Day: April 12, 2021

   ವರ್ಷದ ಬಳಿಕ  ಪುನರಾರಂಭಗೊಂಡ ಸೋಮವಾರದ ಪುತ್ತೂರು ಸಂತೆ

     ಪುತ್ತೂರು ಸಂತೆ ಎಂದೇ ಪ್ರಸಿದ್ದವಗಿದ್ದ ಸೋಮವಾರದ ಸಂತೆ ಎ.12ರಿಂದ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಪುನರಾರಂಭಗೊಂಡಿದೆ. ಕೋವಿಡ್ ಬಿಕ್ಕಟ್ಟಿನ ಹಿನ್ನಲೆಯಲ್ಲಿ ನಗರಸಭಾ ಸುಪರ್ದಿಯಲ್ಲಿ ನಡೆಯುತ್ತಿದ್ದ ಸೋಮವಾರದ ವಾರದ ಸಂತೆಗೆ ಕಳೆದ ಒಂದು ವರ್ಷಗಳಿಂದ ನಿರ್ಬಂಧಿಸಲಾಗಿತ್ತು. ಇದೀಗ ಸಂತೆ ಮರುಜೀವ ಪಡೆದುಕೊಂಡಿದೆ. ತರಕಾರಿ, ಸೊಪ್ಪು, ಹಣ್ಣು ಹಂಪಲು, ವಿವಿಧ ಸರಕು ಸಾಮಾಗ್ರಿಗಳು ಸೇರಿದಂತೆ ಬಹುತೇಕ ಜನರಿಗೆ ಉಪಯೋಗವಾಗುವ ಎಲ್ಲಾ ದಿನಬಳಕೆಯ ಮತ್ತು ಇನ್ನಿತರ ಸಾಮಾಗ್ರಿಗಳು ಪುತ್ತೂರು ಸಂತೆಯಲ್ಲಿ ಜನರಿಗೆ ಕೈಗೆಟಕುವ ದರದಲ್ಲಿ ಸಿಗುತ್ತಿದ್ದು, ಇದಕ್ಕಾಗಿ ಹಲವು ಭಾಗಗಳಿಂದ ರೈತರು …

   ವರ್ಷದ ಬಳಿಕ  ಪುನರಾರಂಭಗೊಂಡ ಸೋಮವಾರದ ಪುತ್ತೂರು ಸಂತೆ Read More »

ಹೆಲ್ಮೆಟ್ ಇಲ್ಲದೆ ಮೂವರು ಲೇಡಿ  ಪೊಲೀಸರ ಸವಾರಿ,ದಂಡ ವಿಧಿಸಿದ ಪೊಲೀಸ್ ಇಲಾಖೆ

ಹೆಲ್ಮೆಟ್ ಧರಿಸದೇ ಮೂವರು ದ್ವಿಚಕ್ರ ವಾಹನ ಸವಾರಿ ಮಾಡಿಕೊಂಡು ಮೊಬೈಲ್ನಲ್ಲಿ ಮಾತನಾಡಿದ ಮೂವರು ಮಹಿಳಾ ಕಾನ್ಸ್ಟೆಬಲ್ಗೆ ದಂಡ ವಿಧಿಸಿ ತೆಲಂಗಾಣ ಸರ್ಕಾರ ಆದೇಶಿದೆ. ಈ ಮೂವರು ಮಹಿಳಾ ಕಾನ್ಸ್ಟೆಬಲ್ಗಳಿಗೆ ತಲಾ 3,300 ರೂಪಾಯಿ ದಂಡ ವಿಧಿಸಲಾಗಿದೆ.ಇವರ ವಿರುದ್ದ ಇಲಾಖಾವಾರು ತನಿಖೆಗೆ ಆದೇಶಿಸಲಾಗಿದೆ. ಪೊಲೀಸರಿಗೂ ದಂಡ ವಿಧಿಸಿರುವುದರಿಂದ ಇದೀಗ ಪೊಲೀಸ್ ಇಲಾಖೆ ಭಾರಿ ಶ್ಲಾಘನೆಗೆ ಒಳಗಾಗಿದೆ.ಕಾನೂನು ಎಲ್ಲರಿಗೂ‌ ಒಂದೇ ಎಂಬುದನ್ನು ತೆಲಂಗಾಣ ಪೊಲೀಸರು ತೋರಿಸಿದ್ದಾರೆ. ಸಿಸಿಟಿವಿ ಕ್ಯಾಮೆರಾ ದೃಶ್ಯವಳಿಗಳನ್ನು ಆಧರಿಸಿ ದಂಡ ವಿಧಿಸಲಾಗಿದ್ದು, ಸಶಸ್ತ್ರ ವಿಭಾಗದ ಇಬ್ಬರು ಮಹಿಳಾ …

ಹೆಲ್ಮೆಟ್ ಇಲ್ಲದೆ ಮೂವರು ಲೇಡಿ  ಪೊಲೀಸರ ಸವಾರಿ,ದಂಡ ವಿಧಿಸಿದ ಪೊಲೀಸ್ ಇಲಾಖೆ Read More »

ಸಿಡಿ ಲೇಡಿ ಪ್ರಕರಣದಲ್ಲಿ ಬಹುದೊಡ್ಡ ಟ್ವಿಸ್ಟ್  |  ನನ್ನನ್ನು ಹನಿಟ್ರ್ಯಾಪ್ ಗೆ ಬಳಸಿಕೊಳ್ಳಲಾಗಿತ್ತು ಎಂದು ಸ್ಪೋಟಕ ಹೇಳಿಕೆ ಕೊಟ್ಟ ಸಿಡಿ ಹುಡುಗಿ !

ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಇದೀಗ ಬಹುದೊಡ್ಡ ದೊಡ್ಡ ಟ್ವಿಸ್ಟ್ ಪಡೆದುಕೊಂಡಿದ್ದು ನನ್ನನ್ನು ಹನಿಟ್ರ್ಯಾಪ್ ಗೆ ಬಳಿಸಿಕೊಂಡು ಕೃತ್ಯ ಎಸಗಿದ್ದಾರೆ ಎಂದು ಸಿಡಿ ಯುವತಿ ಎಸ್ಐಟಿ ಮುಂದೆ ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಈ ರೀತಿಯ ವರದಿಗಳನ್ನು ದೃಶ್ಯ ಮಾಧ್ಯಮಗಳು ಬಿತ್ತರಿಸುತ್ತಿವೆ. ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿರುವ ನರೇಶ್ ಮತ್ತು ಶ್ರವಣ್ ನನ್ನನ್ನು ಬಳಸಿಕೊಂಡು ಹನಿಟ್ರ್ಯಾಪ್ ಕೃತ್ಯ ಎಸಗಿದ್ದಾರೆ ಎಂದು ಎಸ್ಐಟಿ ತನಿಖಾಧಿಕಾರಿ ಕವಿತಾ ಮುಂದೆ ಸಿಡಿ ಯುವತಿ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ಮಾಧ್ಯಮಗಳಲ್ಲಿ …

ಸಿಡಿ ಲೇಡಿ ಪ್ರಕರಣದಲ್ಲಿ ಬಹುದೊಡ್ಡ ಟ್ವಿಸ್ಟ್  |  ನನ್ನನ್ನು ಹನಿಟ್ರ್ಯಾಪ್ ಗೆ ಬಳಸಿಕೊಳ್ಳಲಾಗಿತ್ತು ಎಂದು ಸ್ಪೋಟಕ ಹೇಳಿಕೆ ಕೊಟ್ಟ ಸಿಡಿ ಹುಡುಗಿ ! Read More »

ದ.ಕ : ಹೆದ್ದಾರಿ ದರೋಡೆ, ಹತ್ಯೆಗೆ ಸಂಚು ಪ್ರಕರಣ; ಟಿಬಿ ಗ್ಯಾಂಗ್‌ನ 8 ಆರೋಪಿಗಳು ವಶಕ್ಕೆ

ದ.ಕ ಜಿಲ್ಲೆಯಲ್ಲಿ ಹೆದ್ದಾರಿ ದರೋಡೆ ಮಾಡಲು ಸಂಚು ರೂಪಿಸಿದ್ದ ತೌಸೀರ್ ಬಾಸಿತ್ (ಟಿಬಿ ಗ್ಯಾಂಗ್) ತಂಡದ 8 ಮಂದಿ ಆರೋಪಿಗಳನ್ನು ಬಂಧಿಸುವ ಮೂಲಕ ಹಣಕಾಸಿನ ವೈಷಮ್ಯದಲ್ಲಿ ನಡೆಯಬಹುದಾಗಿದ್ದ ಕೊಲೆ ಸಂಚನ್ನೂ ವಿಫಲಗೊಳಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾಹಿತಿ ನೀಡಿದ ಅವರು, ಇಂದು ಮುಂಜಾನೆಯ ವೇಳೆ ಕೊರೋನ ನೈಟ್ ಕರ್ಫ್ಯೂನಲ್ಲಿದ್ದಾಗ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಉಲಾಯಿಬೆಟ್ಟು ಗ್ರಾಮದ ಪರಾರಿ ಎಂಬಲ್ಲಿ ಮಾರಕಾಯುಧಗಳಿಂದ ಕೂಡಿದ್ದ ಇನ್ನೋವಾ ಕಾರಿನಲ್ಲಿ ರಸ್ತೆಯಲ್ಲಿ ಹಾದು ಹೋಗುತ್ತಿದ್ದ …

ದ.ಕ : ಹೆದ್ದಾರಿ ದರೋಡೆ, ಹತ್ಯೆಗೆ ಸಂಚು ಪ್ರಕರಣ; ಟಿಬಿ ಗ್ಯಾಂಗ್‌ನ 8 ಆರೋಪಿಗಳು ವಶಕ್ಕೆ Read More »

