ಅಂದಿನ ಬಾಕ್ಸಿಂಗ್ ಚಾಂಪಿಯನ್ ಅಬಿದ್ ಖಾನ್ ಇವತ್ತು ಗೂಡ್ಸ್ ರಿಕ್ಷಾ ಚಾಲಕ | ” ಬಡವರು ಕ್ರೀಡೆಗಳಲ್ಲಿ ಭಾಗವಹಿಸುವುದು ಕೇವಲ ಟೈಮ್ ವೇಸ್ಟ್ “

ಉತ್ತರ ಭಾರತದ ಬಾಕ್ಸಿಂಗ್ ಚಾಂಪಿಯನ್ ಆಗಿದ್ದ ಅಬಿದ್ ಖಾನ್ ಅವರು ತಮ್ಮ ಜೀವನದಲ್ಲಿ ಬದುಕುಳಿಯಲು ಹೆಣಗಾಡಿದ ನಂತರ ತಮ್ಮ ಮಕ್ಕಳನ್ನು ಕೂಡ ಯಾವುದೇ ಕ್ರೀಡೆಗಳಿಗೆ ಸೇರಿಸಲಿಲ್ಲ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ರಾಷ್ಟ್ರಮಟ್ಟದ ಬಾಕ್ಸಿಂಗ್ ಚಾಂಪಿಯನ್ ಅಬಿದ್ ಖಾನ್ ಅವರು ಇದೀಗ ಜೀವನ ಸಾಗಿಸುವ ಸಲುವಾಗಿ ಆಟೋ ಓಡಿಸುವುದನ್ನು ಕಾಣಬಹುದು.

ಈ ವಿಡಿಯೋವು ಭಾರತೀಯ ಕ್ರೀಡಾಪಟುಗಳ ನಿರ್ಲಕ್ಷ್ಯ ಮತ್ತು ಸ್ಥಿತಿಯ ಬಗ್ಗೆ ದೊಡ್ಡ ಚರ್ಚೆಗೆ ನಾಂದಿ ಹಾಡಿದೆ. ಸ್ಪೋರ್ಟ್ಸ್ ಗಾಂವ್ ಎಂಬ ಚಾನೆಲ್ ಈ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದೆ.

ಮಾಜಿ ಬಾಕ್ಸಿಂಗ್ ಚಾಂಪಿಯನ್ ಅಬಿದ್ ಖಾನ್ ಅವರ ಕಥೆ. ಅವರು ಕೇವಲ ತರಬೇತಿ ಪಡೆದ ವೃತ್ತಿಪರರಲ್ಲ, ಬದಲಾಗಿ ಆತ 5 ವರ್ಷಗಳ ಕಾಲ ಸೈನ್ಯದ  ಬಾಕ್ಸಿಂಗ್ ತಂಡಗಳ ತರಬೇತುದಾರರಾಗಿದ್ದರು. ಅವರು ಈ ಹಿಂದೆ  ಪಂಜಾಬ್ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದರು. 1980 ರ ದಶಕದ ಉತ್ತರಾರ್ಧದಲ್ಲಿ ಪಟಿಯಾಲಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್‌ನ ವಿದ್ಯಾರ್ಥಿಯೂ ಆಗಿದ್ದರು. ಆದಾಗ್ಯೂ, ಹಣಕಾಸಿನ ಬಿಕ್ಕಟ್ಟಿನಿಂದಾಗಿ, ಖಾನ್ ಕೇವಲ ಹೊಟ್ಟೆ ಹೊರೆದುಕೊಳ್ಳಲು ಆಟೋ ಓಡಿಸಲು ಮತ್ತು ಇತರ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಾ ಬದುಕಬೇಕಾಗಿದೆ.

ಅವರು ತಮ್ಮ ಇವತ್ತಿನ ಅವಸ್ಥೆಯ ಬಗ್ಗೆ ವೀಡಿಯೊದಲ್ಲಿ ಮಾತನಾಡಿದ್ದಾರೆ. ಅಲ್ಲಿ ಅವರು ತಮ್ಮ ಹಿನ್ನೆಲೆಯ ಹೊರತಾಗಿಯೂ ಕೆಲಸ ಹುಡುಕಲು ಪಟ್ಟ ಕಷ್ಟವನ್ನು ಹೇಳಿಕೊಂಡಿದ್ದಾರೆ. ಆತ ತಮ್ಮ ಮಕ್ಕಳನ್ನು ಯಾರನ್ನೂ ಕೂಡ ಕ್ರೀಡೆಗಳಿಗೆ ಸೆರಿಸಲಿಲ್ಲ.

” ಟೆನ್ನಿಸ್, ಬ್ಯಾಡ್ ಮಿಂಟನ್, ಕ್ರಿಕೆಟ್ ಮುಂತಾದ ಕ್ರೀಡೆಗಳು ಶ್ರೀಮಂತರಿಗೆ. ಬಾಕ್ಸಿಂಗ್ ಇರುವುದು ಹೀಗೆ ಬಡವರಿಗೆ. ಜೀವನದ ಜತೆ ಗುದ್ದಾಡುತ್ತ, ಬಡಿದಾಡುವವನಿಗೆ ಮಾತ್ರ ಬಾಕ್ಸಿಂಗ್ ಕಿಕ್ ಬಾಕ್ಸಿಂಗ್ ನಂತಹ ಕ್ರೀಡೆಗಳು. ದುಡ್ಡಿಲ್ಲದೆ ಇರುವವರು ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಅಸಾಧ್ಯ. ಅದು ಬರೀ ಟೈಮ್ ವೇಸ್ಟ್. ಇಂದಿನ ಯುವಜನತೆ ತಾವು ಏನಾದರೂ ಸಾಧಿಸಬೇಕೆಂದು ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ ಬರಬರುತ್ತಾ ದುಡ್ಡು ಇಲ್ಲದೆ ಹೋದಾಗ, ಬದುಕಿನಲ್ಲಿ ಕಷ್ಟ ಅನುಭವಿಸುವಾಗ ತಾವು ಇಷ್ಟು ದಿನ ಕಳೆದುಹೋದ ಸಮಯ ವೇಸ್ಟ್ ಆಯಿತಲ್ಲ ಅಂತ ಅನ್ನಿಸಲು ಪ್ರಾರಂಭವಾಗುತ್ತದೆ” ಎಂದು ಕಣ್ಣೀರು ಹಾಕಿ   ಹೇಳಿದ್ದಾರೆ ಒಂದು ಕಾಲದ ಬಾಕ್ಸಿಂಗ್ ಚಾಂಪಿಯನ್.

ಆದಾಗ್ಯೂ, ಅವರು ಒಂದಲ್ಲ ಒಂದು ದಿನ ಮತ್ತೆ  ಕೋಚಿಂಗ್ ಗೆ ಮರಳಲು ಬಯಸುತ್ತಿದ್ದಾರೆ. ಬಾಕ್ಸಿಂಗ್ ಬದುಕಿನೆಡೆಗೆ ಅವರ ಸೆಳೆತ ಇನ್ನೂ ಕಳೆದು ಹೋಗಿಲ್ಲ.

Leave A Reply

Your email address will not be published.