ಪ್ರಧಾನಿ ಮೋದಿ ಭಾಷಣಕ್ಕೆ ಕ್ಷಣಗಣನೆ | ರಾತ್ರಿ 8.45 ಕ್ಕೆ ಪ್ರಧಾನಿ ಏನು ಹೇಳಬಹುದು ಎಂದು ಕಾದು ಕೂತಿದೆ ದೇಶ !!

ದೇಶದಲ್ಲಿ ಜ್ವರದಂತೆ ಏರುತ್ತಿರುವ ಕೊರೋನಾ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ರಾತ್ರಿ 8.45ಕ್ಕೆ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಕೊರೋನಾ ಗಂಭೀರ ಹಂತ ತಲುಪಿರುವ ಹಿನ್ನೆಲೆಯಲ್ಲಿ ಪ್ರಧಾನಿ ಭಾಷಣ ಅತ್ಯಂತ ಮಹತ್ವಪಡೆದುಕೊಂಡಿದೆ. ದೇಶವ್ಯಾಪಿ ಲಾಕ್ ಡೌನ್ ಸಾಧ್ಯತೆಯನ್ನು ಮೋದಿ ಈಗಾಗಲೇ ತಳ್ಳಿಹಾಕಿದ ಕಾರಣ ಲಾಕ್ ಡೌನ್ ಆಗುವ ಸಾಧ್ಯತೆ ಇಲ್ಲ.

ಆದರೂ ಮೋದಿಯವರು ಯಾವ ಘೋಷಣೆ ಮಾಡಬಹುದು ಎಂಬ ಬಗ್ಗೆ ಕುತೂಹಲ ಹಾಗೂ ಆತಂಕ ಮೂಡಿದೆ. ಗೃಹಸಚಿವ ಅಮಿತ್ ಶಾ ಜತೆ ಮೋದಿ ಮಾತುಕತೆ ನಡೆಸಿದ್ದಾರೆ. ಇಂದು ಬೆಳಗ್ಗೆಯಿಂದಲೂ ಪ್ರಧಾನಿ ಮೋದಿಯವರು ಸರಣಿ ಸಭೆ ನಡೆಸಿದ್ದರು. ಲಸಿಕೆ ಉತ್ಪಾದಕ ಕಂಪನಿಗಳ ಜತೆ ಇಂದು ಮೋದಿ ಮಾತುಕತೆ ನಡೆಸಿದ್ದರು. ನಿನ್ನೆ ದೇಶದ ತಜ್ಞ ವೈದ್ಯರ ಜತೆ ಮಾತುಕತೆ ನಡೆಸಿದ್ದರು.

ಮೋದಿಯವರ ಭಾಷಣದ ಬಳಿಕವೇ ಕರ್ನಾಟಕ ರಾಜ್ಯ ಸರ್ಕಾರ ಮುಂದಿನ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಈಗ ಇಡೀ ದೇಶದ ಕಣ್ಣು ಮೋದಿಯವರ ಇವತ್ತಿನ ರಾತ್ರಿ 8:45 ಭಾಷಣದ ಮೇಲೆ ನೆಟ್ಟಿದೆ.

Leave A Reply

Your email address will not be published.