ಬಾಲಿವುಡ್ ಸಂಗೀತ ಸಂಯೋಜಕ ಶ್ರವಣ್ ರಾಥೋಡ್ ಕೊರೊನಾಗೆ ಬಲಿ

ಬಾಲಿವುಡ್‌ನ ಜನಪ್ರಿಯ ನದೀಂ- ಶ್ರವಣ್ ಸಂಗೀತ ಸಂಯೋಜಕ ಜೋಡಿಯಲ್ಲಿ ಒಬ್ಬರಾದ ಶ್ರವಣ್ ರಾಥೋಡ್ (60ವ.) ಕೋವಿಡ್-19 ಸೋಂಕಿನಿಂದಾಗಿ ಗುರುವಾರ ರಾತ್ರಿ ಮೃತಪಟ್ಟಿದ್ದಾರೆ.

ಶ್ರವಣ್ ಪುತ್ರ ಸಂಜೀವ್ ರಾಥೋಡ್ ತಂದೆಯ ಸಾವನ್ನು ದೃಢಪಡಿಸಿದ್ದು,ರಾತ್ರಿ 9.30ರ ಸುಮಾರಿಗೆ ಅವರು ಕೊನೆಯುಸಿರೆಳೆದರು” ಎಂದು ತಿಳಿಸಿದ್ದಾರೆ.

ಕೋವಿಡ್-19 ಪಾಸಿಟಿವ್ ಬಂದ ಬಳಿಕ ಶ್ರವಣ್ ಅವರನ್ನು ಮುಂಬೈನ ಎಸ್.ಎಲ್.ರಹೇಜಾ ಆಸ್ಪತ್ರೆಗೆ ಸೋಮವಾರ ದಾಖಲಿಸಲಾಗಿತ್ತು.

10 ಲಕ್ಷ ರೂ. ಬಿಲ್ ಪಾವತಿಸದ ಕಾರಣಕ್ಕಾಗಿ ತಂದೆಯ ಮೃತದೇಹವನ್ನು ಆಸ್ಪತ್ರೆ ಹಸ್ತಾಂತರಿಸಿಲ್ಲ ಎಂದು ಪುತ್ರ ಆರೋಪಿಸಿದ್ದಾರೆ.

Leave A Reply

Your email address will not be published.