ಕುತ್ತಿಗೆಗೆ ಶಾಲು ಸಿಲುಕಿ ಬಾಲಕಿ ಮೃತ್ಯು , ಪೊಲೀಸರಿಗೆ ದೂರು

ಮಂಗಳೂರು : ಕುತ್ತಿಗೆಗೆ ಶಾಲು ಸಿಲುಕಿ ಬಾಲಕಿಯೋರ್ವಳು ಮೃತಪಟ್ಟ ಘಟನೆ ಕೋಟೆಕಾರು ಎಂಬಲ್ಲಿ ರವಿವಾರ ನಡೆದಿದೆ. ಕಾಸರಗೋಡು ಎಡನೀರು ನಿವಾಸಿ ಕೃಷ್ಣ ನಾಯ್ಕ್ ಎಂಬವರ ಪುತ್ರಿ ಮೇಘಶ್ರೀ (13) ಮೃತ ಬಾಲಕಿ. 8ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದ ಈಕೆ ಕೋಟೆಕಾರಿನ ಸಂಬಂಧಿಕರ ಮನೆಯಲ್ಲಿ ಇದ್ದು, ಕುತ್ತಿಗೆಗೆ ಶಾಲು ಸಿಲುಕಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಉಳ್ಳಾಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪಾದಚಾರಿಗೆ ಬೈಕ್ ಡಿಕ್ಕಿ ಸಾವು

ಕಾಪು: ಪಾದಚಾರಿಗೆ ಬೈಕ್ ಡಿಕ್ಕಿ ಹೊಡೆದು ಮೃತ ಪಟ್ಟ ಘಟನೆ ಎರ್ಮಾಳು ಬಡಾ ಶ್ರೀ ಜನಾರ್ಧನ ದೇವಸ್ಥಾನದ ಬಳಿ ಭಾನುವಾರ ರಾತ್ರಿ ನಡೆದಿದೆ. ಅದಮಾರಿನ ನಿವಾಸಿ ವಸಂತ ದೇವಾಡಿಗ(52 ) ಎಂಬವರು ಮೃತಪಟ್ಟ ದುರ್ದೈವಿ. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಜನರು ಸಹಕರಿಸುತ್ತಿಲ್ಲದ ಕಾರಣ ಲಾಕ್ ಡೌನ್ ಅನಿವಾರ್ಯ ? | ಏನಂದರು ಮುಖ್ಯಮಂತ್ರಿ ಯಡಿಯೂರಪ್ಪ ?!

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಒಂದು ವೇಳೆ ಲಾಕ್ ಡೌನ್ ಮಾಡುವ ಅನಿವಾರ್ಯತೆ ಎದುರಾದರೆ ಲಾಕ್ ಡೌನ್ ಮಾಡಲಾಗುತ್ತದೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಿ.ಎಸ್. ಯಡಿಯೂರಪ್ಪ, ಕೊರೊನಾ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಜನರು ಸಹಕರಿಸದಿದ್ದರೆ ಲಾಕ್ ಡೌನ್ ಅನಿವಾರ್ಯ ಆಗುತ್ತದೆ. ಈ ಬಗ್ಗೆ ಸರ್ವಪಕ್ಷ ಪಕ್ಷ ಸಭೆ ಕರೆದು ಲಾಕ್ ಡೌನ್ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಕೊರೊನಾ ನಿಯಂತ್ರಣಕ್ಕೆ …

ಜನರು ಸಹಕರಿಸುತ್ತಿಲ್ಲದ ಕಾರಣ ಲಾಕ್ ಡೌನ್ ಅನಿವಾರ್ಯ ? | ಏನಂದರು ಮುಖ್ಯಮಂತ್ರಿ ಯಡಿಯೂರಪ್ಪ ?! Read More »

ಮಂಗಳೂರಿನಲ್ಲಿ ಜಿಲ್ಲೆಯಲ್ಲಿ ನೈಟ್ ಕರ್ಫ್ಯೂ ಜಾರಿ | ಏಪ್ರಿಲ್ 20 ರ ವರೆಗೆ ನೈಟ್ ಕರ್ಫ್ಯೂ

ರಾಜ್ಯ ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಲಾಗುತ್ತಿದೆ. ಏ.20ರ ವರೆಗೆ ರಾತ್ರಿ 10ರಿಂದ ಬೆಳಗ್ಗೆ 5ರ ವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿರುತ್ತದೆ. ಅಗತ್ಯ ವಸ್ತುಗಳನ್ನು ಹೊರತುಪಡಿಸಿ, ಉಳಿದೆಲ್ಲ ಸಂಚಾರಕ್ಕೂ ನಿರ್ಬಂಧ ಹೇರಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದರು. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿಪತ್ತು ನಿರ್ವಹಣೆ ಕಾಯ್ದೆಯ ಅನ್ವಯ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಏಪ್ರಿಲ್ 20 ರವರೆಗೆ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 …

ಮಂಗಳೂರಿನಲ್ಲಿ ಜಿಲ್ಲೆಯಲ್ಲಿ ನೈಟ್ ಕರ್ಫ್ಯೂ ಜಾರಿ | ಏಪ್ರಿಲ್ 20 ರ ವರೆಗೆ ನೈಟ್ ಕರ್ಫ್ಯೂ Read More »

error: Content is protected !!
Scroll to Top