Ad Widget

ಕನಕಮಜಲು | ಉಚಿತ ಕೋವಿಡ್ ಲಸಿಕಾ ಕಾರ್ಯಕ್ರಮ

ಉಚಿತ ಕೋವಿಡ್ ಲಸಿಕಾ ಕಾರ್ಯಕ್ರಮವು ಜೆಸಿಐ ಸುಳ್ಯ ಸಿಟಿ ಹಾಗೂ ಕನಕಮಜಲು ಗ್ರಾಮ ಪಂಚಾಯತ್ ಇದರ ಸಹಭಾಗಿತ್ವದಲ್ಲಿ ಎ.16 ರಂದು ಕನಕಮಜಲು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಜೆಸಿಐ ಸುಳ್ಯ ಸಿಟಿಯ ಘಟಕಾಧ್ಯಕ್ಷರಾದ ಜೆಸಿ ಚಂದ್ರಶೇಖರ ಕನಕಮಜಲು ವಹಿಸಿದರು. ಕಾರ್ಯಕ್ರಮ ಉದ್ಘಾಟನೆಯನ್ನು ಗ್ರಾಮ ಪಂಚಾಯತ್ ಕನಕಮಜಲು ಇದರ ಅಧ್ಯಕ್ಷ ಶ್ರೀ ಶ್ರೀಧರ್ ಕುತ್ಯಾಳ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಕನಕಮಜಲು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸರೋಜಿನಿ ಉಪಸ್ಥಿತರಿದ್ದರು.

ಕೋವಿಡ್ ಲಸಿಕಾ ಬಗ್ಗೆ ಮಾಹಿತಿಯನ್ನು ಕಿರಿಯ ಆರೋಗ್ಯ ಸಹಾಯಕರು ಶ್ರೀಮತಿ ಜಲಜಾಕ್ಷಿ ನೀಡಿದರು. ಜೆಸಿಐ ಸುಳ್ಯ ಸಿಟಿಯ ಕಾರ್ಯದರ್ಶಿ ಅಶ್ವಥ್ ಅಡ್ಕಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸುಮಾರು 250 ಸಾರ್ವಜನಿಕರಿಗೆ ಕೋವಿಡ್ ಲಸಿಕೆಯನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಜೆಸಿಐ ಸುಳ್ಯ ಸಿಟಿಯ ಪದಾಧಿಕಾರಿಗಳು ಮತ್ತು ಸದಸ್ಯರುಗಳು, ಸಾರ್ವಜನಿಕರು ಉಪಸ್ಥಿತರಿದ್ದರು. ನಮ್ಮೊಂದಿಗೆ ಆಶಾಕಾರ್ಯಕರ್ತೆಯರು, ಶುಶ್ರೂಷಾ ಸಿಬ್ಬಂದಿ ವರ್ಗದವರು ಸಹಕರಿಸಿದರು.

Leave a Reply

error: Content is protected !!
Scroll to Top
%d bloggers like this: