ಮೂಡಬಿದಿರೆಯಲ್ಲಿ ಲಾರಿ ಗೂಡ್ಸ್ ಟೆಂಪೋ ಡಿಕ್ಕಿ | ಬೆಳ್ತಂಗಡಿಯ ಯುವಕ ಮೃತ್ಯು

ಮೂಡಬಿದ್ರೆಯ ಸಮೀಪ ಗೂಡ್ಸ್ ಗಾಡಿ ಮತ್ತು ಲಾರಿ ಮದ್ಯೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಉಜಿರೆಯ ಯುವಕನೋರ್ವ ಮತಪಟ್ಟಿದ್ದಾರೆ.

ಮೃತ ವ್ಯಕ್ತಿಯನ್ನು ಉಜಿರೆಯ ನೇಕಾರ ಪೇಟೆಯ ಭವಿಷ್ ಶೆಟ್ಟಿ ಎಂದು ಗುರುತಿಸಲಾಗಿದೆ. ಅವರಿಗೆ 33 ವರ್ಷ ವಯಸ್ಸಾಗಿತ್ತು.

ಗೂಡ್ಸ್ ವಾಹನದಲ್ಲಿ ಇದ್ದ ಭವಿಷ್ ಶೆಟ್ಟಿ ಅಪಘಾತದಿಂದ ತೀವ್ರ ರಕ್ತಸ್ರಾವ ಉಂಟಾಗಿತ್ತು. ಆ ಕೂಡಲೇ ಅವರನ್ನು ಪಕ್ಕದ ಆಳ್ವಾಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸೇರಿಸಲಾಗಿದೆ. ಆದರೆ ಎಜೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ವೃತ್ತಿಯಲ್ಲಿ ಅಮೆಜಾನ್ ನ ವಸ್ತುಗಳ ಡೆಲಿವರಿ ಮಾಡುತ್ತಿದ್ದ ಇವರಿಗೆ 3 ವರ್ಷಗಳ ಹಿಂದೆಯಷ್ಟೇ ಮದುವೆಯಾಗಿತ್ತು. ಈಗ ಚಿಕ್ಕ ಮಗು ಕೂಡಾ ಇದೆ.
ಈ ಹಿಂದೆ ಬೆಳ್ತಂಗಡಿ ಸುತ್ತಮುತ್ತ ಅಮೆಜಾನ್ ವಸ್ತುಗಳ ಡೆಲಿವರಿ ಮಾಡುತ್ತಿದ್ದರು. ಇತ್ತೀಚೆಗೆ ಅವರು ಮೂಡುಬಿದ್ರೆಯಲ್ಲಿ ಕಾರ್ಯಾಚರಿಸುತ್ತಿದ್ದರು.

Leave A Reply

Your email address will not be published.