Day: April 23, 2021

ಆಕ್ಸಿಜನ್ ಕೊರತೆ ತಡೆಯಲು ಸರ್ಕಾರದಿಂದ ಸೂಕ್ತ ಕ್ರಮ : ಪುತ್ತೂರಿನಲ್ಲಿ ಸಚಿವ ಅರವಿಂದ ಲಿಂಬಾವಳಿ ಹೇಳಿಕೆ

ರಾಜ್ಯದಲ್ಲಿ ಕೊರೋನ ಸೋಂಕಿನ ಪ್ರಮಾಣ ವ್ಯಾಪಕವಾಗಿ ವೃದ್ಧಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಉಂಟಾಗದಂತೆ ತಡೆಯಲು ಸರಕಾರ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಎಂದು ರಾಜ್ಯ ಅರಣ್ಯ ಖಾತೆಯ ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು. ಅವರು ಶುಕ್ರವಾರ ಪುತ್ತೂರಿಗೆ ಆಗಮಿಸಿದ್ದ ಸಂದರ್ಭದಲ್ಲಿ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದರು. ಆಕ್ಸಿಜನ್ ಖರೀದಿಗೆ ಸಂಬಂಧಿಸಿ ಸಚಿವ ಜಗದೀಶ್ ಶೆಟ್ಟರ್ ಈಗಾಗಲೇ ಜಿಂದಾಲ್ ಸೇರಿದಂತೆ ನಾನಾ ಕಂಪನಿಗಳ ಜತೆ ಮಾತುಕತೆ ನಡೆಸಿದ್ದು, ಖರೀದಿಸಲು ಕ್ರಮ ಕೈಗೊಂಡಿದ್ದಾರೆ. ಆಕ್ಸಿಜನ್, ವೆಂಟಿಲೇಟರ್ ವ್ಯವಸ್ಥೆ …

ಆಕ್ಸಿಜನ್ ಕೊರತೆ ತಡೆಯಲು ಸರ್ಕಾರದಿಂದ ಸೂಕ್ತ ಕ್ರಮ : ಪುತ್ತೂರಿನಲ್ಲಿ ಸಚಿವ ಅರವಿಂದ ಲಿಂಬಾವಳಿ ಹೇಳಿಕೆ Read More »

ಪುಣೆಯಿಂದ ಬಂದು ಕ್ವಾರಂಟೈನ್ ಆಗಿದ್ದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ…ಮುರ್ಡೇಶ್ವರದ ಲಾಡ್ಜ್ ನಲ್ಲಿ ನಡೆದ ಘಟನೆ…

ದೂರದ ಪುಣೆಯಿಂದ ಊರಿಗೆ ಮರಳಿ ಮುರುಡೇಶ್ವರದ ಲಾಡ್ಜ್‌ ಒಂದರಲ್ಲಿ ಕ್ವಾರಂಟೈನ್ ಗೆ ಒಳಗಾಗಿದ್ದ ಯುವಕನೊಬ್ಬ ಮಾನಸಿಕ ಒತ್ತಡದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಭಟ್ಕಳ ತಾಲೂಕಿನ ಬೆಂಗ್ರೆ ನಿವಾಸಿ 28 ವರ್ಷದ ವೆಂಕಟೇಶ ಸುಕ್ರಯ್ಯ ದೇವಾಡಿಗ ಎಂಬವನೇ ಮೃತ ದುರ್ದೈವಿ. ಈತ ಕಳೆದ 13 ವರ್ಷಗಳಿಂದ ಪುಣೆಯ ಹೋಟೆಲ್‌ವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ.ಊರಿನಲ್ಲಿ ನಡೆಯುತ್ತಿದ್ದ ಕೆಲವೊಂದು ಕಾರ್ಯಕ್ರಮಕ್ಕೆ ವರ್ಷಕ್ಕೆ ಒಂದು ಬಾರಿ ಬಂದು ಹೋಗುತಿದ್ದನಂತೆ.ವೆಂಕಟೇಶ 5-6 ದಿನಗಳ ಹಿಂದೆ ಪುಣೆಯಿಂದ ಮುರ್ಡೇಶ್ವರಕ್ಕೆ ಬಂದಿದ್ದನು . ಪುಣೆಯಲ್ಲಿ …

ಪುಣೆಯಿಂದ ಬಂದು ಕ್ವಾರಂಟೈನ್ ಆಗಿದ್ದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ…ಮುರ್ಡೇಶ್ವರದ ಲಾಡ್ಜ್ ನಲ್ಲಿ ನಡೆದ ಘಟನೆ… Read More »

ಉಜಿರೆ ಬಾಲಕನ ಅಪಹರಣ ಪ್ರಕರಣ | ಆರೋಪಿಗಳಿಗೆ ಜಾಮೀನು ಮಂಜೂರು

ಕರಾವಳಿಯಲ್ಲಿ ಭಾರೀ ಗ್ರಾಸವಾಗಿದ್ದ ಉಜಿರೆ ಬಾಲಕನ ಅಪಹರಣ ಪ್ರಕರಣದ ಇಬ್ಬರು ಆರೋಪಿಗಳಾದಂತಹ ಮಹೇಶ್ ಮತ್ತು ಮಂಜುನಾಥ ಎಂಬವರಿಗೆ ಮಂಗಳೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. 2020ರ ಡಿಸೆಂಬರ್‌ನಲ್ಲಿ ಬೆಳ್ತಂಗಡಿಯ ಉಜಿರೆ ಗ್ರಾಮದ ರಥಬೀದಿಯಲ್ಲಿ ಅಭಿನವ್ ಎಂಬ ಬಾಲಕನನ್ನು ಅಪಹರಿಸಲಾಗಿತ್ತು. ಕೋಲಾರದ ನಾಲ್ವರು ಆರೋಪಿಗಳು ಕೋಟ್ಯಂತರ ರೂ. ಮೌಲ್ಯದ ಬಿಟ್ ಕಾಯಿನ್ ವ್ಯವಹಾರದಲ್ಲಿ ಉಂಟಾದ ವಿರಸದಿಂದಾಗಿ ಆರೋಪಿಗಳು ಈ ಅಪಹರಣ ಮಾಡಿದ್ದರು ಎನ್ನಲಾಗಿದ್ದು, ಮರುದಿನವೇ ಬೆಳ್ತಂಗಡಿಯ ಪೊಲೀಸರು ಅಪಹೃತ ಬಾಲಕನನ್ನು ಕೋಲಾರ ಜಿಲ್ಲೆಯ …

ಉಜಿರೆ ಬಾಲಕನ ಅಪಹರಣ ಪ್ರಕರಣ | ಆರೋಪಿಗಳಿಗೆ ಜಾಮೀನು ಮಂಜೂರು Read More »

ಮಂಗಳೂರಿನಲ್ಲಿ ಮಹಿಳೆಯ ಬೀದಿ ಹುಚ್ಚಾಟ | ‘ ಮಾಸ್ಕ್ ಹಾಕ್ಕೊಳ್ಳಿ ‘ ಎಂದರೆ ‘ ನಾನು 2 ಸಲ ಯಮಲೋಕಕ್ಕೆ ಹೋಗಿ ಬಂದಿದ್ದೇನೆ ‘ ಎಂದ ಮಹಿಳೆ !

ಇಡೀ ದೇಶವೇ ಕೊರೋನಾಗೆ ತತ್ತರಿಸಿದ್ದು ಅದರ ಭೀತಿಗೆ ಎಲ್ಲೆಡೆ ಲಾಕ್ ಡೌನ್ ಮತ್ತು ಜಾಗೃತಿ ನಡೆಸುತ್ತಿದ್ದರೆ, ಇಲ್ಲೊಬ್ಬಳು ಮಹನೀಯಳು ಮಾಸ್ಕ್ ಹಾಕಿಕೊಳ್ಳಲು ಹೇಳಿದಾಗ, ” ನಾನು 2 ಸಲ ಯಮನ ಹತ್ತಿರ ಗದೆ ತೊಗೊಂಡು ಹೋಗಿ ಬಂದಿದ್ದೇನೆ” ಎಂದು ಅಧಿಕಾರಿಗಳಿಗೆ ತನ್ನ ಗದಾಪ್ರಹಾರವನ್ನು ಮಾಡಿದ್ದಾಳೆ. ಇವತ್ತು ಮಂಗಳೂರು ನಗರದ ಕೆ.ಎಸ್.ರಾವ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಪಾಲಿಕೆ ಅಧಿಕಾರಿಗಳು ಆಕೆಯ ಮಾತಿಗೆ ಬೆಚ್ಚಿಬಿದ್ದಿದ್ದಾರೆ. ಮಾಸ್ಕ್ ಹಾಕಲು ಹೇಳಿದ್ದಕ್ಕೆ ಮಹಿಳೆ ಮನಸ್ಸಿಗೆ ಬಂದಂತೆ ಮಾತನಾಡಿ, ಹುಚ್ಚಾಟ ಮೆರೆದಿದ್ದಾಳೆ. ಅಧಿಕಾರಿಗಳು …

ಮಂಗಳೂರಿನಲ್ಲಿ ಮಹಿಳೆಯ ಬೀದಿ ಹುಚ್ಚಾಟ | ‘ ಮಾಸ್ಕ್ ಹಾಕ್ಕೊಳ್ಳಿ ‘ ಎಂದರೆ ‘ ನಾನು 2 ಸಲ ಯಮಲೋಕಕ್ಕೆ ಹೋಗಿ ಬಂದಿದ್ದೇನೆ ‘ ಎಂದ ಮಹಿಳೆ ! Read More »

ಡೆಡ್ಲಿ ಕೊರೋನಾ ವೈರಸ್ ವಿರುದ್ಧ ಹೋರಾಟಕ್ಕೆ ಮತ್ತೊಂದು ಅಸ್ತ್ರ | ಝೈಡಸ್ ಕ್ಯಾಡಿಲಾ ಸಂಸ್ಥೆಯ ವಿರಾಫಿನ್ ಗೆ ಡಿಸಿಜಿಐ ಅನುಮತಿ

ಡೆಡ್ಲಿ ಕೊರೋನಾ ವೈರಸ್ ವಿರುದ್ಧ ಹೋರಾಟಕ್ಕೆ ಮತ್ತೊಂದು ಬಲ ಬಂದಿದ್ದು, ಕೋವಿಡ್-19 ಚಿಕಿತ್ಸೆಗೆ ಮತ್ತೊಂದು ಹೊಸ ಅಸ್ತ್ರ ಸೇರ್ಪಡೆಯಾಗಿದೆ. ಕೊರೊನಾ ಸೋಂಕಿತರ ಚಿಕಿತ್ಸೆಗೆ ಹೊಸ ಔಷಧ ಬಳಸಲು ಭಾರತೀಯ ಔಷಧ ನಿಯಂತ್ರಕ ಮಹಾಮಂಡಳಿ ಅನುಮತಿ ನೀಡಿದ್ದು, ಝೈಡಸ್ ಕ್ಯಾಡಿಲಾ ಸಂಸ್ಥೆಯ ವಿರಾಫಿನ್ ಔಷಧವನ್ನು ಕೊರೊನಾ ಸೋಂಕಿತರ ಚಿಕಿತ್ಸೆಗೆ ಬಳಸಲು ಭಾರತೀಯ ಔಷಧ ನಿಯಂತ್ರಕ ಮಹಾಮಂಡಳಿ (ಡಿಸಿಜಿಐ) ಅನುಮತಿ ನೀಡಿದೆ. ಲಘು ಕೊರೊನಾ ವೈರಸ್ ಸೋಂಕಿನಿಂದ ಬಳಲುತ್ತಿರುವವರಿಗೆ ಔಷಧದ ರೂಪದಲ್ಲಿ ಝೈಡಸ್ ಕ್ಯಾಡಿಲ್ಲಾ ಸಂಸ್ಥೆಯ ‘ವಿರಾಫಿನ್’ ಔಷಧ ಬಳಸಲು …

ಡೆಡ್ಲಿ ಕೊರೋನಾ ವೈರಸ್ ವಿರುದ್ಧ ಹೋರಾಟಕ್ಕೆ ಮತ್ತೊಂದು ಅಸ್ತ್ರ | ಝೈಡಸ್ ಕ್ಯಾಡಿಲಾ ಸಂಸ್ಥೆಯ ವಿರಾಫಿನ್ ಗೆ ಡಿಸಿಜಿಐ ಅನುಮತಿ Read More »

ಕೋವಿಡ್ ನಿಯಮ ಉಲ್ಲಂಘನೆ | ಹಸಿ ಮೀನು ವ್ಯಾಪಾರಿಗಳ ವಿರುದ್ಧ ಪ್ರಕರಣ ದಾಖಲು

ಬಂಟ್ವಾಳ ತಾಲೂಕಿನ ಫರಂಗಿಪೇಟೆ ಮೀನು ಮಾರುಕಟ್ಟೆಯಲ್ಲಿ ಸುರಕ್ಷಿತ ಅಂತರ ಕಾಯ್ದುಕೊಳ್ಳದೆ ವ್ಯಾಪಾರ ನಡೆಸುತ್ತಿದ್ದ ಮೀನು ವ್ಯಾಪಾರಿಗಳ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಟ್ವಾಳ ತಾಲೂಕಿನ ವಿವಿಧೆಡೆ ಬೆಳಗ್ಗೆಯಿಂದ ಕಾರ್ಯಾಚರಣೆ ನಡೆಸುತ್ತಿರುವ ಪೊಲೀಸರು ಬಾಗಿಲು ತೆರೆದಿದ್ದ ಅಗತ್ಯ ವಸ್ತುಗಳು ಅಲ್ಲದ ಅಂಗಡಿಗಳನ್ನು ಬಂದ್ ಮಾಡಿಸುತ್ತಿದ್ದಾರೆ. ಕಾರ್ಯಾಚರಣೆ ವೇಳೆ ಫಂರಗಿಪೆಟೆ ಮೀನು ಮಾರುಕಟ್ಟೆಯಲ್ಲಿ ಗ್ರಾಹಕರ ನಡುವೆ ಯಾವುದೇ ಸುರಕ್ಷಿತ ಅಂತರ ಇಲ್ಲದೆ ವ್ಯಾಪಾರ ನಡೆಸುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಬಂಟ್ವಾಳ ಗ್ರಾಮಾಂತರ ಎಸ್.ಐ. ಪ್ರಸನ್ನ ಕೋವಿಡ್ …

ಕೋವಿಡ್ ನಿಯಮ ಉಲ್ಲಂಘನೆ | ಹಸಿ ಮೀನು ವ್ಯಾಪಾರಿಗಳ ವಿರುದ್ಧ ಪ್ರಕರಣ ದಾಖಲು Read More »

ವೀಕೆಂಡ್ ಲಾಕ್ ಡೌನ್ ಇದ್ದರೂ ಲಾಕ್‍ಡೌನ್‍ನಲ್ಲಿ ಬಸ್ ರೈಲು ಇರುತ್ತದೆ

ವೀಕೆಂಡ್ ಲಾಕ್‍ಡೌನ್ ಘೋಷಣೆ ಆದರೂ ರಾಜ್ಯದಲ್ಲಿ ಆದರೆ ಬಿಎಂಟಿಸಿ ಸಂಚಾರ ಮಾತ್ರ ನಾಳೆ ಎಂದಿನಂತೆ ಇರಲಿದೆ. ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರವು ನೈಟ್ ಕಫ್ರ್ಯೂ ಮತ್ತು ವೀಕೆಂಡ್ ಲಾಕ್‍ಡೌನ್ ಜಾರಿದೆ ಮಾಡಿದೆ. 2 ದಿನ ಕರ್ನಾಟಕ ಸಂಪೂರ್ಣ ಲಾಕ್‍ಡೌನ್ ಆಗಲಿದೆ. 2 ದಿನ ಜನ ಮನೆಬಿಟ್ಟು ಹೊರಬರುವಂತಿಲ್ಲ. ಅಗತ್ಯ ಸೇವೆ ಬಿಟ್ಟು ಯಾರೂ ಕೂಡಾ ಹೊರಗೆ ಓಡಾಡುವಂತಿಲ್ಲ. ವೀಕೆಂಡ್ ಕರ್ಫ್ಯೂ ಜನಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಆದರೆ ಬಿಎಂಟಿಸಿ ಬಸ್‍ಗಳು ಮಾತ್ರ ಎಂದಿನಂತೆ ಸಂಚರಿಸಲಿವೆ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ. …

ವೀಕೆಂಡ್ ಲಾಕ್ ಡೌನ್ ಇದ್ದರೂ ಲಾಕ್‍ಡೌನ್‍ನಲ್ಲಿ ಬಸ್ ರೈಲು ಇರುತ್ತದೆ Read More »

ನನ್ನ ಗರ್ಲ್ ಫ್ರೆಂಡನ್ನು ಮೀಟ್ ಆಗಬೇಕಿದೆ, ಯಾವ ಸ್ಟಿಕ್ಕರ್ ಬಳಸಲಿ ಎಂದಾತ ಲಾಕ್ ಡೌನ್ ಸಂದರ್ಭ ಪೊಲೀಸರನ್ನು ಕೇಳಿದ್ದ | ಪೊಲೀಸರು ಅದಕ್ಕೆ ಕೊಟ್ಟ ಉತ್ತರ ಹೇಗಿತ್ತು ಗೊತ್ತಾ ?!

ನಡುವೆ ಗರ್ಲ್​ಫ್ರೆಂಡ್​​ನ ಮೀಟ್ ಮಾಡ್ಬೇಕು, ಏನು ಮಾಡ್ಲಿ? ಎಂದವನಿಗೆ ಸಖತ್ ಉತ್ತರ ನೀಡಿದ ಮುಂಬೈ ಪೋಲೀಸ್ ಲಾಕ್​ಡೌನ್​ ನಿಂದ ಎಲ್ಲರಿಗೂ ಒಂದಲ್ಲಾ ಒಂದು ಸಮಸ್ಯೆ ಆಗಿದೆ. ಆದರೆ ಇದರಿಂದ ಹೆಚ್ಚು ಸಮಸ್ಯೆ ಆದದ್ದು ನವ ಪ್ರೇಮಿಗಳಿಗೆ. ಮುಂಬೈನಲ್ಲಿ ಏಪ್ರಿಲ್ 15 ರಿಂದ ಲಾಕ್ಡೌನ್ ಹೇರಿದ್ದು ಎಲ್ಲರಿಗೂ ತಿಳಿದೇ ಇದೆ. ಮೊನ್ನೆ ಮುಂಬೈನ ಯುವಪ್ರೇಮಿಯೊಬ್ಬ ಮುಂಬೈ ಪೊಲೀಸರಲ್ಲಿ ತನ್ನ ಅಳಲು ತೋಡಿಕೊಂಡಿದ್ದಾನೆ.” ನಾನು ಹೊರ ಹೋಗಿ ನನ್ನ ಗೆಳತಿಯನ್ನು ಭೇಟಿಯಾಗಬೇಕಿದೆ; ಯಾವ ಸ್ಟಿಕ್ಕರ್ ಬಳಸಲಿ ಹೇಳಿ ?! ನಾನವಳನ್ನು …

ನನ್ನ ಗರ್ಲ್ ಫ್ರೆಂಡನ್ನು ಮೀಟ್ ಆಗಬೇಕಿದೆ, ಯಾವ ಸ್ಟಿಕ್ಕರ್ ಬಳಸಲಿ ಎಂದಾತ ಲಾಕ್ ಡೌನ್ ಸಂದರ್ಭ ಪೊಲೀಸರನ್ನು ಕೇಳಿದ್ದ | ಪೊಲೀಸರು ಅದಕ್ಕೆ ಕೊಟ್ಟ ಉತ್ತರ ಹೇಗಿತ್ತು ಗೊತ್ತಾ ?! Read More »

ಕೊರೋನಾ ಸೋಂಕಿತರ ಮೃತದೇಹ ಸಾಗಿಸಲು 60 ಸಾವಿರ ರೂಪಾಯಿಗೆ ಬೇಡಿಕೆ | ಅಂಬುಲೆನ್ಸ್ ಚಾಲಕ ಅರೆಸ್ಟ್ !

