ಭಕ್ತಿ ಹಾಗೂ ಅಚ್ಚರಿ ಮೂಡಿಸಿದೆ. ಪಡುಮಲೆ ಕೋಟಿ-ಚೆನ್ನಯ ಜನ್ಮಸ್ಥಾನ ಹಾಗೂ ಮೂಲಸ್ಥಾನದಲ್ಲಿ ನಾಗಬೆರ್ಮೆರ ಗುಡಿ, ನಾಗ ಸನ್ನಿ, ರಕ್ತೇಶ್ವರಿ, ತೀರ್ಥಬಾವಿ ಹಾಗೂ ದೇಯಿ ಬೈದೆತಿ ಸಾನ್ನಿಧ್ಯದ ಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಷೇಕ ಏ.22 ರಿಂದ …

ಪಡುಮಲೆ ಕ್ಷೇತ್ರದಲ್ಲಿ ಆರಾಧನೆ ಆರಂಭಗೊಳ್ಳುತ್ತಿದ್ದಂತೆ ನಾಗ ಪ್ರತ್ಯಕ್ಷ..500 ವರ್ಷದಿಂದ ಪಡುಮಲೆ ಸಾನಿಧ್ಯದಲ್ಲಿ ಸ್ಥಗಿಗೊಂಡಿದ್ದ ನಾಗಬೆರ್ಮೆರ್, ಚಿತ್ರಕೂಟ ಸಂಕಲ್ಪ, ರಕ್ತೇಶ್ವರೀ, ದೇಯಿಬೈದ್ಯೇತಿಯ ಸಮಾಧಿ ಸ್ಥಳದಲ್ಲಿ ಏ.24ರಿಂದ ಪೂಜಾರಾಂಭ Read More »

ಬೆಳ್ತಂಗಡಿ ತಾಲೂಕಿನ ಸಂಚಾರಿ ಪೊಲೀಸ್ ರಿಂದ ಗೃಹರಕ್ಷಕ ಸಿಬ್ಬಂದಿ ಮಗಳ ಚಿಕಿತ್ಸೆಗೆ ಧನ ಸಹಾಯ

ಬೆಳ್ತಂಗಡಿ ತಾಲೂಕಿನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಿರಿಯ ಗೃಹರಕ್ಷಕ ಸಿಬಂದಿ ಪಣೆಕಜೆಯ ಭಾಸ್ಕರ ಪೂಜಾರಿ ಅವರ ಮಗಳಾದ ಪವಿತ್ರಾ ಬಿ.(18ವ) ಅವರು ಮಿದುಳಿನ ರಕ್ತನಾಳ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆಕೆಯ ಚಿಕಿತ್ಸೆಗಾಗಿ ಬೆಳ್ತಂಗಡಿ ಸಂಚಾರಿ ಠಾಣೆ ಸಿಬಂದಿ ವತಿಯಿಂದ 29,೦೦೦ ರೂಪಾಯಿ ಆರ್ಥಿಕ ಸಹಾಯ ಸಂಗ್ರಹಿಸಲಾಯಿತು. ಪವಿತ್ರಾ ಅವರ ಮಿದುಳಿನ ರಕ್ತನಾಳದ ಸಮಸ್ಯೆಯಿಂದ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಸಂಚಾರಿ ಪೊಲೀಸ್ ಠಾಣೆ ಸಿಬ್ಬಂದಿಗಳು ಒಟ್ಟುಗೂಡಿಸಿದ ಮೊತ್ತವನ್ನು ಆಕೆಯ ತಂದೆ ಭಾಸ್ಕರ ಪೂಜಾರಿ ಅವರಿಗೆ …

ಬೆಳ್ತಂಗಡಿ ತಾಲೂಕಿನ ಸಂಚಾರಿ ಪೊಲೀಸ್ ರಿಂದ ಗೃಹರಕ್ಷಕ ಸಿಬ್ಬಂದಿ ಮಗಳ ಚಿಕಿತ್ಸೆಗೆ ಧನ ಸಹಾಯ Read More »

ಮುರುಡೇಶ್ವರ ಕಡಲ ತೀರದಲ್ಲಿ ಮೀನುಗಾರನಿಗೆ ಸಿಕ್ಕಿತು ಅತ್ಯಂತ ಬೆಲೆಬಾಳುವ ತಿಮಿಂಗಿಲ ವಾಂತಿ..!

ಭಟ್ಕಳ (ಏ.25): ಮುರ್ಡೇಶ್ವರ ಕಡಲ ತೀರದಲ್ಲಿ ಬೆಲೆಬಾಳುವ ಮತ್ತು ಅತ್ಯಂತ ಅಪರೂಪವಾಗಿ ಸಿಗುವ ತಿಮಿಂಗಲದ ವಾಂತಿ (ಅಂಬೆಗ್ರಿಸ್‌) ಮೀನುಗಾರನೊಬ್ಬನಿಗೆ ಸಿಕ್ಕಿದೆ. ಅದನ್ನು ಇದೀಗ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ. ಸಿಕ್ಕಿರುವ ತಿಮಿಂಗಲದ ವಾಂತಿ ಸುಮಾರು1 ಕೆಜಿ ತೂಕ ಹೊಂದಿದೆ. ಇದು ಕಲ್ಲಿನಾಕಾರದಲ್ಲಿದೆ. ಇದನ್ನು ಮೀನುಗಾರ ಮನೆಗೆ ತಂದು ತಜ್ಞರ ಮೂಲಕ ಪರೀಕ್ಷಿಸಿದಾಗ ಇದು ತಿಮಿಂಗಿಲದ ವಾಂತಿ ಎಂದು ಗೊತ್ತಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಹೊನ್ನಾವರ ವಿಭಾಗದ ಅರಣ್ಯಾಧಿಕಾರಿಗಳು, ಮುರ್ಡೇಶ್ವರ ಕಡಲ ತೀರದಲ್ಲಿ ಸಿಕ್ಕಿದ್ದು ತಿಮಿಂಗಲದ ವಾಂತಿಯಾಗಿದೆ. ಆದರೆ, ಸ್ಪೆರ್ಮವೇಲ್‌ …

ಮುರುಡೇಶ್ವರ ಕಡಲ ತೀರದಲ್ಲಿ ಮೀನುಗಾರನಿಗೆ ಸಿಕ್ಕಿತು ಅತ್ಯಂತ ಬೆಲೆಬಾಳುವ ತಿಮಿಂಗಿಲ ವಾಂತಿ..! Read More »

ಬೆಳ್ತಂಗಡಿಯಲ್ಲಿ ಲಾಕ್ಡೌನ್ ಮಧ್ಯೆಯೇ ಸಾಮೂಹಿಕ ವಿವಾಹ | ಸಾಮಾನ್ಯರಿಗೊಂದು, ಉಳ್ಳ ವರಿಗೊಂದು ನ್ಯಾಯವೇ? ಎಂಬ ಪ್ರಶ್ನೆ ಮತ್ತೆ ಉದ್ಭವ !!

ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆಯಲ್ಲಿ ವೀಕೆಂಡ್ ಕರ್ಪ್ಯೂ ಜಾರಿಯಲ್ಲಿ ಇರುವಂತೆಯೇ ಬಿಜೆಪಿ ಜಿಲ್ಲಾ ಪಂಚಾಯತ್ ಸದಸ್ಯ ತುಂಗಪ್ಪ ಬಂಗೇರಾ ನೇತೃತ್ವದಲ್ಲಿ ಸಾಮೂಹಿಕ ವಿವಾಹ ಇಂದು ನಡೆದಿದೆ. ಜನಸಾಮಾನ್ಯರು ರಸ್ತೆಗಿಳಿದರೆ ಅಂಡಿಗೆ ದಂಡ್ ಬೀಸುವ ಪೊಲೀಸರು, ರಾಜಾರೋಷವಾಗಿ ನೂರಾರು ಜನ ಸೇರಿಸಿ, ಕೋವಿಡ್ ನಿಯಮ ಉಲ್ಲಂಘಿಸಿ   ಸಾಮೂಹಿಕ ವಿವಾಹ ನಡೆಸಿದ ಮುಖಂಡರ ಮೇಲೆ ಯಾವ ಕ್ರಮ ಕೈಗೊಳ್ಳುತ್ತೀರಿ. ದೇಶದಲ್ಲಿ ರಾಜ್ಯದಲ್ಲಿ ಜಿಲ್ಲೆಯಲ್ಲಿ ಗಲ್ಲಿಗಲ್ಲಿಗಳಲ್ಲಿ ಕೊರೊನಾ ರಣಕೇಕೆಯಿಂದ ಜನ ತತ್ತರಿಸುತ್ತಿದ್ದಾರೆ. ಸರಕಾರ ವೀಕೆಂಡ್ ಕರ್ಪ್ಯೂ ಜಾರಿ ಗೊಳಿಸಿದೆ. ಮಸೀದಿ, ಚರ್ಚ್, ಮಂದಿರಗಳನ್ನು …

ಬೆಳ್ತಂಗಡಿಯಲ್ಲಿ ಲಾಕ್ಡೌನ್ ಮಧ್ಯೆಯೇ ಸಾಮೂಹಿಕ ವಿವಾಹ | ಸಾಮಾನ್ಯರಿಗೊಂದು, ಉಳ್ಳ ವರಿಗೊಂದು ನ್ಯಾಯವೇ? ಎಂಬ ಪ್ರಶ್ನೆ ಮತ್ತೆ ಉದ್ಭವ !! Read More »

error: Content is protected !!
Scroll to Top