” ಲೋ.. ನಂಗ್ ಎಲ್ಡ್ ಕೊಡ್….ಬಾರ್ಲ, ಇತ್ಕಡೆ ತತ್ತಾ….” | ಲಾರಿ ಮಗುಚಿ ಬಿದ್ದಷ್ಟೆ ವೇಗದಲ್ಲಿ ಬಿಟ್ಟಿ ಹೆಂಡಕ್ಕೆ ನೂಕು ನುಗ್ಗಲು ನಡೆಸಿ ದೋಚಿಕೊಂಡು ಹೋದ ಬಾಟ್ಲಿ ಪ್ರಿಯರು

” ಲೋ.. ನಂಗ್ ಎಲ್ಡ್ ಕೊಡ್….ಬಾರ್ಲ, ಇತ್ಕಡೆ ತತ್ತಾ.. ಎತ್ಕoಬಾ, ಎತ್ಕoಬಾ….ಇದು ಈ ಪರಿ ಕೂಗಾಡುತ್ತಿರುವ ದೃಶ್ಯ ಇಂದು ಕಂಡುಬಂದದ್ದು ಮದ್ಯಪ್ರಿಯರು ಚಿಕ್ಕಮಗಳೂರಿನ ತರೀಕೆರೆಯ ಎಂ.ಸಿ.ಹಳ್ಳಿ ಬಳಿ.
ಅಲ್ಲಿ ಬಿಟ್ಟಿ ಮದ್ಯಕ್ಕಾಗಿ ರಸ್ತೆಯಲ್ಲೇ ದೊಡ್ಡ ಕಲರವ ನಡೆದುಹೋಗಿದೆ.

ದೇಶದಲ್ಲಿ ನಿತ್ಯವೂ ನೂರಾರು ಕಡೆ ರಸ್ತೆ ಅಪಘಾತ ಸಂಭವಿಸುತ್ತಲೇ ಇರುತ್ತದೆ. ಇಂತಹ ಅಪಘಾತಗಳಲ್ಲಿ ನೂರಾರು ಜನ ಪ್ರಾಣವನ್ನೂ ಕಳೆದುಕೊಳ್ಳುತ್ತಾರೆ. ಆದರೆ, ಕೆಲವರು ಮಾತ್ರ ಅಂತಹ ಅನಾಹುತದಲ್ಲೂ ತಮ್ಮ ಲಾಭವನ್ನು ಹುಡುಕುತ್ತಾರೆ. ಸರಕು ಸಾಗಣೆ ವಾಹನ ಪಲ್ಟಿಯಾದಾಗ ಅದರಲ್ಲಿದ್ದ ವಸ್ತುಗಳನ್ನೆಲ್ಲಾ ಬಾಚಿಕೊಂಡು ಹೋಗುವುದು, ಕೋಳಿ ವಾಹನ ಪಲ್ಟಿಯಾದರೆ ಮೂಟೆ ಕೋಳಿಯನ್ನೇ ಕದ್ದೊಯ್ಯುವುದು ಆಗಾಗ ನಡೆಯುತ್ತಿದೆ.

ಇಂತಹದ್ದೇ ಒಂದು ಘಟನೆ ಚಿಕ್ಕಮಗಳೂರಿನ ತರೀಕೆರೆಯ ಎಂ.ಸಿ.ಹಳ್ಳಿ ಬಳಿ ಮತ್ತೆ ನಡೆದಿದ್ದು, ಮದ್ಯ ಸಾಗಿಸುತ್ತಿದ್ದ ವಾಹನ ಪಲ್ಟಿಯಾದ ಪರಿಣಾಮ ಜನರು ಮದ್ಯಕ್ಕಾಗಿ ಮುಗಿಬಿದ್ದಿದ್ದಾರೆ.

ಚಿಕ್ಕಮಗಳೂರಿನ ತರೀಕೆರೆಯ ಎಂ.ಸಿ.ಹಳ್ಳಿ ಬಳಿ ಬೆಂಗಳೂರಿಂದ ಶಿವಮೊಗ್ಗಕ್ಕೆ ಮದ್ಯಸಾಗಿಸುತ್ತಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಲಾರಿಯಲ್ಲಿದ್ದ ಮದ್ಯದ ಬಾಟಲಿಗಳೆಲ್ಲಾ ಚೆಲ್ಲಾಪಿಲ್ಲಿಯಾಗಿವೆ. ಅಪಘಾತ ನಡೆದ ಕೆಲವೇ ಕ್ಷಣದಲ್ಲಿ ಮಧು ಮಕರಂದ ಹೀರಲು ಬರುವ ದುಂಬಿಗಳಂತೆ ಗುಂಪುಗುಂಪಾಗಿ ಜನ ಧಾಂಗುಡಿ ಇಟ್ಟಿದ್ದಾರೆ. ಒಳ್ಳೆ ದರೋಡೆ ನಡೆದ ವೇಗದಲ್ಲಿ ಬಾಟಲ್ ಗಾಗಿ ನೂಕು ನುಗ್ಗಲು ನಡೆಸಿದ್ದಾರೆ. ಪೊಲೀಸರು ಬರುವಷ್ಟರಲ್ಲಿ ಅರ್ಧ ಮಾಲು ಖತಮ್ !

ಅಪಘಾತದ ಸ್ಥಳಕ್ಕೆ ಬಂದ ಪೊಲೀಸರಿಗೆ ಪರಿಸ್ಥಿತಿಯನ್ನು ನಿಯಂತ್ರಿಸುವುದೇ ಹರಸಾಹಸವಾಗಿ ಲಾಠಿ ಬೀಸಬೇಕಾದ ಸಂದರ್ಭ ಎದುರಾಗಿದೆ. ಮದ್ಯದ ಮತ್ತೇ ಹಾಗೆಯಾ ಗೊತ್ತಿಲ್ಲ. ಏನೇ ಆದರೂ ಅಪಘಾತದ ಸಂದರ್ಭದಲ್ಲಿ ಜನರು ಮದ್ಯದ ಬಾಟಲಿಯನ್ನು ಕಂಡೇ ನಶೆ ಏರಿದವರಂತೆ ವರ್ತಿಸಿದ್ದು ಮಾತ್ರ ನಿಜಕ್ಕೂ ವಿಪರ್ಯಾಸ.

Leave A Reply

Your email address will not be published.