ಸರಿಯಾದ ಸಮಯಕ್ಕೆ ಐಸಿಯು ಬೆಡ್ ಸಿಗದೆ ಮೃತಪಟ್ಟ ಕೊರೋನಾ ಸೋಂಕಿತರೊಬ್ಬರ ಮೃತದೇಹ ಸಾಗಿಸಲು ರೂ.60 ಸಾವಿರ ಬೇಡಿಕೆ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆ್ಯಂಬುಲೆನ್ಸ್ ಚಾಲಕನನ್ನು ಬಂಧಿಸಿದ್ದಾರೆ.  ಏಪ್ರಿಲ್ 20 ರಂದು ಭವ್ಯಾ (29) ಎಂಬ ಮಹಿಳೆಯ ತಂದೆ ಪ್ರಸಾದ್ ಎಂಬುವವರು ಕೊರೋನಾ ಸೋಂಕಿನಿಂದಾಗಿ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ತಮ್ಮತಂದೆಯ ಮೃತದೇಹವನ್ನು ಚಿತಾಗಾರಕ್ಕೆ ಸಾಗಿಸಲು ಮುಂದಾದ ಭವ್ಯಾ ಅವರ ಬಳಿ ಆ್ಯಂಬುಲೆನ್ಸ್ ಮಾಲೀಕ ಒಂದೆರಡಲ್ಲ 60 ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದಾನೆ. ದುಡ್ಡು ಕೊಟ್ಟರಷ್ಟೇ ಮೃತದೇಹ ಸಾಗಿಸುತ್ತೇವೆ. …

ಕೊರೋನಾ ಸೋಂಕಿತರ ಮೃತದೇಹ ಸಾಗಿಸಲು 60 ಸಾವಿರ ರೂಪಾಯಿಗೆ ಬೇಡಿಕೆ | ಅಂಬುಲೆನ್ಸ್ ಚಾಲಕ ಅರೆಸ್ಟ್ ! Read More »

ಭಾರತ ಮತ್ತು ದುಬೈ ನಡುವಿನ ವಿಮಾನಯಾನ ಇದೇ ಭಾನುವಾರದಿಂದ ಬಂದ್ !

ಭಾರತದಲ್ಲಿ ಕೋವಿಡ್-19 ಪ್ರಕರಣಗಳ ತೀವ್ರ ಹೆಚ್ಚಳದ ಕಾರಣ ಯುನೈಟೆಡ್ ಅರಬ್ ಎಮಿರೇಟ್ಸ್ ಇದೇ ಭಾನುವಾರದಿಂದ 10 ದಿನಗಳ ಕಾಲ ದುಬೈ ಮತ್ತು ಭಾರತದ ನಡುವಿನ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಿದೆ. ಇತ್ತೀಚೆಗೆ ಬ್ರಿಟನ್ ತನ್ನ ಕಟ್ಟುನಿಟ್ಟಾದ ಪ್ರಯಾಣ ನಿರ್ಬಂಧಗಳನ್ನು ಭಾರತದ ಮೇಲೆ ಹೇರಿದ ಕೆಲವು ದಿನಗಳ ನಂತರ ಮತ್ತು ಪ್ರಧಾನಿ ಬೋರಿಸ್ ಜಾನ್ಸನ್ ನವದೆಹಲಿ ಪ್ರವಾಸವನ್ನು ರದ್ದುಗೊಳಿಸಿದ್ದರು. ಇದೀಗ ಕೆಲವು ದಿನಗಳ ನಂತರ ಗಲ್ಫ್ ರಾಷ್ಟ್ರದ ವಿಮಾನಯಾನ ಸಂಸ್ಥೆ ವಿಮಾನಹಾರಾಟವನ್ನು ನಿಲ್ಲಿಸಲು ಕ್ರಮ ಕೈಗೊಂಡಿದೆ. ಲಸಿಕೆ ಹಾಕದೇ ಇರುವವರು …

ಭಾರತ ಮತ್ತು ದುಬೈ ನಡುವಿನ ವಿಮಾನಯಾನ ಇದೇ ಭಾನುವಾರದಿಂದ ಬಂದ್ ! Read More »

error: Content is protected !!
Scroll to Top