Ad Widget

ಬೆಳ್ತಂಗಡಿಯಲ್ಲಿ ಊಟವಿಲ್ಲದೆ ಕಂಗಾಲಾಗಿದ್ದ ಮಹಾರಾಷ್ಟ್ರದ ಜನರಿಗೆ ನೆರವಾದ ‘ಅಲ್ ಉಮ್ಮ ಹೆಲ್ತ್ ಲೈನ್ ‘ ಕಾರ್ಯಕರ್ತ ಹೋಟೆಲ್ ಮಾಲೀಕ ಸುಹೈಲ್ ಸಮಕ್ ಡೈನ್ ಸಹಾಯ ಹಸ್ತ

Ad Widget Ad Widget Ad Widget

ಮಹರಾಷ್ಟ್ರದಿಂದ ಮೂಡಿಗೆರೆ ಕೆಲಸಕ್ಕೆಂದು ಬಂದ 30 ಜನ ಸರಿಯಾಗಿ ಊಟವನ್ನು ಕೂಡ ಮಾಡದೆ  ಬೆಳ್ತಂಗಡಿ ಪರಿಸರದಲ್ಲಿ ಪರದಾಡುತ್ತಿದ್ದರು.

ಅವರ ಕಷ್ಟವನ್ನು ಕಂಡು ತಕ್ಷಣ ಬೆಳ್ತಂಗಡಿಯ  ಹೋಟೆಲ್ ಉದ್ಯಮಿಯೊಬ್ಬರು ಸಕಾಲಕ್ಕೆ ಸ್ಪಂದಿಸಿದ್ದಾರೆ. ಹೋಟೆಲ್ ಮಾಲಕ ಮತ್ತು ಅಲ್ ಉಮ್ಮ ಹೆಲ್ತ್ ಲೈನ್ ತಂಡದ ಕಾರ್ಯಕರ್ತ ಸುಹೈಲ್ ಸಮಕ್ ಡೈನ್ ಅವರು 30 ಜನರಿಗೆ ತಕ್ಷಣಕ್ಕೆ ಊಟದ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದಾರೆ.

ಅಲ್ಲದೆ ಅವರಿಗೆ ತಮ್ಮ ತಮ್ಮ ಊರಿಗೆ ಹೋಗಲು ಧನಸಹಾಯ ಮಾಡಿದ್ದಲ್ಲದೆ, ಎಲ್ಲರನ್ನೂ ಆಯಾ ಬಸ್ ಹತ್ತಿಸಿ ಕಳಿಸಿದ್ದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

Ad Widget Ad Widget Ad Widget

Leave a Reply

error: Content is protected !!
Scroll to Top
%d bloggers like this: