ಕೈ ಮೀರಿದ ಕೊರೊನಾ ಇಂದು ದೇಶದಲ್ಲಿ  2,61,500 ಮಂದಿಗೆ ಕೋವಿಡ್ ದೃಢ‌, 1,501 ಮಂದಿ ಸಾವು

ನವದೆಹಲಿ: ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ಕಳೆದ 24 ಗಂಟೆಗಳಲ್ಲಿ ಭಾರತವು 2,61,500 ಹೊಸ ಕೊರೊನ ಪ್ರಕರಣಗಳನ್ನು ಕಂಡಿದ್ದು, 1,501 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ.

1,38,423 ಮಂದಿಯನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದೆ.

24 ಗಂಟೆಯೊಳಗೆ ವರದಿ ನೀಡಲು ಹೈಕೋರ್ಟ್ ಸೂಚನೆ

ಕೋವಿಡ್ ಪರೀಕ್ಷೆ ವರದಿ ನೀಡುವುದರಲ್ಲಿ ವಿಳಂಬವಾಗುತ್ತಿದೆ. ಎಸ್ಎಂಎಸ್, ವಾಟ್ಸಾಪ್ ಮೂಲಕ ಶೀಘ್ರ ವರದಿಗೆ ಸೂಚನೆ ನೀಡಲಾಗಿದೆ. 24 ಗಂಟೆಯೊಳಗೆ ವರದಿ ನೀಡಲು ಹೈಕೋರ್ಟ್ ಸೂಚನೆ ನೀಡಿದ್ದು, ಟೆಸ್ಟ್ ಮಾಡಿಸಿದವರು ಹೋಮ್ ಕ್ವಾರಂಟೈನ್ ನಲ್ಲಿ ಇರಬೇಕು ಎಂದು ತಿಳಿಸಿದೆ.

ಬೆಡ್ ನಿರ್ವಹಣೆಗೆ ವ್ಯವಸ್ಥೆ ಇರುವುದಾಗಿ ಸರ್ಕಾರದಿಂದ ಹೇಳಿಕೆ ನೀಡಲಾಗಿದೆ. ಬೆಡ್ ಒದಗಿಸುವುದು ಸರ್ಕಾರದ ಕರ್ತವ್ಯ. ಅಗತ್ಯವಿಲ್ಲದಿದ್ದರೂ ಕೆಲವರು ಖಾಸಗಿ ಆಸ್ಪತ್ರೆ ಸೇರಿದ್ದಾರೆ. ಆಸ್ಪತ್ರೆಗೆ ದಾಖಲಾಗಲು ಮಾರ್ಗಸೂಚಿ ರೂಪಿಸಬೇಕು. ಆಸ್ಪತ್ರೆಗಳ ದರ ನಿಯಂತ್ರಣಕ್ಕೆ ಹೆಲ್ಪ್ ಲೈನ್ ಆರಂಭಿಸಬೇಕು. ಸರ್ಕಾರ ಹೆಲ್ಪ್ ಲೈನ್ ಬಗ್ಗೆ ಪ್ರಚಾರ ಕೊಡಬೇಕು ಎಂದು ಹೈಕೋರ್ಟ್ ಸೂಚನೆ ನೀಡಿದೆ.

Leave A Reply

Your email address will not be published.