Ad Widget

ಕೋವಿಡ್ 2 ನೆ ಅಲೆಯ ಹಿನ್ನೆಲೆಯಲ್ಲಿ ಭಾರತ ಕುವೈತ್ ವಿಮಾನಯಾನ ತಕ್ಷಣದಿಂದ ರದ್ದು ಮಾಡಿದ ಕುವೈತ್ ಸರ್ಕಾರ

ಭಾರತದಲ್ಲಿ ಕೋವಿಡ್ ಎರಡನೇ ಅಲೆ ತೀವ್ರವಾಗಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಇದೀಗ ಕುವೈಟ್ ಸರಕಾರ ಕೂಡಾ ಭಾರತದಿಂದ ಆಗಮಿಸುವ ವಾಮತ್ತು ನಾಗರಿಕ ವಿಮಾನ ಸಂಚಾರ ರದ್ದುಪಡಿಸಿರುವುದಾಗಿ ಇಂದು ಘೋಷಿಸಿದೆ.

ಆ ಆದೇಶ ಇಂದಿನಿಂದಲೆ ಅನ್ವಯವಾಗುವಂತೆ ಹೊರಡಿಸಲಾಗಿದೆ. ಭಾರತದಿಂದ ಕುವೈಟ್ ಗೆ ಆಗಮಿಸುವ ಎಲ್ಲಾ ಕಮರ್ಷಿಯಲ್ ನಾಗರಿಕ ವಿಮಾನ ಸಂಚಾರವನ್ನು ರದ್ದುಗೊಳಿಸಿದ್ದು ಮುಂದಿನ ಆದೇಶದವರೆಗೂ ಈ ನಿರ್ಬಂಧ ಮುಂದುವರಿಯಲಿದೆ ಎಂದು ಕುವೈಟ್ ನ ನಾಗರಿಕ ವಿಮಾನಯಾನದ ಡೈರೆಕ್ಟರೇಟ್ ಜನರಲ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಭಾರತದಲ್ಲಿ ಕೋವಿಡ್ ಪ್ರಕರಣ ಹೆಚ್ಚಳವಾಗುತ್ತಿರುವ ಪರಿಸ್ಥಿತಿಯನ್ನು ಅವಲೋಕಿಸಿದ ನಂತರ ಆರೋಗ್ಯ ಸಚಿವಾಲಯದ ಸೂಚನೆ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವಿವರಿಸಿದೆ.

ಭಾರತದಿಂದ ಮತ್ತು ಇತರ ದೇಶಗಳಿಂದ ಆಗಮಿಸುವ ಪ್ರಯಾಣಿಕರನ್ನು ಕೂಡಾ ನಿರ್ಬಂಧಿಸಲಾಗಿದೆ. ಕಾರ್ಗೋ(ಸರಕು ಸಾಗಾಣೆ ವಿಮಾನ) ಸಂಚಾರಕ್ಕೆ ಯಾವುದೇ ನಿರ್ಬಂಧ ಇಲ್ಲ ಎಂದು ವರದಿ ತಿಳಿಸಿದೆ.

ಕುವೈಟ್ ನಾಗರಿಕರು, ದೇಶೀಯ ಉದ್ಯೋಗಿಗಳ
ಈಗಾಗಲೇ ಭಾರತದಿಂದ ಆಗಮಿಸುವ ವಿಮಾನಗಳಿಗೆ ಯುಎಇ, ಕೆನಡಾ, ಇಂಗ್ಲೆಂಡ್ ಕೂಡಾ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದ್ದು, ಇದೀಗ ಕುವೈಟ್ ಕೂಡಾ ವಿಮಾನ ಸಂಚಾರಕ್ಕೆ ನಿಷೇಧ ಹೇರಿದೆ ಎಂದು ವರದಿ ಆಗಿದೆ.

Ad Widget Ad Widget Ad Widget
Ad Widget Ad Widget Ad Widget

Leave a Reply

error: Content is protected !!
Scroll to Top
%d bloggers like this: