Ad Widget

ಪುತ್ತೂರಿನಲ್ಲಿ ಚಿನ್ನಕ್ಕೆ ತಾಮ್ರದ ಕಲಬೆರಕೆ | ಆಕ್ರೋಶಿತ ಜನರಿಂದ ಬಂಗಾಳಿಗೆ ಬಿತ್ತು ಗೂಸಾ

Ad Widget Ad Widget Ad Widget

ಪುತ್ತೂರಿನ ರಾಧಿಕಾ ಪ್ಲಾಝಾದಲ್ಲಿ ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಗಾಯತ್ರಿ ಡೈ ವರ್ಕ್ಸ್ ನಲ್ಲಿ ಅಕ್ಕಸಾಲಿಗನೊಬ್ಬ ಚಿನ್ನಕ್ಕೆ ತಾಮ್ರ ಕಲಬೆರಕೆ ಮಾಡಿ ಗ್ರಾಹಕರಿಗೆ ವಂಚಿಸುತ್ತಿದ್ದ ಆರೋಪ ಕೇಳಿಬಂದಿದೆ.

ಇದೇ ಆರೋಪದಲ್ಲಿ ಆಕ್ರೋಶಿತಗೊಂಡ ಗ್ರಾಹಕರು ಅಕ್ಕಸಾಲಿಗನಿಗೆ ಯದ್ವಾತದ್ವಾ ಥಳಿಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.

ಅಕ್ಕಸಾಲಿಗ ಪಶ್ಚಿಮ ಬಂಗಾಳ ಮೂಲದವನೆಂದು ತಿಳಿದುಬಂದಿದ್ದು ಹಲವಾರು ಗ್ರಾಹಕರಿಗೆ ಈ ರೀತಿ ಪಂಗನಾಮ ಹಾಕಿದ್ದಾನೆ.

ಆಕ್ರೋಶಗೊಂಡ ಗ್ರಾಹಕರು ಪುತ್ತೂರಿನ ಎಂ.ಎಸ್ ರಸ್ತೆಯಲ್ಲಿ ಅಕ್ಕಸಾಲಿಗನಿಗೆ ಥಳಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸ್ಥಳಕ್ಕೆ ಪೊಲೀಸರು ಧಾವಿಸಿ ಆರೋಪಿ ಅಕ್ಕಸಾಲಿಗನನ್ನು ವಶಕ್ಕೆ ಪಡೆದಿದ್ದಾರೆ.

Ad Widget Ad Widget Ad Widget

Leave a Reply

error: Content is protected !!
Scroll to Top
%d bloggers like this: