ಮಂಗಳೂರು: ಮೀನುಗಾರಿಕಾ ಬೋಟ್ ಸಮುದ್ರಪಾಲು : 12 ಮಂದಿ ನಾಪತ್ತೆ

ಮಂಗಳೂರು: ಕೇರಳ ರಾಜ್ಯದಿಂದ ಮೀನುಗಾರಿಕೆ ನಡೆಸಲು ಬಂದಿರುವ ಬೋಟ್ ದುರಂತದಲ್ಲಿ 12 ಮಂದಿ ಮೀನುಗಾರರು ನಾಪತ್ತೆಯಾಗಿದ್ದಾರೆ.

ಈ ಮೀನುಗಾರರಿಗೆ ಶೋಧ ಕಾರ್ಯ ನಡೆಯುತ್ತಿದೆ.

ಕೇರಳ ರಾಜ್ಯದಿಂದ ಮೀನುಗಾರಿಕೆ ನಡೆಸಲು ಬಂದಿರುವ ಈ ಬೋಟ್ ಮಂಗಳೂರು ಬಂದರಿನಿಂದ 43 ನಾಟಿಕಲ್ ಮೈಲ್ ದೂರದಲ್ಲಿ ದುರಂತಕ್ಕೀಡಾಗಿದೆ.

ಈ ಬೋಟ್ ನಲ್ಲಿ 14 ಮಂದಿ ಮೀನುಗಾರರಿದ್ದು, ಬೋಟ್ ದುರಂತದಲ್ಲಿ ಎಲ್ಲರೂ ಸಮುದ್ರಪಾಲಾಗಿದ್ದಾರೆ.

ಇಂಡಿಯನ್ ಕೋಸ್ಟ್ ಗಾರ್ಡ್ ಸಿಬ್ಬಂದಿ ಬೋಟ್ ಹಾಗೂ ಏರ್ ಕ್ರಾಫ್ಟ್ ಮೂಲಕ ಇಬ್ಬರನ್ನು ರಕ್ಷಿಸಿದ್ದಾರೆ.

ಉಳಿದ 12 ಮಂದಿ ನಾಪತ್ತೆಯಾಗಿದ್ದು, ಅವರಿಗಾಗಿ ಶೋಧಕಾರ್ಯ ನಡೆಯುತ್ತಿದೆ ಎಂದು ಇಂಡಿಯನ್ ಕೋಸ್ಟ್ ಗಾರ್ಡ್ ಅಧಿಕಾರಿಗಳು ತಿಳಿಸಿದ್ದಾರೆ.

Leave A Reply

Your email address will not be published.