Breaking: ಉಳ್ಳಾಲದ ಶಾಸಕ ಯು ಟಿ ಖಾದರ್ ಕಾರು ಮತ್ತು ಕಂಟೈನರ್ ನಡುವೆ ಡಿಕ್ಕಿ

ಮಾಜಿ ಸಚಿವ ಮತ್ತು ಉಳ್ಳಾಲದ ಹಾಲಿ ಶಾಸಕ ಯು.ಟಿ.ಖಾದರ್ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾದ ಘಟನೆ ನಡೆದಿದೆ. ಶಾಸಕರು ಅಪಾಯದಿಂದ ಪಾರಾಗಿದ್ದು ಕಾರು ಚಾಲಕನ ಸ್ಥಿತಿ ಗಂಭೀರವಾಗಿದೆ.

ದಾವಣಗೆರೆಯ ಅನುಗೋಡು ಗ್ರಾಮದ ಬಳಿಯಲ್ಲಿ ಯು.ಟಿ.ಖಾದರ್ ಅವರು ಸಂಚರಿಸುತ್ತಿದ್ದ ಕಾರು ಮುಂದೆ ಸಾಗುತ್ತಿದ್ದ ಕಂಟೈನರ್ ಗೆ ಢಿಕ್ಕಿ ಹೊಡೆದಿದೆ.

ಢಿಕ್ಕಿಯಿಂದಾಗಿ ಕಾರಿನ ಮುಂಭಾಗ ನುಜ್ಜುಗುಜ್ಜಾಗಿದ್ದು ಆಗಿದ್ದು, ಗಂಭೀರವಾಗಿ ಗಾಯಗೊಂಡಿರುವ ಕಾರು ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಾಜಿ ಸಚಿವರು ಬೆಂಗಳೂರಿನತ್ತ ಪ್ರಯಾಣ ಬೆಳೆಸುತ್ತಿದ್ದ ವೇಳೆಯಲ್ಲಿ ಈ ಅಪಘಾತ ಸಂಭವಿಸಿದ್ದು, ಅಪಘಾತದ ಬಳಿಕ ಯು.ಟಿ. ಖಾದರ್ ಅವರು ಮತ್ತೊಂದು ವಾಹನದ ಮೂಲಕ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ.

ಅಪಘಾತ ಸ್ಥಳಕ್ಕೆ ಎಸ್.ಪಿ. ಹನುಮಂತರಾಯ ಅವರು ತೆರಳಿ ಪರಿಶೀಲನೆ ನಡೆಸಿದ್ದಾರೆ. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.