ಮಂಗಳೂರಿನಲ್ಲಿ ನಡೆಯಿತು ಅಮಾನವೀಯ ವರ್ತನೆ | ಬೈಕ್ ಗೆ ನಾಯಿಯನ್ನು ಕಟ್ಟಿ ಹೆದ್ದಾರಿಯಲ್ಲೇ ಎಳೆದೊಯ್ದ ದೂರ್ತರು

ಮಂಗಳೂರಿನಲ್ಲಿ ಇಡೀ ಜನತೆಯೇ ನಾಚಿಕೆ ಪಡುವಂತ ಹೇಯ ಕೃತ್ಯವೊಂದು ನಡೆದಿದೆ.

ಇಬ್ಬರು ಬೈಕ್‌ನಲ್ಲಿ ನಾಯಿಯೊಂದನ್ನು ಹಗ್ಗದಲ್ಲಿ ಕಟ್ಟಿ ಹಾಕಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಧರ ಧರ ಎಂದು ಎಳೆದುಕೊಂಡು ಹೋಗುವ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಮಂಗಳೂರಿನ ಸುರತ್ಕಲ್ ಬಳಿಯ ಎನ್ ಐ ಟಿಕೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ಬೈಕಿನಲ್ಲಿ ಇಬ್ಬರು ಕುಳಿತು ಕೊಂಡು ಹೋಗುತ್ತಿದ್ದು, ನಾಯಿಯನ್ನು ಹಗ್ಗದಲ್ಲಿ ಬಿಗಿಯಾಗಿ ಕಟ್ಟಿ ಎಳ್ಕೊಂಡು ಹೋಗುವ ದೃಶ್ಯ ಇದೆ.

ಯಾರೋ ಈ ವೀಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.

ಈ ಘಟನೆ ಏಪ್ರಿಲ್ 15ರ ರಾತ್ರಿ ಸುಮಾರು 8.30ರ ಸಮಯದಲ್ಲಿ ನಡೆದಿದೆ ಎನ್ನಲಾಗಿದೆ.

ಈ ರೀತಿಯಾಗಿ ಅಮಾನವೀಯವಾಗಿ ವರ್ತಿಸಿದವರನ್ನು ಕೂಡಲೇ ಬಂಧಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

Leave A Reply

Your email address will not be published.