ಸಿಡಿಲು ಬಡಿದು ಇಬ್ಬರು ಮಕ್ಕಳಿಗೆ ಗಂಭೀರ ಗಾಯ

ಮಂಗಳೂರು : ಸಿಡಿಲು ಬಡಿದು ಇಬ್ಬರು ಮಕ್ಕಳು ಗಂಭೀರ ಗಾಯಗೊಂಡ ಘಟನೆ  ಹಳೆಯಂಗಡಿ‌ಯ ಇಂದಿರಾ ನಗರ ಎಂಬಲ್ಲಿ  ಮಂಗಳವಾರ ಸಂಜೆ ನಡೆದಿದೆ.

ಘಟನೆಯಿಂದಾಗಿ ಇಂದಿರಾನಗರ ನಿವಾಸಿ ಉಸ್ಮಾನ್ ಎಂಬವರ ಮಗ ಸಿನಾನ್ (5) ಹಾಗೂ ಮೂಲತಃ ಗಂಗಾವತಿಯ ಸದ್ಯ ಇಂದಿರಾನಗರದಲ್ಲಿ ವಾಸವಾಗಿರುವ ದುರ್ಗಪ್ಪ ಎಂಬವರ ಮಗ ಮಾರುತಿ(6) ಎಂಬಿಬ್ಬರು ಗಂಭೀರ ಗಾಯಗೊಂಡಿದ್ದಾರೆ.

ಗಾಯಗೊಂಡ ಇಬ್ಬರನ್ನೂ ಸ್ಥಳೀಯರು  ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

Leave A Reply

Your email address will not be published.