Ad Widget

ಸ್ಯಾಂಡಲ್‌ವುಡ್ ನ ಯುವ ನಟ ನಿರ್ಮಾಪಕ ಕೋರೋನಾಗೆ ಬಲಿ

ಸಂಯುಕ್ತ 2, ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರಗಳನ್ನು ನಿರ್ಮಿಸಿದ್ದ ಯುವ ನಟ, ನಿರ್ಮಾಪಕ ಡಿಎಸ್ ಮಂಜುನಾಥ್ ಅವರು ಕೊರೋನಾಗೆ ಬಲಿಯಾಗಿದ್ದಾರೆ. 

ಮೊನ್ನೆಯಷ್ಟೇ  ನಗರದ ಖಾಸಗಿ ಆಸ್ಪತ್ರೆಗೆ ಮಂಜುನಾಥ್ ದಾಖಲಾಗಿ, ಕೊರೊನಾ ಪರೀಕ್ಷೆಗೆ ಒಳಗಾಗಿದ್ದರು. ನಂತರ ಅವರ ಪರೀಕ್ಷೆ ವರದಿ ಪಾಸಿಟಿವ್‌ ಬಂದಿತ್ತು. ಹಾಗಾಗಿ ಚಿಕಿತ್ಸೆ ಮುಂದುವರೆಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಮಂಜುನಾಥ್ ಪ್ರಸಂಟ್ ಪ್ರಪಂಚ, 0% ಲವ್ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದು, ಕೆಮಿಸ್ಟ್ರಿ ಆಫ್ ಕರಿಯಪ್ಪ, ಸಂಯುಕ್ತ 2 ಸಿನಿಮಾಗಳನ್ನ ನಿರ್ಮಿಸಿದ್ದರು.

Ad Widget Ad Widget Ad Widget

ಗಣ್ಯರಿಗೆ ಕೋರೋನಾ ಬಾಧಿಸುತ್ತಿದ್ದು, ಕೆಲವರು ತೀರಿಕೊಂಡಿದ್ದಾರೆ. ಮೊನ್ನೆ ನಟಿ ಸುನೆತ್ರಾ ಪಂಡಿತ್ ಅವರ ಅಕ್ಕ ತೀರಿಕೊಂಡಿದ್ದರು. ಆ ಸಂಧರ್ಭದಲ್ಲಿ ಕೋರೋನಾ ಇಲ್ಲ ಎನ್ನುವ ಜನರಿಗೆ ಕಪಾಳಕ್ಕೆ ಬಾರಿಸಬೇಕು ಎಂದು ಆಕ್ರೋಶ ಹೊರಹಾಕಿದ್ದರು.

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇಂದು ಒಂದೇ ದಿನ ಬರೋಬ್ಬರಿ 19 ಸಾವಿರ ಮಂದಿಗೆ ಸೋಂಕು ವಕ್ಕರಿಸಿದೆ. ಇನ್ನು 81 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ.

Ad Widget Ad Widget Ad Widget

Leave a Reply

error: Content is protected !!
Scroll to Top
%d bloggers like this: