ಆರ್ಡರ್ ಮಾಡಿದ್ದು ಆ್ಯಪಲ್ | ಬಂದಿದ್ದು ಆ್ಯಪಲ್ ಐಫೋನ್

ಆನ್‌ಲೈನ್ ಶಾಪಿಂಗ್ ನಲ್ಲಿ ಆಡ೯ರ್ ಮಾಡಿದ್ದ ವಸ್ತುಗಳಿಗಿಂತ ಇನ್ನೇನು ಬೇರೆ ವಸ್ತುಗಳು ಬಂದು ಪಡುವ ಕಷ್ಟ ಅಷ್ಟಿಷ್ಟಲ್ಲ.

ಆದರೆ ಇಲೋಬ್ಬ ವ್ಯಕ್ತಿ ತಾನು ಆನ್ ಲೈನ್ ಶಾಪಿಂಗ್ ನಲ್ಲಿ ಮಾಡಿದ್ದು ಸೇಬು ಹಣ್ಣು.

ಆದರೆ ಅವನಿಗೆ ತಲುಪಿದ್ದು ದುಬಾರಿ ಬೆಲೆಯ ಆ್ಯಪಲ್ ಮೊಬೈಲ್. ಇದರ ನಿರೀಕ್ಷೆ ಇಲ್ಲದ ಆತ ಖುಷಿಯಿಂದ ಕುಣಿದು ಕುಪ್ಪಳಿಸಿದ್ದಾನೆ.

ನಿಕ್ ಜೇಮ್ಸ್ ಎನ್ನುವ 50 ವರ್ಷದ ಲಂಡನ್ ನ ಟ್ವಿಕನ್ ಹ್ಯಾಮ್ ನ ವ್ಯಕ್ತಿ ಇತ್ತೀಚೆಗೆ Tesco ಎನ್ನುವ ಇ ಕಾಮರ್ಸ್ ತಾಣದಲ್ಲಿ ತರಕಾರಿ ಜೊತೆಗೆ ಸೇಬು ಹಣ್ಣುಗಳನ್ನು ಆಡ೯ರ್ ಮಾಡಿದ್ದಾನೆ.

ಆರ್ಡರ್ ಮಾಡಿದ ಆತನಿಗೆ ಸಂಸ್ಥೆಯಿಂದ ಮನೆಗೆ ತರಕಾರಿ ಹಾಗೂ ಹಣ್ಣು ಬಂದಿದೆ. ಸೇಬು ಇರಬೇಕಾದ ಜಾಗದಲ್ಲಿ ಆ್ಯಪಲ್ ಐಫೋನ್ ಎಸ್ ಬಂದಿದೆ.

ಆಶ್ಚರ್ಯ ಚಕಿತನಾದ ನಿಕ್ ಜೇಮ್ಸ್ ತಾನು ಆಡ೯ರ್ ಮಾಡಿದ್ದ ಚೀಟಿಯನ್ನು ಪುನಃ ಪರಿಶೀಲಿಸಿದ್ದಾನೆ. ಅದರಲ್ಲೂ ಸೇಬು ಹಣ್ಣು ಎಂದೇ ಇತ್ತು.

ಕಡೆಗೆ Tesco ಕಂಪನಿಯನ್ನು ವಿಚಾರಿಸಿದ್ದಾಗ ಗೊತ್ತಾಗಿದ್ದು Tesco ಕಂಪನಿಯು ತನ್ನ ಮಾರುಕಟ್ಟೆಯನ್ನು ವಿಸ್ತರಣೆ ಮಾಡಲು ಈ ರೀತಿ ಗ್ರಾಹಕರಿಗೆ ವಿಶೇಷ ಉಡುಗೊರೆಗಳನ್ನು ನೀಡಲು ಮುಂದಾಗಿದೆ ಎಂದು.

ಅದರಲ್ಲೂ ಸೇಬುಹಣ್ಣಿನ‌ ಬದಲು ದುಬಾರಿ ಐಫೋನ್ ಬಂದದ್ದು ಆತನಿಗಂತೂ ಖುಷಿಯೋ ಖುಷಿ.

Leave A Reply

Your email address will not be published.