ಮಂಗಳೂರಲ್ಲಿ ಕೊರೋನಾ ತಾಂಡವ ನೃತ್ಯ | ಬೆಂದೂರ್ ವೆಲ್ ನ ಬೆಥನಿ ಶಿಕ್ಷಣ ಸಂಸ್ಥೆಯ 19 ಶಿಕ್ಷಕಿಯರಿಗೆ ಪಾಸಿಟಿವ್

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದೀಗ ಬೆಂಗಳೂರಿನ ಬೆಥನಿ ಶಿಕ್ಷಣ ಸಂಸ್ಥೆಯ 19 ಶಿಕ್ಷಕಿಯರಿಗೆ ಸೋಂಕು ತಗುಲಿದೆ.

ಮಂಗಳೂರು ನಗರದ ಬೆಂದೂರುವೆಲ್ ನಲ್ಲಿರುವ ಬೆಥನಿ ಎಜ್ಯುಕೇಶನ್ ಸೊಸೈಟಿನ 19 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಆ ಪ್ರದೇಶಈಗ ಸೀಲ್ ಡೌನ್ ಮಾಡಲಾಗಿದೆ.

ಮೊದಲಿಗೆ ಬೆಥನಿಯ ಓರ್ವ ಸಿಸ್ಟರ್ ಗೆ ಕೊರೋನಾ ಪಾಸಿಟಿವ್ ಬಂದಿತ್ತು. ಅದರ ಹಿನ್ನೆಲೆಯಲ್ಲಿ ಉಳಿದ 90 ಜನ ಸ್ಟಾಫ್ ನ ಪರೀಕ್ಷೆ ನಡೆಸಲಾಗಿದ್ದು, ಈ ವೇಳೆ 19 ಮಂದಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ. ಸದ್ಯ ಬೆಥನಿ ಎಜುಕೇಶನ್ ಸೊಸೈಟಿ ಸೇರಿ ಇತರೆ ಸಂಸ್ಥೆಗಳನ್ನು ಸೀಲ್‍ಡೌನ್ ಮಾಡಿದ್ದು, ಸೋಂಕಿತರನ್ನು ಕಾನ್ವೆಂಟ್ ಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ.
ಈ ಸೊಂಕಿತರಿಂದ ಅದೆಷ್ಟು ಜನ ಸೋಂಕು ಸೋರಿಕೆ ಮಾಡಿದ್ದಾರೆ ಮತ್ತು ಎಷ್ಟು ಜನ ಮಕ್ಕಳಿಗೆ ಸೋಂಕು ಹರಡಿರಬಹುದು ಎನ್ನುವುದು ಇನ್ನೂ ನಿಗೂಢ. ಆ ನಿಗೂಢತೆ ಈಗ ಜಿಲ್ಲಾಡಳಿತವನ್ನು ತಲೆಕೆಡಿಸಿಕೊಳ್ಳುವ ಹಾಗೆ ಮಾಡಿದೆ.

ಬೆಂದೂರ್ ವೆಲ್ ಚರ್ಚ್ ಸೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎಚ್ಚರಿಕೆ ವಹಿಸಲು ಆರೋಗ್ಯ ಇಲಾಖೆ ಸೂಚನೆ ನೀಡಿದ್ದು, ಈ ಪ್ರದೇಶಗಳನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಣೆ ಮಾಡಲಾಗಿದೆ.

Leave A Reply

Your email address will not be published.