ಈ ಗ್ರಾ.ಪಂ.ಸದಸ್ಯೆ ಮಾಡಿದ ಕಾರ್ಯಕ್ಕೆ ಕೇಳಿ ಬರುತ್ತಿದೆ ಎಲ್ಲೆಡೆ ಮೆಚ್ಚುಗೆ

ಗ್ರಾ.ಪಂ.ಸದಸ್ಯೆಯೊಬ್ಬರು ಮಾಡಿದ ಕಾರ್ಯವೊಂದಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ನಿಟ್ಟೆ ಗ್ರಾ.ಪಂ. ಸ‌ದಸ್ಯೆಯೋರ್ವರು ರಸ್ತೆಯಲ್ಲಿ ಕಸ ಹಾಕುತ್ತಿದ್ದವರನ್ನು ಹಿಡಿದು ಅವರಿಂದಲೇ ಕಸ ವಿಲೇವಾರಿ ಗೊಳಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಕಸ ಹಾಕುತ್ತಿದ್ದವರನ್ನು ಪತ್ತೆ ಹಚ್ಚಿ ಅವರಿಂದಲೇ ಕಸ ವಿಲೇವಾರಿಗೊಳಿಸಿ ಪಂಚಾಯತ್‌ಗೆ ದಂಡ ಕಟ್ಟಿಸಿದ್ದಾರೆ ರಶ್ಮಿ ಅವರು.

ಪಂಚಾಯತ್‌ ಸದಸ್ಯೆ ರಶ್ಮಿಯವರ ಕರ್ತವ್ಯ ತತ್ಪರತೆಗೆ ಗ್ರಾ. ಪಂ. ಅಧ್ಯಕ್ಷ ಸತೀಶ್‌ ಪೂಜಾರಿ, ಪಂಚಾಯತ್‌ ಅಭಿವೃದ್ದಿ ಅಧಿಕಾರಿ ಶೇಖರ ಪೂಜಾರಿ ಹಾಗೂ ಇತರ ಎಲ್ಲ ಸದಸ್ಯರೂ ಬೆಂಬಲ ವ್ಯಕ್ತ ಪಡಿಸಿದ್ದಾರೆ.

Leave A Reply

Your email address will not be published.