ಮಗು ಸಹಿತ ವಿವಾಹಿತೆ ನಾಪತ್ತೆ, ಪತ್ತೆಗೆ ಮನವಿ

ಮಂಗಳೂರಿನ ಬೈಕಂಪಾಡಿಯ ಮೀನಕಳಿಯದಲ್ಲಿ ವಾಸವಿರುವ ಹನುಮಂತ ದಳವಾಯಿ ಎಂಬವರ ಪತ್ನಿ ಪವಿತ್ರಾ (23) ತನ್ನ ಒಂದೂವರೆ ವರ್ಷ ಪ್ರಾಯದ ಮಗಳು ರಶ್ಮಿಕಾ ಜತೆ ನಾಪತ್ತೆಯಾಗಿರುವ ಬಗ್ಗೆ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಪವಿತ್ರಾ ಎ.11ರಂದು ಮಧ್ಯಾಹ್ನದಿಂದ ಮಗುವಿನೊಂದಿಗೆ ನಾಪತ್ತೆಯಾಗಿದ್ದಾರೆ. ಬಿಳಿ ಮೈಬಣ್ಣ ಹೊಂದಿರುವ ಪವಿತ್ರಾ 5.2 ಅಡಿ ಎತ್ತರವಿದ್ದಾರೆ. ಕನ್ನಡ ಮಾತನಾಡುತ್ತಾರೆ. ದುಂಡು ಮುಖ, ಸಾಧಾರಣ ಶರೀರ ಹೊಂದಿದ್ದಾರೆ. ಮಗು ಬಿಳಿ ಮೈಬಣ್ಣ ಹೊಂದಿದೆ. ಮಾಹಿತಿ ದೊರೆತವರು ಮಹಿಳಾ ಪೊಲೀಸ್ ಠಾಣೆ (0824-2220525) ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

Leave A Reply

Your email address will not be published.