ಕುಮಾರ ಸ್ವಾಮಿಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಬೆಡ್ ಸಿಕ್ಕಿಲ್ಲ ಅನ್ನುವುದು ಇವತ್ತಿನ ದೊಡ್ಡ ಸುದ್ದಿ | ಅಷ್ಟಕ್ಕೂ ಮಣಿಪಾಲ್ ಆಸ್ಪತ್ರೆ ಬಿಟ್ರೆ ಬೇರೆ ಆಸ್ಪತ್ರೆ ಇಲ್ವೇ ?!

ಮಹಾಮಾರಿ ಕೊರೋನಾ ವೈರಸ್ ಸೋಂಕಿಗೊಳಗಾಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕೂಡ ಆಸ್ಪತ್ರೆಗೆ ದಾಖಲಾಗಲು ಹಾಸಿಗೆಗಾಗಿ ಪರದಾಡಿದ ಘಟನೆ ನಡೆದಿದೆ.ಹಾಗೆಂದು ಎಲ್ಲಾ ಮಾಧ್ಯಮಗಳು ಸುದ್ದಿ ಬಿತ್ತರಿಸುತ್ತಿವೆ.

ಬಸವಕಲ್ಯಾಣ ಕ್ಷೇತ್ರದ ಉಪಚುನಾವಣಾ ಪ್ರಚಾರಕ್ಕೆ ಹೋಗಿದ್ದ ಕುಮಾರಸ್ವಾಮಿ ಅವರಿಗೆ ಶುಕ್ರವಾರ ಸಂಜೆಯೇ ದಣಿವು ಕಾಣಿಸಿಕೊಂಡಿದೆ. ಹೀಗಾಗಿ ಬೆಂಗಳೂರಿಗೆ ಮರಳಿ, ಮನೆಗೆ ಹೋಗದೆ ಹೋಟೆಲ್ ಒಂದರಲ್ಲಿ ಉಳಿದುಕೊಂಡಿದ್ದರು. ಇಂದು ಬೆಳಿಗ್ಗೆ ವೈದ್ಯಕೀಯ ತಪಾಸಣೆ ಮಾಡಿಸಿಕೊಂಡಿದ್ದು, ಈ ವೇಳೆ ಕುಮಾರಸ್ವಾಮಿಯವರಲ್ಲಿ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಬಳಿಕ ವೈದ್ಯರು ಕೂಡಲೇ ಆಸ್ಪತ್ರೆಗೆ ದಾಖಲಾಗುವಂತೆ ಸಲಹೆ ನೀಡಿದ್ದರು.

ಆಸ್ಪತ್ರೆಗೆ ದಾಖಲು ಮುಂದಾದ ಕುಮಾರಸ್ವಾಮಿಯವರು ಮಣಿಪಾಲ್ ಆಸ್ಪತ್ರೆಯನ್ನು ಸಂಪರ್ಕಿಸಿದ್ದಾರೆ. ಆದರೆ, ಈ ವೇಳೆ ಹಾಸಿಗೆ ಖಾಲಿಯಿಲ್ಲ ಎಂದು ಪ್ರತಿಕ್ರಿಯೆ ಬಂದಿದೆ. ಈ ನಡುವೆ ವಿಚಾರ ತಿಳಿದ ಕೂಡಲೇ ಆರೋಗ್ಯ ಸಚಿವ ಸುಧಾಕರ್ ಅವರು ಮಣಿಪಾಲ್ ಆಸ್ಪತ್ರೆಯಲ್ಲಿ ಹಾಸಿಗೆ ದೊರಕಿಸಿ ಕೊಡಲು ಪ್ರಯತ್ನಿಸುತ್ತಿದ್ದಾರೆಂದು ತಿಳಿದುಬಂದಿದೆ. ಹಾಸಿಗೆ ದೊರೆತ ಕೂಡಲೇ ಕುಮಾರಸ್ವಾಮಿಯವರು ಆಸ್ಪತ್ರೆಗೆ ದಾಖಲಾಗಲಿದ್ದಾರೆಂದು ಕುಮಾರಸ್ವಾಮಿಯವರ ಕುಟುಂಬ ಮೂಲಗಳು ಮಾಹಿತಿ ನೀಡಿದೆ. 

ಕುಮಾರಸ್ವಾಮಿಯವರಿಗೆ ಬೆಡ್ ಸಿಗದೇ ಇರುವುದು ಮಣಿಪಾಲ್ ಹಾಸ್ಪಿಟಲ್ ನಲ್ಲಿ. ಬೆಂಗಳೂರಿನಲ್ಲಿ ಸಾವಿರಾರು ಆಸ್ಪತ್ರೆಗಳಿವೆ. ಐಷಾರಾಮಿ ಸೌಲಭ್ಯಗಳಿರುವ ಮಣಿಪಾಲ್ ಹಾಸ್ಪಿಟಲ್ ನಲ್ಲಿ ಕುಮಾರಸ್ವಾಮಿ ಬರ್ತಾರೆ ಅಂತ ಬೆಡ್ ಖಾಲಿ ಯಾರೂ ಇಟ್ಟಿರಲ್ಲ ಅಲ್ಲವೇ? ಒಂದು ಕಡೆ ಬೆಡ್ ಸಿಗದೇ ಹೋದರೆ ಬೇರೊಂದು ಆಸ್ಪತ್ರೆಗೆ ಹೋಗಲಿ. ಬೆಡ್ ಖಾಲಿ ಇರುವ ನೂರಾರು ಅವಕಾಶಗಳು ಬೆಂಗಳೂರಿನಲ್ಲೇ ಇವೆ.

ಯಡಿಯೂರಪ್ಪ ಅವರೂ ಕೂಡ ಕೊರೋನಾ ಸೋಂಕಿಗೊಳಗಾಗಿದ್ದು, ಇದೇ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲರಿಗೂ ಹೈ ಫೈ ಸೌಲಭ್ಯ ಬೇಕು : ಆಸ್ಪತ್ರೆಯಲ್ಲಿ ಕೂಡ.

Leave A Reply

Your email address will not be published.