Ad Widget

ಬಿಜೆಪಿ ಶಾಸಕ ಸುರೇಶ್ ಕೊರೋನಾಗೆ ಬಲಿ !

ಕೊರೋನಾಗೆ ಬಿಜೆಪಿ ಶಾಸಕ ಸುರೇಶ್ ಶ್ರೀವಾತ್ಸವ್ ಅವರು ಬಲಿಯಾಗಿದ್ದಾರೆ.

15 ದಿನಗಳ ಹಿಂದೆ ಸುರೇಶ್ ಶ್ರೀವಾತ್ಸವ್ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಸುರೇಶ್ ಅವರ ಸಂಪರ್ಕದಲ್ಲಿದ್ದ ಸಚಿವರು ಸಹ ಕೊರೊನಾ ಸೋಂಕಿಗೆ ಒಳಗಾಗಿದ್ದರು.
ಸುರೇಶ್ ಅವರು ಉತ್ತರ ಪ್ರದೇಶದ ರಾಜಧಾನಿ ಲಕ್ನೋ ಪಶ್ಚಿಮ ಕ್ಷೇತ್ರದ ಶಾಸಕರಾಗಿದ್ದಾರೆ.

ಕಳೆದ ಏಳು ದಿನಗಳಿಂದ ಸುರೇಶ್ ಶ್ರೀವಾತ್ಸವ್ ಅವರನ್ನು ವೆಂಟಿಲೇಟರ್ ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಸುರೇಶ್ ಶ್ರೀವಾತ್ಸವ್ ಅವರಿಗೆ 76 ವರ್ಷ ವಯಸ್ಸು ಆಗಿತ್ತು.

ಆರ್‍ಎಸ್‍ಎಸ್ ಹಿನ್ನೆಲೆಯುಳ್ಳವರಾಗಿದ್ದ ಸುರೇಶ್ ಶ್ರೀವಾತ್ಸವ್ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ ಎಂದು ರಾಜನಾಥ್ ಸಿಂಘ್, ಉತ್ತರ ಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷ ಸ್ವತಂತ್ರ ದೇವ್ ಮತ್ತಿತರರು ಕಂಬನಿ ಮಿಡಿದಿದ್ದಾರೆ.

Ad Widget Ad Widget Ad Widget
Ad Widget Ad Widget Ad Widget

Leave a Reply

error: Content is protected !!
Scroll to Top
%d bloggers like this: