Ad Widget

ಎಲ್ಲಾ ರೀತಿಯ ಫೋಟೋಶೂಟ್ ನೋಡಿ ಆಯ್ತು, ಈಗ ಇಲ್ಲಿ ನಡೆದಿದೆ ಫಸ್ಟ್ ನೈಟ್ ಫೋಟೋ ಶೂಟ್ | ಮಧುಮಂಚ ಏರಿದ್ದಾಳೆ ಮದನಾರಿ !!


ಇಲ್ಲಿಯ ತನಕ ನಾವು ಎಲ್ಲಾ ರೀತಿಯ ಫೋಟೋಶೂಟ್ ಗಳನ್ನು ನೋಡಿದ್ದೇವೆ. ಪೋಸ್ಟ್ ಎಂಗೇಜ್ಮೆಂಟ್, ಪ್ರಿವೆಡ್ಡಿಂಗ್, ವೆಡ್ಡಿಂಗ್ ಡೇ ನ ಗ್ರಾಂಡ್ ಫೋಟೋಶೂಟ್, ಪೋಸ್ಟ್ ವೆಡ್ಡಿಂಗ್, ಹನಿಮೂನ್ ಹೋದ ದಿನಗಳ ಕಲರ್ಫುಲ್ ಫೋಟೋಶೂಟ್ ಗಳನ್ನು ಜನರು ಸಾಮಾಜಿಕ ಜಾಲತಾಣಗಳಲ್ಲಿ ನೋಡಿ ಆನಂದಿಸಿದ್ದಾರೆ. ಇತ್ತೀಚೆಗೆ ಕೆಲವರು ಋಷಿಮುನಿಗಳ ಗೆಟಪ್ ಹಾಕಿಕೊಂಡು ಧಾರ್ಮಿಕ ಭಾವನೆಯನ್ನು ಕೆದಕುತ್ತಾರೋ ಏನೋ ಎನ್ನುವಂತಹ ಫೋಟೋಶೂಟ್ ಕೂಡ ಮಾಡಿದ್ದಾರೆ.

Ad Widget Ad Widget

Ad Widget Ad Widget

ತೀರ ಇತ್ತೀಚೆಗೆ, ಮೊನ್ನೆ ವಾರಗಳ ಕೆಳಗೆ ಅರೆಬೆತ್ತಲೆಯಾಗಿ ವಧುವಿನ ದಿರಿಸಿನಲ್ಲಿ ಆಭರಣ ತೊಟ್ಟು ಫೋಟೋಶೂಟ್ ಮಾಡಿಸಿಕೊಂಡಿದ್ದಳು. ವಧುವಿನ ಶೃಂಗಾರದಲ್ಲಿ ಮದ್ಯದ ಬಾಟಲಿ, ಸಿಗರೇಟು ಹಿಡಿದು ನಡೆಸಿದ ಪೋಟೋಶೂಟ್ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಕೇರಳ ಮೂಲದ ಜೋಡಿಯೊಂದು ಋಷಿದಂಪತಿಗಳ ಕಾನ್ಸೆಪ್ಟ್ ನಲ್ಲಿ ಅಶ್ಲೀಲವಾಗಿ ಪೋಟೋಶೂಟ್ ನಡೆಸುವ ಮೂಲಕ ಹಿಂದೂಧರ್ಮಿಯರ ಕೆಂಗಣ್ಣಿಗೆ ಗುರಿಯಾಗಿತ್ತು. ಇದೇ ಜೋಡಿಯ ಆ ಹೆಂಗಸು ಮತ್ತೊಮ್ಮೆ ಕೇರಳ ಶೈಲಿಯ ಆಭರಣಗಳನ್ನು ತೊಟ್ಟು ಅರ್ಧ ಸೀರೆ, ಇನ್ನರ್ಧ ಝಿನ್ಸ್ ಚಡ್ಡಿತೊಟ್ಟು ಪೋಟೋಶೂಟ್ ಮಾಡಿಸಿಕೊಂಡಿದ್ದಳು.

ಈಗ ಅದೇ ಹುಡುಗಿ, ಸ್ಸಾರಿ ಹೆಂಗಸು ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾಳೆ.

” ಬರೀ ಎಂಗೇಜ್ಮೆಂಟ್ ನ ಮತ್ತು ಮದುವೆಯ ಫೋಟೋ ಶೂಟ್ ಮಾಡಿದರೆ ಸಾಕಾ?! ಎಂಗೇಜ್ಮೆಂಟ್ ಮಾಡುವುದು ಮದುವೆ ಆಗಲಿಕ್ಕೆ, ಮದುವೆ ಆಗುವುದು ಫಸ್ಟ್ ನೈಟ್ ಆಚರಿಸುವುದಕ್ಕೆ. ಹೀಗಾಗಿ ‘ ಮೈನ್ ಪ್ರೋಗ್ರಾಮ್ ‘ ನ ಫೋಟೋಶೂಟ್ ಮಾಡದಿದ್ದರೆ ಏನು ಚಂದ ? ಮದುವೆಯ ಹಿಂದಿನ-ಮುಂದಿನ ಫೋಟೋ ಶೂಟ್ ಅನ್ನೆ ನಾವು ಭರ್ಜರಿಯಾಗಿ ಶೂಟ್ ಮಾಡುತ್ತೇವೆ. ಮತ್ತೆ ಮೊದಲ ರಾತ್ರಿಯ ಪುಳಕದ ಕ್ಷಣಗಳನ್ನು ಕಟ್ಟಿಕೊಡುವ ಫೋಟೋಶೂಟ್ ಮಾಡದಿದ್ದರೆ ನೋಡುಗರು ಬೇಜಾರ ಮಾಡಿಕೊಳ್ಳಬಹುದು.!” ಬಹುಶಃ ಹೀಗಂದುಕೊಂಡು ಆಕೆ ಮಧುಮಂಚವೇರಿದ್ದಾಳೆ. ತುಂಟ ಕ್ಯಾಮೆರಾದ ಕಣ್ಣುಗಳು ಆಕೆಯ ಅಂದವನ್ನು ಜೂಮ್ ಹಾಕಿ ಹಾಕಿ ಸೆರೆಹಿಡಿದಿವೆ.

ಮೊದಲ ರಾತ್ರಿಯ ಮಂಚದ ಮೇಲೆ ಅರೆಬೆತ್ತಲಾಗಿ ಕೂತು, ಮಾದಕ ಮತ್ತು ಆಹ್ವಾನಕ ನೋಟ ಬೀರುತ್ತಿರುವ ಆಕೆಯ ಪೋಟೋ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ವೈರಲ್ ಆಗಿದೆ.

ಪೋಟೋಶೂಟ್ ಹೆಸರಿನಲ್ಲಿ ಸಭ್ಯತೆಯ ಚೌಕಟ್ಟನ್ನು ದಾಟುವ ಪ್ರಯತ್ನ ನಡೆದಿದೆ ಎಂದು ಹಲವರು ಕಮೆಂಟು ಮಾಡುತ್ತಿದ್ದಾರೆ. ಮತ್ತೆ ಕೆಲವರು, ‘ಯಾಕೆ ಸಿನಿಮಾ ನಟ ನಟಿಯರು ಮಾತ್ರ ಈ ರೀತಿಯ ಫೋಟೋಶೂಟ್ ಮಾಡಿಸಿಕೊಳ್ಳಬೇಕಾ? ಜನಸಾಮಾನ್ಯರು ಯಾಕೆ ವಿಭಿನ್ನವಾಗಿ ಕಾಣಿಸಿಕೊಳ್ಳಬಾರದು?’  ಎಂದು ಪ್ರಶ್ನೆ ಮಾಡುತ್ತಿದ್ದಾರೆ. 

Ad Widget Ad Widget

1 thought on “ಎಲ್ಲಾ ರೀತಿಯ ಫೋಟೋಶೂಟ್ ನೋಡಿ ಆಯ್ತು, ಈಗ ಇಲ್ಲಿ ನಡೆದಿದೆ ಫಸ್ಟ್ ನೈಟ್ ಫೋಟೋ ಶೂಟ್ | ಮಧುಮಂಚ ಏರಿದ್ದಾಳೆ ಮದನಾರಿ !!”

  1. Pingback: ಪೊಲೀಸರನ್ನು ನೋಡಿಕೊಂಡು ಹೂಸು ಬಿಟ್ಟ ವ್ಯಕ್ತಿಯ ಮೇಲೆ ಬಿತ್ತು ಕೇಸು | ಮುಂದೇನಾಯಿತು ಗೊತ್ತಾ ?! – Hosakananda

Leave a Reply

error: Content is protected !!
Scroll to Top
%d bloggers like this: